ಬ್ರೆಜಿಲ್ : ಅತಿದೊಡ್ಡ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸುವ ಕಡೆಗೆ ಪ್ರಯತ್ನ ಮಾಡಬೇಕೆಂದು G20 ಹಣಕಾಸು ಮಂತ್ರಿಗಳು ಸಮಾವೇಶದಲ್ಲಿ ಅಂಗೀಕಾರವಾಗಿದೆ. ಸಭೆಯ ನಂತರ ಬಿಡುಗಡೆ ಮಾಡಿದ ಜಂಟಿ ಪತ್ರಿಕಾ ಪ್ರಕಟಣೆಯ ಮೂಲಕ ಇದನ್ನು ಬಹಿರಂಗಪಡಿಸಲಾಗಿದೆ. ಬ್ರೆಜಿಲ್ನ ರಿಯೊ ಡಿ ಜನೈರೊದಲ್ಲಿ ಎರಡು ದಿನಗಳ ಕಾಲ ಸಮ್ಮೇಳನ ನಡೆಯಿತು. ಅತಿದೊಡ್ಡ ಶ್ರೀಮಂತರಿಗೆ ಎಷ್ಟು ತೆರಿಗೆ ವಿಧಿಸಬೇಕೆಂಬ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬ್ರೆಜಿಲ್ ಅತಿದೊಡ್ಡ ಶ್ರೀಮಂತರಿಗೆ ಕನಿಷ್ಠ ಶೇ. 2% ತೆರಿಗೆ ವಿಧಿಸಬೇಕೆಂದು ಪ್ರಸ್ತಾಪಿಸಿದೆ.
ಹೆಚ್ಚಿನ ತೆರಿಗೆಗಳನ್ನು ವಿಧಿಸಬೇಕೆಂಬ ಪ್ರಸ್ತಾಪವನ್ನು ಫ್ರಾನ್ಸ್, ಸ್ಪೇನ್, ದಕಣ ಆಫ್ರಿಕಾ ಬೆಂಬಲಿಸಿದರೆ, ಅಮೆರಿಕ ಮತ್ತು ಜರ್ಮನಿ ವಿರೋಧಿಸಿದವೆ. ನವೆಂಬರ್ 18 ಮತ್ತು 19 ರಂದು ಬ್ರೆಜಿಲ್ನಲ್ಲಿ ನಡೆಯಲಿರುವ ಜಿ 20 ದೇಶಗಳ ಮುಖ್ಯಸ್ಥರ ಸಮ್ಮೇಳನದ ಸಿದ್ಧತೆಯ ಭಾಗವಾಗಿ ಈ ಸಚಿವರುಗಳ ಸಭೆ ನಡೆಸಲಾಯಿತು. ವಿಶ್ವದ ಶ್ರೀಮಂತರು ಈಗ ಕೇವಲ ಶೇ. 0.3% ತೆರಿಗೆಗಳನ್ನು ಮಾತ್ರವೇ ಪಾವತಿಸುತ್ತಿದ್ದಾರೆ ಎಂದು ಬ್ರೆಜಿಲ್-ನಿಯೋಜಿತ ಗೇಬ್ರಿಯಲ್ ಜುಕ್ಮನ್ ವರದಿಯು ಬಹಿರಂಗಪಡಿಸಿತು. ವಿಶ್ವದ 3,000 ಸಾವಿರ ಮಂದಿ ಶ್ರೀಮಂತರ ಮೇಲೆ ಶೇ. 2% ತೆರಿಗೆಯನ್ನು ವಿಧಿಸಿದರೆ, ಅದು ವರ್ಷಕ್ಕೆ 200 ಬಿಲಿಯನ್ ಡಾಲರ್ ಗಳಿಂದ 250 ಬಿಲಿಯನ್ ಡಾಲರ್ ಗಳವರೆಗೆ ಸಂಗ್ರಹಿಸಬಹುದು ಎಂದು ತಿಳಿಸಿದೆ.
Leave a reply