ನ್ಯೂಡೆಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 78ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಯುಸಿಸಿ (ಏಕರೂಪ ನಾಗರಿಕ ಸಂಹಿತೆ) ಜಾರಿಗೆ ತರುವುದಾಗಿ ಹೇಳಿದ್ದಾರೆ. ಆದರೆ ಮೋದಿ ಹೇಳಿಕೆಗೆ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಯುಸಿಸಿ ಕುರಿತು ಮೋದಿ ಅವರು ಮಾತನಾಡುತ್ತಾ.. ಇದುವರೆಗೂ ನಮಗೆ ಕಮ್ಯೂನಲ್ ಸಿವಿಲ್ ಕೋಡ್ ಇದೆ ಎಂದದ್ದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಇಂತಹ ಟೀಕೆಗಳನ್ನು ಮಾಡುವ ಮೂಲಕ ಪ್ರಧಾನಿ ಮೋದಿಯವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ್ದಾರೆ. ಇತಿಹಾಸವನ್ನು ಅವಹೇಳನ ಮಾಡುವುದರಲ್ಲಿ ಪ್ರಧಾನಿ ಮೋದಿಗೆ ಮಿತಿಯೇ ಇಲ್ಲವಾಗಿದೆ. 1950 ರಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಕಾಯ್ದೆಗಳಿಗೆ ಮಹತ್ವದ ಸುಧಾರಣೆಗಳನ್ನು ತಂದರು. ನಂತರ ಆ ಸುಧಾರಣೆಗಳನ್ನು RSS ಮತ್ತು ಸಂಘ ಪರಿವಾರ ತೀವ್ರವಾಗಿ ವಿರೋಧಿಸಿದವು ಎಂದು ರಮೇಶ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ.. ‘ದೇಶಕ್ಕೆ ಸೆಕ್ಯುಲರ್ ಸಿವಿಲ್ ಕೋಡ್ ಅಗತ್ಯ ಬಹಳ ಇದೆ. ನಾವು 75 ವರ್ಷಗಳಿಂದ ಧಾರ್ಮಿಕ ಸಿವಿಲ್ ಕೋಡ್ ನೊಂದಿಗೆ ಬದುಕಿದ್ದೇವೆ. ಈಗ ನಾವು ಜಾತ್ಯತೀತ ನಾಗರಿಕ ಸಂಹಿತೆಯತ್ತ ಸಾಗಬೇಕಾಗಿದೆ. ಆಗ ಮಾತ್ರ ದೇಶದಲ್ಲಿ ಧಾರ್ಮಿಕ ತಾರತಮ್ಯ ಕೊನೆಗೊಳ್ಳುತ್ತದೆ. ಇದರಿಂದ ಸಾಮಾನ್ಯ ಜನರಲ್ಲಿರುವ ಒಡಕು ತೊಲಗಲಿದೆ,” ಎಂದರು. ಮತ್ತೊಂದೆಡೆ ಇಂದು ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶದ ಧ್ವಜಾರೋಹಣ ಮಾಡಿದರು.
ಅನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಒಡೆದಾಳುವ ವಿಚಾರಗಳನ್ನು ಪ್ರೋತ್ಸಾಹಿಸುತ್ತದೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಶಕ್ತಿಯೇ ಹೊರತು ದೌರ್ಬಲ್ಯವಲ್ಲ. ಕೆಲವರು ಸ್ವಾತಂತ್ರ್ಯ ನಮಗೆ ಸುಲಭವಾಗಿ ಸಿಕ್ಕಿತು ಎಂದು ಅಪಪ್ರಚಾರ ಮಾಡುತ್ತಾರೆ. ಆದರೆ, ಲಕ್ಷಾಂತರ ಜನರ ತ್ಯಾಗ ಬಲಿದಾನದ ಫಲಿತವೇ ಸ್ವಾತಂತ್ರ್ಯ ಸಿಕ್ಕಿದೆ ಎಂದರು.
Leave a reply