‘
ಹಿಂದೆ ಕ್ರೈಸ್ತರು ಬಡವರ ಅಸಹಾಯಕತೆ ಮತ್ತು ಅವರ ಮೌಢ್ಯತೆಯನ್ನು ಉಪಯೋಗಿಸಿ ಮಾಡುತ್ತಿರುವ ಮತಾಂತರ ಅವರ ಪಾಶ್ಚಿಮಾತ್ಯರ ಸಂಸ್ಕೃತಿ, ಅವರ ಕ್ರೂರ ತನವನ್ನು ದಿಕ್ಕರಿಸುತ್ತಾರೆ.
ಕಥಾನಾಯಕ ತನ್ನ ಧರ್ಮವನ್ನು ಪೂಜಿಸುವಂತವ ಆದರೆ ಕ್ರೈಸ್ತ ಹುಡುಗಿಯ ಪ್ರೀತಿಯಲ್ಲಿ ಸೋತು ಇಬ್ಬರು ಬದುಕಲಾರದ ಪರಿಸ್ಥಿತಿ ವದಗಿದಾಗ ನಾಯಕ ಕ್ರೈಸ್ತಮತಕ್ಕೆ ಮತಾಂತರಣಗೊಳ್ಳುತ್ತಾನೆ ಕಾರಣ ಹಿಂದು ಧರ್ಮ ನಾಯಕಿಯ ಮತಾಂತರಕ್ಕೆ ಒಪ್ಪವದಿಲ್ಲ. ಮತಾಂತರಣಗೊಂಡ ನಾಯಕನ ತೊಳಲಾಟ ಆತನ ಸಂಕಟ ವನ್ನು ಅಚ್ಚುಕಟ್ಟಾಗಿ ಬಿಚ್ಚಿಟ್ಟಿದ್ದಾರೆ. ಮತಾಂತರ ಹೊಂದುವಾಗ ನಾಯಕನಲ್ಲಿ ಮೂಡಿದ್ದ ಧರ್ಮದ ಸಮಾನತೆಯ ಮನೋಭಾವ ಆ ಕ್ಷಣ ಮಾತ್ರ. ಹಿಂದು ಧರ್ಮವು ದೇವರನ್ನು ಕಾಣಲು ಎಲ್ಲಾ ಮಾರ್ಗದಿಂದಲು ಸಾಧ್ಯ ಎಂದು ಸಾರುತ್ತದೆ ಆದರೆ ಕ್ರಿಶ್ಚಿಯನ್ನರು ಏಸುವೆ ಎಲ್ಲ ಎನ್ನುತ್ತಾರೆ ಈ ಅಂತರವನ್ನು ತಿಳಿಹೇಳುತ್ತಾ ತನ್ನದೇ ಆದ ಕಲ್ಪನಾಲೋಕದಲ್ಲಿ ಕರೆದೊಯ್ಯುವ ಅದ್ಭುತವಾದ ಪುಸ್ತಕ.