ನ್ಯೂಡೆಲ್ಲಿ : ಎನ್ ಡಿಎಯಲ್ಲಿ ಪ್ರಮುಖ ಪಾಲುದಾರರಾಗಿರುವ ತೆಲುಗು ದೇಶಂ ಮತ್ತು ಜೆಡಿಯು ಪಕ್ಷಗಳು ತಮ್ಮ ಹಿಂದೂ ಓಟ್ ಬ್ಯಾಂಕ್ ರಾಜಕೀಯವನ್ನು ಯಥಾಸ್ಥಿತಿಯಲ್ಲಿಡಲು ಯತ್ನಿಸುತ್ತಿವೆ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ತಿಳಿಯುತ್ತಿದೆ. ತಿರುಪತಿ ಲಡ್ಡು ವಿವಾದವನ್ನು ತೆಲುಗು ದೇಶಂ ಪಕ್ಷ ತನ್ನ ಪರವಾಗಿ ಬಳಸಿಕೊಳ್ಳುತ್ತಿದೆ. ಲಡ್ಡೂಗಳಲ್ಲಿ ಪ್ರಾಣಿಗಳ ಕೊಬ್ಬು ಇದೆ ಎಂಬ ಆರೋಪ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರಿಂದ ಹಿಡಿದು ಕೆಳಹಂತದ ಕಾರ್ಯಕರ್ತರವರೆಗೂ ಕೇಳಿ ಬರುತ್ತಿದೆ. ಆ ರಾಜ್ಯದಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಜಗನ್ ಮೋಹನ ರೆಡ್ಡಿ ಆಡಳಿತದಲ್ಲಿ ತಿರುಪತಿ ಲಡ್ಡುವಿಗೆ ಪ್ರಾಣಿಗಳ ಕೊಬ್ಬು ಬೆರೆಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಮೈತ್ರಿಕೂಟದ ನಾಯಕರು ತಕರಾರು ಎತ್ತಿದ್ದಾರೆ.
ಧೀರ್ಘಕಾಲದ ಹಿತಾಸಕ್ತಿಗಾಗಿ..
ತಿರುಪತಿ ಲಡ್ಡು ವಿವಾದ ಮೇಲ್ನೋಟಕ್ಕೆ ಗಮನಿಸಿದರೆ.. ಜಗನ್ ಮೋಹನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡಂತೆ ಕಂಡರೂ.. ಸುದೀರ್ಘಾವಧಿಯ ಲಾಭಕ್ಕಾಗಿ ತಮ್ಮ ಹಿಂದೂ ಓಟ್ ಬ್ಯಾಂಕ್ ಅನ್ನು ಬಲಪಡಿಸುವ ಪ್ರಯತ್ನದ ಭಾಗವಾಗಿ ನಡೆಯುತ್ತಿದೆ ಎಂದು ಟಿಡಿಪಿ ಮೂಲಗಳು ಹೇಳುತ್ತಿವೆ. ಜಗನ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಚಂದ್ರಬಾಬು ಆಯಕಟ್ಟಿನ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅವರು ಕೇವಲ ಲಡ್ಡೂ ವಿವಾದವನ್ನು ಮಾತ್ರ ಎತ್ತುತ್ತಿರುವುದಲ್ಲ. ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲ ಪ್ರವೇಶಿಸುವಾಗ ಕ್ರಿಶ್ಚಿಯನ್ ಆಗಿರುವ ಜಗನ್ ಯಾವುದೇ ಡಿಕ್ಲರೇಷನ್ ನೀಡದಿರುವುದನ್ನೂ ಪ್ರಸ್ತಾಪಿಸಿದ್ದಾರೆ. ಈ ವಿಚಾರಗಳನ್ನು ಮುಂದಿಟ್ಟುಕೊಂಡು ಜಗನ್ ಚೇತರಿಸಿಕೊಳ್ಳುದಂತೆ ತಡೆಯಲು ಚಂದ್ರಬಾಬು ಪ್ರಯತ್ನಿಸುತ್ತಿದ್ದಾರೆ. ಚಂದ್ರಬಾಬು ಅವರ ವ್ಯೂಹತಂತ್ರದ ಹಿಂದೆ ರಾಜಕೀಯ ನಡೆಗಳಿವೆ ಎಂದು ನಾವು ಭಾವಿಸುವುದಿಲ್ಲ ಎಂದು ಟಿಡಿಪಿ ನಾಯಕರು ಹೇಳುತ್ತಲೇ, ರಾಜಕೀಯ ಪ್ರಯೋಜನವನ್ನು ಅಂಗೀಕರಿಸುತ್ತಿದ್ದಾರೆ.
