ಕೊಪ್ಪ : ಮುಂದಿನ ತಿಂಗಳು ಮಂಡ್ಯದಲ್ಲಿ ನೆಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಚರಿಸುತ್ತಿರುವ ಕನ್ನಡ ರಥವು ಭಾನುವಾರ ಕೊಪ್ಪಕ್ಕೆ ಆಗಮಿಸಿತು.
ಎನ್.ಆರ್.ಪುರ ಕಡೆಯಿಂದ ತಾಲೂಕಿನ ಕುದುರೆಗುಂಡಿಗೆ ಬಂದ ರಥಯಾತ್ರೆಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀಹರ್ಷ ಇವರ ಅದ್ಯಕ್ಷತೆಯಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಜ್ಜಂಪುರ ಸೂರಿ ಶ್ರೀನಿವಾಸ್, ಇಮ್ರಾಮ್ ಅಹ್ಮದ್ ಬೇಗ್ ಅವರನ್ನು ಒಳಗೊಂಡ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಎಂ.ಎಸ್.ದ್ಯಾವೇಗೌಡ ಸರ್ಕಲ್ ಬಳಿ ಪಟ್ಟಣ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭುವನೇಶ್ವರಿ ದೇವಿ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತಿ ಅದ್ಯಕ್ಷೆ ಗಾಯತ್ರಿ ವಸಂತ್, ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಓಣಿತೋಟ ರತ್ನಾಕರ್, ಕೊಪ್ಪ ತಾಲ್ಲೂಕು ಮಹಿಳಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆದ ಶ್ರೀಮತಿ ಮೈತ್ರಾ ಗಣೇಶ್, ಪಂಚಾಯಿತಿ ಸದಸ್ಯರಾದ ಎಂ ಸಿ ಅಶೋಕ್, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯರಾದ ರಶೀದ್, ವಿಜಿಕುಮಾರ್, ನಾಮ ನಿರ್ದೇಶಿತ ಸದಸ್ಯ ಮೊಹಮ್ಮದ್ ಗೌಸ್, ಉಪ ತಹಶಿಲ್ದಾರ್ ನಾಗರಾಜ್, ಸಿರಿಗನ್ನಡ ವೇದಿಕೆಯ ಚಾವಲ್ಮನೆ ಸುರೇಶ ನಾಯಕ್ ಹಾಗೂ ತಾಲೂಕ್ ಕಚೇರಿಯ ರತ್ನಾಕರ್, ಅಭಿಲಾಷ್, ಮಧು, ಸೀತಾರಾಮ್,ರಮೇಶ್, ಶಂಕರಪ್ಪ, ದುರ್ಗೇಶ್, ಸುಧಾಕರ್, ರಾಜಶಂಕರ್, ಸೊಂತೊಷ್ ಕುಲಾಸ್, ಗೋಪಾಲ್ ಗೌಡ ಇನ್ನಿತರರು ಉಪಸ್ಥಿತರಿದ್ದರು.
Leave a reply