ಭಾರತದಲ್ಲಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಿವೆ ಎಂದು ಜರ್ಮನಿಯ ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಟೀಕಿಸಿದ್ದಾರೆ. ಮರ್ಕೆಲ್ ಅವರು ಇತ್ತೀಚೆಗೆ ಬಿಡುಗಡೆಯಾದ ಫ್ರೀಡಂ ಮೆಮೊರೀಸ್ (1951-2021) ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಹಿಂದುತ್ವ ಗುಂಪುಗಳು ಇತರ ಧರ್ಮದ ಜನರನ್ನು ವಿಶೇಷವಾಗಿ ಕ್ರಿಶ್ಚಿಯನ್ ಮತ್ತು ಮುಸ್ಲಿಮರನ್ನು ಗುರಿಯಾಗಿಸುತ್ತಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
2015ರ ಎಪ್ರಿಲ್ನಲ್ಲಿ ಜರ್ಮನಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೋದಿಯವರನ್ನು ಭೇಟಿಯಾಗಿ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದೆ ಆದರೆ ಮೋದಿ ಅದನ್ನು ಕಟುವಾಗಿ ತಿರಸ್ಕರಿಸಿದ್ದರು ಎಂದರು. ಅವರ ಆರೋಪಗಳನ್ನು ಮೋದಿ ಅಲ್ಲಗಳೆದಿದ್ದರೂ ವಾಸ್ತವ ಸ್ಥಿತಿ ಬೇರೆಯೇ ಇದೆ ಎಂದಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅವರ ಕಳವಳ ಹಾಗೆಯೇ ಉಳಿದಿದೆ ಎಂದು ಮರ್ಕೆಲ್ ಹೇಳಿದರು. ಯಾವುದೇ ಪ್ರಜಾಪ್ರಭುತ್ವಕ್ಕೆ ಧರ್ಮದ ಸ್ವಾತಂತ್ರ್ಯ ಮುಖ್ಯ ಎಂದು ಅವರು ಒತ್ತಿ ಹೇಳಿದರು.
ಏಪ್ರಿಲ್ 2015 ರಲ್ಲಿ ಜರ್ಮನಿಯಲ್ಲಿ ಮೋದಿಯೊಂದಿಗಿನ ತನ್ನ ಮೊದಲ ಭೇಟಿಯನ್ನು ವಿವರಿಸಿದ ಮರ್ಕೆಲ್, ‘ಅವರಿಗೆ (ಮೋದಿ) ವಿಶುವಲ್ ಎಫೆಕ್ಟ್ ಎಂದರೆ ಬಹಳ ಉತ್ಸಾಹ’ ಎಂದರು. ಮೋದಿ ತನ್ನ ಚುನಾವಣಾ ಪ್ರಚಾರದ ಕುರಿತು ಮಾರ್ಕೆಲ್ ರೊಂದಿಗೆ ಮಾತನಾಡುತ್ತಾ, ‘ತಾನು ಸ್ಟುಡಿಯೋದಲ್ಲಿ ಮಾತನಾಡಿದ ವಿಷಯವನ್ನು, ತನ್ನ ಚಿತ್ರವನ್ನು 50 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ‘ಹಾಲೋಗ್ರಾಮ್’ ಗಳಾಗಿ ಪ್ರದರ್ಶಿಸಲಾಗಿದೆ. 2014 ರ ಸಾರ್ವತ್ರಿಕ ಚುನಾವಣಾ ಪ್ರಚಾರದಲ್ಲಿ ಮೋದಿಯವರು ಹೊಲೊಗ್ರಾಮ್ ಅನ್ನು ಹೆಚ್ಚು ಬಳಸಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿಯಾದ ಬಗ್ಗೆ ಮರ್ಕೆಲ್ ವಿವರಿಸಿದರು. ಅವರು ಮನಮೋಹನ್ ಸಿಂಗ್ ಅವರನ್ನು ಭಾರತದ ಮೊದಲ ಹಿಂದೂಯೇತರ ಪ್ರಧಾನಿ ಎಂದು ಬಣ್ಣಿಸಿದರು, ವ್ಯಾಪಕ ಜಾಗತಿಕ ಅನುಭವ ಹೊಂದಿರುವ ಅರ್ಥಶಾಸ್ತ್ರಜ್ಞ. ಭಾರತದ ಆಗಿನ 120 ಕೋಟಿ ಜನಸಂಖ್ಯೆಯ ಮೂರನೇ ಎರಡರಷ್ಟು ಜನರ ಜೀವನ ಮಟ್ಟವನ್ನು ಸುಧಾರಿಸುವ ಬಗ್ಗೆ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ಅವರು ಸಾಕಷ್ಟು ಮಾತನಾಡಿದರು. ಭಾರತದ ಜನಸಂಖ್ಯೆಯು ಜರ್ಮನಿಯ ಜನಸಂಖ್ಯೆಗಿಂತ (8 ಕೋಟಿ) ಹಲವು ಪಟ್ಟು ಹೆಚ್ಚಾಗಿದೆ. ಅವರೊಂದಿಗಿನ ನನ್ನ ಸಂಭಾಷಣೆಯಲ್ಲಿ, ಅಭಿವೃದ್ಧಿಶೀಲ ದೇಶಗಳ ಬಗ್ಗೆ ಶ್ರೀಮಂತ ದೇಶಗಳ ವರ್ತನೆಯ ಬಗ್ಗೆ ಅವರ ಅನುಮಾನಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಮನಮೋಹನ್ ಸಿಂಗ್ ಅವರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಉಪಖಂಡದ ತಮ್ಮ ದೇಶದ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಮಾತನಾಡಿದರು. ಭಾರತದ ಸಂವಿಧಾನವು 22 ಅಧಿಕೃತ ಭಾಷೆಗಳನ್ನು ಗುರುತಿಸಿದ ವಿಷಯವನ್ನು ಮತ್ತು ವಿವಿಧತೆಯಲ್ಲಿ ಏಕತೆಯ ಮಹತ್ವದ ಬಗ್ಗೆ ಮಾತನಾಡಿದರು ಎಂದು ಮರ್ಕೆಲ್ ಉಲ್ಲೇಖಿಸಿದ್ದಾರೆ.
Leave a reply