ಈಗಾಗಲೇ ಹಿಂದೂಗಳ ಉತ್ತಮ ಬೆಂಬಲವಿರುವುದರಿಂದ ಈಗ ಹೊಸದಾಗಿ ಮಾಡುವುದೇನೂ ಇಲ್ಲ. ಆದರೆ ತಮ್ಮ ವಿರೋಧಿಗಳು ಮೇಲುಗೈ ಸಾಧಿಸುವುದನ್ನು ತಡೆಯುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಚಂದ್ರಬಾಬು ಅವರ ಕಾರ್ಯವೈಖರಿಯಿಂದ ಪಕ್ಷಕ್ಕೆ ಲಾಭವಾಗಲಿದೆ ಎಂದು ಟಿಡಿಪಿ ಶಾಸಕರೊಬ್ಬರು ಹೇಳಿದ್ದಾರೆ. ಚಂದ್ರಬಾಬು ಅವರ ಕಾರ್ಯವೈಖರಿ ಆಂಧ್ರಪ್ರದೇಶದ ಹಿಂದೂಗಳಿಗೆ ಮಾತ್ರವಲ್ಲದೆ ವಿಶ್ವದ ಎಲ್ಲಾ ಹಿಂದೂಗಳಿಗೆ ಧೈರ್ಯ ತುಂಬಿದೆ ಎಂದು ಟಿಡಿಪಿ ಶಾಸಕ ರಘುರಾಮ ಕೃಷ್ಣರಾಜು ಶ್ಲಾಘಿಸಿದರು.
ಬಿಜೆಪಿಯ ಮಿತ್ರಪಕ್ಷ ಮತ್ತು ಆಂಧ್ರಪ್ರದೇಶದ ಆಡಳಿತ ಮೈತ್ರಿಕೂಟದ ಪಾಲುದಾರರಾಗಿರುವ ಜನಸೇನಾ ಪಕ್ಷವೂ ಸನಾತನ ಧರ್ಮದ ಘೋಷಣೆಯನ್ನು ಕೈಗೆತ್ತಿಕೊಂಡಿದೆ. ಆ ಪಕ್ಷದ ನಾಯಕ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರಸ್ತುತ 11 ದಿನಗಳ ‘ಪ್ರಾಯಶ್ಚಿತ್ತ ದೀಕ್ಷಾ’ ಭಾಗವಾಗಿ ತಿರುಪತಿಯ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ತಪ್ಪಿಗೆ ಕ್ಷಮೆಯಾಚಿಸುತ್ತೇನೆ. ವಿಜಯವಾಡದ ಕನಕದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿ ಮೆಟ್ಟಿಲು ತೊಳೆದರು. ದೇವಸ್ಥಾನಗಳ ವ್ಯವಹಾರಗಳನ್ನು ನೋಡಿಕೊಳ್ಳಲು ಸನಾತನ ಧರ್ಮ ರಕ್ಷಕ ಮಂಡಳಿಯನ್ನು ಸ್ಥಾಪಿಸಲು ಕೋರಿದರು. ಜಗನ್ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ಪ್ರತಿಭಟಿಸಿ 2020 ರಲ್ಲಿ ಧರ್ಮ ಪರಿರಕ್ಷಣಾ ದೀಕ್ಷೆಯನ್ನು ಕೈಗೊಳ್ಳಲು ಪವನ್ ಮತ್ತು ಬಿಜೆಪಿ ನಾಯಕರು ಕರೆ ನೀಡಿದ್ದರು. ಟಿಡಿಪಿ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎನ್ಟಿ ರಾಮರಾವ್ ಅವರನ್ನು ಅನುಕರಿಸುವ ಪವನ್ ಅವರ ಪ್ರಯತ್ನಗಳನ್ನು ನಾವು ಗಮನಿಸುತ್ತಿದ್ದೇವೆ ಎಂದು ಟಿಡಿಪಿ ಮುಖಂಡರು ಹೇಳಿದ್ದಾರೆ.
ಪವನ್ ಕಾರ್ಯವೈಖರಿ ಕಂಡು ಬಿಜೆಪಿಯಲ್ಲಿ ಸಂಭ್ರಮ..
