ಉತ್ತರ ಕನ್ನಡ : ಇತ್ತಿಚೆಗೆ ಶಿರೂರು ಗುಡ್ಡ ಕುಸಿತದ ದುರ್ಘಟನೆಯಲ್ಲಿ ಸಾವಿಗೀಡದವರ ಪೈಕಿ ಮೂವರ ಮೃತ ದೇಹಗಳೂ ಇನ್ನೂ ಪತ್ತೆಯಾಗಿಲ್ಲ. ಅಷ್ಟರಲ್ಲೇ ಅದೇ ಜಿಲ್ಲೆಯ ಕಾಳಿ ನದಿ ಹಳೆಯ ಸೇತುವೆ ಕುಸಿದಿದೆ. ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗೋವಾ ಮತ್ತು ಕರ್ನಾಟಕದ ನಡುವೆ ಈ ಸೇತುವೆ 41 ವರ್ಷಗಳ ಕಾಲ ಪ್ರಮುಖ ಸೇತುವೆಯಾಗಿ ಮುಂದುವರಿದಿದೆ. ಸೇತುವೆ ಕುಸಿದಾಗ ಅದರ ಮೇಲೆ ಬರುತ್ತಿದ್ದ ಟ್ರಕ್ ನದಿಗೆ ಬಿದ್ದಿದೆ. ಆದರೆ ಚಾಲಕನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಕೋಡಿಭಾಗ್ ಸೇತುವೆ ರಾತ್ರಿ ಒಂದು ಗಂಟೆಗೆ ಕುಸಿದಿದೆ. ಹಳೆ ಸೇತುವೆ ಕುಸಿದ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ನೂತನವಾಗಿ ನಿರ್ಮಿಸಲಾಗಿದ್ದ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಭಾರೀ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭೂಕುಸಿತಗಳೂ ಸಂಭವಿಸಿದೆ. ಕೋಡಿಭಾಗ್ ಸೇತುವೆಯ ಒಂದು ಭಾಗ ನದಿಯ ನೀರಿನಲ್ಲಿ ಬಿದ್ದಿದೆ. ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ದುರಂತವನ್ನು ನೋಡಿದ್ದಾರೆ. ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
Leave a reply