ಕೊಪ್ಪ : ಕೊಪ್ಪ ಉತ್ಸವ ರಂಗೇರಿದೆ. ಬಡವರ ಬಂಧು ಸಾಂಸ್ಕೃತಿಕ ವೇದಿಕೆಯ ಸಾರಥ್ಯದಲ್ಲಿ ಕೊಪ್ಪ ಉತ್ಸವ ಜ.17 ರಿಂದ 21ರವರೆಗೆ ಬೆಳಗ್ಗೆ 10ರಿಂದ ರಾತ್ರಿ 10ವರೆಗೆ ಐದು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ‘ಬಡವರ ಬಂಧು ಸಾಂಸ್ಕೃತಿಕ ವೇದಿಕೆ ಕಳೆದ 10 ವರ್ಷಗಳಿಂದ ಕೊಪ್ಪದಲ್ಲಿ ನಿರಂತರವಾಗಿ ಅದ್ಧೂರಿ ‘ಸಾಂಸ್ಕೃತಿಕ ಉತ್ಸವ’ಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು, ಇದೀಗ 11ನೇ ವರ್ಷದ ಅದ್ಧೂರಿ “ಕೊಪ್ಪ ಉತ್ಸವವನ್ನು ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಎಲ್ಲಾ ವಯೋಮಾನದವರ ತನು ಮನತಣಿಸುವ, ಭರಪೂರ ಮನರಂಜನೆ ನೀಡುವ ವಿಶೇಷ ಕಾರ್ಯಕ್ರಮ ಇದಾಗಬೇಕೆಂಬ ಉದ್ದೇಶದಿಂದ ಶ್ರೀ ಅನ್ನಪೂರ್ಣ ಲೇಔಟ್ ಶ್ರೀ ಗುತ್ಯಮ್ಮ ದೇವಸ್ಥಾನ ಸಮೀಪ ಕೊಪ್ಪದಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಬೃಹತ್ ಎಲ್.ಇ.ಡಿ. ಪರದೆ, ಹ್ಯಾಂಗಿಂಗ್ ಸೌಂಡ್ ಸಿಸ್ಟಮ್ ಮುಂತಾದ ಅತ್ಯಾಧುನಿಕ ವ್ಯವಸ್ಥೆಯ ಭವ್ಯ ವೇದಿಕೆಯಲ್ಲಿ ನಾಡಿನ ಗಣ್ಯಾತಿಗಣ್ಯರು, ಕಿರುತರೆ, ಸಿನೆಮಾ ತಾರೆಯರು ಭಾಗವಹಿಸುವ ಸಭಾ ಕಾರ್ಯಕ್ರಮ, ಸ್ಥಳೀಯ ಹಾಗೂ ನಾಡಿನ ಹೆಸರಾಂತ ಕಲಾವಿದರ ಗಾನ ಸುಧೆ, ನೃತ್ಯ ಸಂಭ್ರಮ, ಹಾಸ್ಯ ಸಂಭ್ರಮ, ಕರಾವಳಿ ಯಕ್ಷಗಾನದ ಗಾನ ನೃತ್ಯ ವೈಭವ ಮುಂತಾದ ವಿಭಿನ್ನ, ಮನರಂಜನಾ ಕಾರ್ಯಕ್ರಮ ನಡೆಯಲಿವೆ.
ತಾಂತ್ರಿಕತೆಯ ವಿಸ್ಮಯ ಲೋಕವನ್ನೇ ಸೃಷ್ಟಿಸುವ ಬೃಹತ್ ‘ಅಮ್ಯೂಸ್ ಮೆಂಟ್ ಪಾರ್ಕ್’ನಲ್ಲಿ ಜೈಂಟ್ ವೀಲ್, ಕ್ರಾಸ್ ವೀಲ್ ಮಹಾರಾಜ ಟ್ರೈನ್, ಬನಾನ ಬೋಟ್, ಜೈಂಟ್ ವೀಲ್, ಕ್ರಾಸ್ ವೀಲ್, ಬಾಂಬೆ ಹಪ್ಪಳ, ಕೇರಳ ಹಲ್ವ, ಡಿಸ್ಕೋ ವೀಲ್ ಆಭರಣಗಳು, ವಿವಿಧ ಬಗೆಯ ಉಡುಪುಗಳು, ನಾಡಿನ ಹೆಸರಾಂತ ಸಾಹಿತಿಗಳ ಸಾಹಿತ್ಯಗಳು, ವೈಚಾರಿಕ, ವೈಜ್ಞಾನಿಕ ಪುಸ್ತಕಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುವ ಪುಸ್ತಕ ಮಳಿಗೆಗಳು, ಗೃಹಿಣಿಯರ ಅಲಂಕಾರಿಕ ವಸ್ತುಗಳು, ಹಣ್ಣು ಹಂಪಲು ಬಾಂಬೆ ಹಪ್ಪಳ, ಬಿಸಿ ಹೋಳಿಗೆ ಮಳಿಗೆಗಳು, ಖಾದ್ಯ ಪ್ರಿಯರಿಗಾಗಿ ಆಹಾರ ಮೇಳ, ಸಸ್ಯಾಹಾರ ಮತ್ತು ಮಾಂಸಾಹಾರ ಖಾದ್ಯಗಳ ಮಳಿಗೆಗಳು ಸೇರಿದಂತೆ 100ಕ್ಕೂ ಹೆಚ್ಚು ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ತೆರೆದುಕೊಳ್ಳಲಿವೆ. ಜನವರಿ 17-21, 2025 5 ದಿನಗಳ ಕಾಲ ನಡೆಯುವ ‘ಕೊಪ್ಪ ಉತ್ಸವ’ ದಲ್ಲಿ ಸರ್ವರೂ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಬಡವರ ಬಂಧು ಸಾಂಸ್ಕೃತಿಕ ವೇದಿಕೆಯ ಸಿದ್ದಿಕ್ ಅವರು ಕೋರಿದ್ದಾರೆ.


Leave a reply