ಆಂದ್ರಪ್ರದೇಶದಲ್ಲಿ ಪಕ್ಷಕ್ಕೆ ಸಂಘಟನಾತ್ಮಕವಾಗಿಯಾಗಲಿ ಮತ್ತು ನಾಯಕತ್ವ ರೀತಿಯಲ್ಲಾಗಲಿ ಸಾಕಷ್ಟು ಶಕ್ತಿ ಇಲ್ಲದಿದ್ದರೂ ಪವನ್ ಕಲ್ಯಾಣ್ ಅವರು ಕೇಂದ್ರ ನಾಯಕತ್ವದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಮತ್ತು ಅವರು ಯಾವ ಧೋರಣೆಯಲ್ಲಿದ್ದಾರೋ ಅದನ್ನೇ ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿ ಸಂಭ್ರಮಿಸುತ್ತಿದೆ. ಪಕ್ಷದ ಬೆಂಬಲಿಗರಲ್ಲಿ ಅವರು ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ. ನರೇಂದ್ರ ಮೋದಿ ಸೇರಿದಂತೆ ಪಕ್ಷದ ನಾಯಕತ್ವವು ಅವರ ಮೇಲಿನ ಅಭಿಮಾನ ಮತ್ತು ಗೌರವವನ್ನು ಎಂದಿಗೂ ಮರೆಮಾಚಲಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ನಡೆದ ಮೊದಲ ಎನ್ಡಿಎ ಸಭೆಯಲ್ಲಿ ಪವನ್ ಉದ್ದೇಶಿಸಿ ಮಾತನಾಡಿದ ಅವರು, ‘ಅವರು ಪವನ್ ಅಲ್ಲ. ಬಿರುಗಾಳಿ ಎಂದು ಮೋದಿ ಹೇಳಿದ್ದನ್ನು ಸ್ಮರಿಸಿದರು.
ನಿತೀಶ್ ನಡೆಯಿಂದ ಬಿಜೆಪಿಗೆ ಆತಂಕ
ಬಿಹಾರದ ನಾಯಕ ನಿತೀಶ್ ಕುಮಾರ್ ಅವರು ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿಯನ್ನು ಹೊಗಳಿದರು. ಸೀತಾಮರ್ಹಿ-ಅಯೋಧ್ಯೆ ನಡುವೆ ನೇರ ರೈಲು ಮಾರ್ಗ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ನಿತೀಶ್ ಅವರ ಈ ನಿಲುವು ಬಿಹಾರದ ಬಿಜೆಪಿ ವಲಯದಲ್ಲಿ ಆತಂಕ ಮೂಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಪಡೆದಿರುವ ನಿತೀಶ್ ಕುಮಾರ್ ಈಗ ತಮ್ಮ ಹಿಂದೂ ಓಟ್ ಬ್ಯಾಂಕ್ ಮೇಲೆ ದಾಳಿ ಮಾಡುತ್ತಾರೆ ಎಂಬ ಭಯ ಬಿಜೆಪಿಯ ಕೆಲ ನಾಯಕರಿಗೆ ಇದೆ. ಕಳೆದ ಎಂಟು ತಿಂಗಳಲ್ಲಿ ಅವರು ಈ ರೀತಿಯ ಹೇಳಿಕೆಗಳನ್ನು ನೀಡಿಲ್ಲ. ಅದು ಓಟ್ ಬ್ಯಾಂಕ್ ಅನ್ನು ದಮನಿಸುವ ಪ್ರಯತ್ನವಾಗಿರಬಹುದು. ಶ್ರೀರಾಮನ ಕೇಂದ್ರಿತವಾಗಿ ಬಿಜೆಪಿ ನಡೆಸುತ್ತಿರುವ ರಾಜಕೀಯಕ್ಕೆ ವ್ಯತಿರಿಕ್ತವಾಗಿ ಸೀತಾದೇವಿಯ ಕೇಂದ್ರಿತವಾಗಿ ನಿತೀಶ್ ಹೇಳಿಕೆ ನೀಡುವುದು ಗಮನಾರ್ಹ.
ವೈಸಿಪಿ – ಪೂಜೆಗಳು
ಲಡ್ಡು ವಿವಾದದಲ್ಲಿ ಚಂದ್ರಬಾಬು ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಶಂಕಿಸಿರುವ ವೈಸಿಪಿ ಕೂಡ ಅಖಾಡಕ್ಕಿಳಿದಿದೆ. ಚಂದ್ರಬಾಬು ಅವರಿಂದ ಹಾನಿಗೊಳಗಾದ ತಿರುಮಲದ ಪಾವಿತ್ರ್ಯತೆಯನ್ನು ಮರುಸ್ಥಾಪಿಸಲು ಶನಿವಾರ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜೆ ನಡೆಸುವಂತೆ ವೈಸಿಪಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಕರೆ ನೀಡಿದ್ದಾರೆ. ಚಂದ್ರಬಾಬು ಅವರ ದುಷ್ಟ ಪ್ರಚಾರವನ್ನು ಹಿಮ್ಮೆಟ್ಟಿಸಬೇಕು ಎಂದು ಪಕ್ಷದ ಶ್ರೇಣಿಗಳಿಗೆ ಸಲಹೆ ನೀಡಿದರು.
Leave a reply