ಕೊಪ್ಪ : ಸೆಪ್ಟೆಂಬರ್, 23 ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕೊಪ್ಪ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ಪೌರ ಕಾರ್ಮಿಕರಿಗೆ ಇಂದು ಒಂದು ದಿನದ ರಜೆ ನೀಡಿ, ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೊಪ್ಪ ಎಲ್ಐಸಿ ಕಛೇರಿ ಸಮೀಪದ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ಎಲ್ಲಾ ಪೌರ ಕಾರ್ಮಿಕರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಇವರೊಂದಿಗೆ ಪಟ್ಟಣ ಪಂಚಾಯತಿಯ ಅದ್ಯಕ್ಷರು ಮತ್ತು ಚುನಾಯಿತ ಪ್ರತಿನಿಧಿಗಳು ಮತ್ತು ಪ.ಪಂ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾತ್ ನೀಡಿದರು.
ಸಂಭ್ರಮದ ಅಂತರಾಳದಲ್ಲಿ ಕುದಿಯುತ್ತಿರುವ ಅಸಮಾಧಾನ…
ಪ್ರತಿದಿನ ಮುಂಜಾನೆ ಬೆಳಕರಿಯುವ ಮುನ್ನ ಎದ್ದು ಭೋರ್ಗರೆಯುವ ಮಳೆ, ಗಾಳಿ, ಮೈಕೊರೆಯುವ ಚಳಿ ಯಾವುದನ್ನೂ ಲೆಕ್ಕಿಸದೆ ಪಟ್ಟಣವನ್ನೆಲ್ಲಾ ಗುಡಿಸಿ ಕಸ, ಕೊಳಕು, ಗಲೀಜು, ತ್ಯಾಜ್ಯಗಳನ್ನು ಶುಭ್ರಗೊಳಿಸುವ ಕಾಯಕದಲ್ಲಿ ತೊಡಗುವ ಪೌರ ಕಾರ್ಮಿಕರಿಗೆ ಯಾವುದೇ ಸಂಭ್ರಮದ ಕಾರ್ಯಕ್ರಮವಿದ್ದಾಗಲೂ ಅವರ ಅಂತರಾಳದಲ್ಲಿ ಅಸಮಾಧಾನ ಮಡುಗಟ್ಟಿದೆ. 20-25 ವರ್ಷಗಳಿಂದ ಕಾಯಕದಲ್ಲಿ ತೊಡಗಿದ್ದರೂ ಅವರ ಕೆಲಸವನ್ನು ಸರ್ಕಾರ ಕಾಯಂ ಗೊಳಿಸಿಲ್ಲ. ನಿವೇಶನಗಳ ಹಂಚಿಕೆ ಸಮರ್ಪಕವಾಗಿ ಆಗಿಲ್ಲ. ನಿವೇಶನ ಹಂಚಿಕೆಯಾದವರಿಗೆ ಮನೆ ಕಟ್ಟಲು ಪ್ರೋತ್ಸಾಹ ನೀಡಿಲ್ಲ. ಕ್ವಾಟ್ರಸ್ ಇದ್ರೂ ಸಮರ್ಪಕ ಮೂಲಸೌಕರ್ಯಗಳಿಲ್ಲ. ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರೋತ್ಸಾಹಗಳಿಲ್ಲದೇ ಸಂಭ್ರಮದ ಸಂದರ್ಭದಲ್ಲಿಯೂ ಅವರ ಬದುಕು ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಚಿಂತೆಗಳು ಕಾಡುವಂತಾಗಿದೆ.
ಈಗಲಾದರು ಸರ್ಕಾರ ಪೌರ ಕಾರ್ಮಿಕರ ಸಮಸ್ಯೆಗಳ ಕಡೆ ಗಮನಹರಿಸಿ, ವಿಶೇಷ ಆದ್ಯತೆಯ ಮೇರೆಗೆ ಎಲ್ಲಾ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಿ, ಅವರ ಬದುಕಿಗೆ ಭದ್ರತೆ ಒದಗಿಸಿದರೆ ಗಾರ್ಬೇಜನ್ನು ಗಾರ್ಡನ್ ಮಾಡಲು ಹೊರಟಿರುವ ಕೈಗಳಿಗೆ ಶಕ್ತಿ ತುಂಬುವಂತಾಗುತ್ತದೆ.
ಗಾಯತ್ರಿ ವಸಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜಯ್ ಕುಮಾರ್ ಪ. ಪಂ. ಸದಸ್ಯರು ಮಾತನಾಡಿ ಪೌರ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮನವಿ ಮಾಡಿದರು. ಪ. ಪಂ. ಮಾಜಿ ಅಧ್ಯಕ್ಷರಾದ ವಾಣಿ ಸತೀಶ್ ಮಾತನಾಡಿ ಪೌರ ಕಾರ್ಮಿಕರ ಸೇವೆಯನ್ನು ಸ್ಲಾಗಿಸಿದರು.
ಸಮರೋಪ ಸಮಾರಂಭದ ವೇದಿಕೆಯಲ್ಲಿ ಗಾಯತ್ರಿ ಶೆಟ್ಟಿ ಪ.ಪಂ. ಉಪಾಧ್ಯಕ್ಷರು, ಪ. ಪಂ. ಸದಸ್ಯರುಗಳಾದ ಶ್ರೀ ಶ್ರೀನಿವಾಸ ಶೆಟ್ಟಿ, ಶ್ರೀಮತಿ ಮೈತ್ರ m.p, ಶ್ರೀಮತಿ ಸುಮಾ ಪರ್ವತೇ ಗೌಡ, ಬರ್ಕತ್ ಆಲಿ, ಪೌರ ಕಾರ್ಮಿಕ ರಾದ ನಾರಾಯಣ್, ಮತ್ತು ಎನ್ ಮೂರ್ತಿ ಮುಂತಾದ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ಎಲ್ಲಾ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ಪೌರ ಕಾರ್ಮಿಕ ಡ್ರೈವರ್ ವಿರೇಶ್ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಪೌರ ಕಾರ್ಮಿಕರಾದ ಶ್ರೀ ರಂಗಪ್ಪ ಅವರು ಎಲ್ಲಾ ಕಾರ್ಮಿಕರ ಪರವಾಗಿ ಮಾತಾಡಿ ತಮ್ಮ ಮನದಾಳದ ನೋವನ್ನು ಹಂಚಿಕೊಂಡರು. ೨೬ವರ್ಷಗಳಿಂದ ಕೆಲಸವನ್ನು ಮಾಡ್ತ ಇದ್ದೇನೆ ಇನ್ನೂ ಪರ್ಮನೆಂಟ್ ಆಗಲಿಲ್ಲ ಎಂದರು.

ಪ.ಪಂ. ಮುಖ್ಯಾಧಿಕಾರಿ ಚಂದ್ರಕಾಂತ ರವರು ಮಾತನಾಡಿ ಪೌರರಿಗೆ ಸೇವೆಮಾಡುವ ಪೌರ ಕಾರ್ಮಿಕರ ಸೇವೆಯನ್ನು ಕೊಂಡಾಡಿದರು. ಹಿರಿಯ ಪೌರ ಕಾರ್ಮಿಕರಾದ ಅರುಣಾಚಲರವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಹಾರಿಸಿದರು.

ಗಾಯತ್ರಿ ವಸಂತ ಅಧ್ಯಕ್ಷರು ಅಧ್ಯಕ್ಷೀಯ ನುಡಿಗಳನ್ನು ಆಡಿ ಎಲ್ಲರಿಗೂ ಶುಭಾಶಯ ಕೋರಿದರು.

ಕೊಪ್ಪ ಪಟ್ಟಣದ ಜೀವಾಳವಾಗಿರುವ ನೀರು ಸರಬರಾಜು ಕಾರ್ಮಿಕರು ರಜೆ ಮಾಡದೆ ದುಡಿಯುವವರು ಇವರ ಸೇವೆಗೆ ಸರಿ ಸಾಟಿ ಇಲ್ಲ ಇಂತಹ ನೀರು ಸರಬರಾಜು ಕಾರ್ಮಿಕರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಕೊಪ್ಪ : ಗಾರ್ಬೇಜ್ ಅನ್ನು ಗಾರ್ಡನ್ ಮಾಡಲು ಶ್ರಮಿಸುತ್ತಿರುವ ಯೋಧರು…
🔹 ಹೆಚ್ಚಿನ ಸುದ್ದಿಗಳಿಗಾಗಿ ನುಡಿಕನ್ನಡ ವಾಟ್ಸಪ್ ಗುಂಪಿಗೆ ಸೇರಿರಿ…
https://chat.whatsapp.com/II4234MxIuZ6iQtz7bOEJg
ಕೊಪ್ಪದಲ್ಲಿ ಪೌರ ಕಾರ್ಮಿಕ ದಿನಾಚರಣೆಯ ಅಂಗವಾಗಿ ಮಹಿಳೆ ಮತ್ತು ಪುರುಷ ಪೌರ ಕಾರ್ಮಿಕರಿಗೆ ಅಗ್ಗಜಗ್ಗಾಟ ಕಾರ್ಯಕ್ರಮ…
🔹 ಹೆಚ್ಚಿನ ಸುದ್ದಿಗಳಿಗಾಗಿ ನುಡಿಕನ್ನಡ ವಾಟ್ಸಪ್ ಗುಂಪಿಗೆ ಸೇರಿರಿ…
Leave a reply