ಉತ್ತರ ಭಾರತದ ಕುಶಿನಗರದ ಬಳಿ ಕ್ರಿ.ಪೂ. 483 ಅಥವಾ 400 BCE ನಲ್ಲಿ, ಬುದ್ಧ ತನ್ನ ಎಂಭತ್ತನೇ ವಯಸ್ಸಿನಲ್ಲಿ ನಿಧನರಾದರು. ಪ್ರಸ್ತುತ ಇದು ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿದೆ. ಅಲ್ಲಿ ಸ್ಮಾರಕದ ಚಿನ್ಹೆಯಾಗಿ ಮಲಗಿರುವ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಲಾಯಿತು. ನಂತರದ ಕಾಲದಲ್ಲಿ, ಆ ವಿಗ್ರಹದ ಪ್ರೇರಣೆಯಿಂದ ಹಾಲಕಡಲಿನಲ್ಲಿ ವಿಷ್ಣು ಮೂರ್ತಿಯನ್ನು ಕೆತ್ತಿಸಿ, ವಿನ್ಯಾಸಗೊಳಿಸಲಾಯಿತು. ಆ ನಂತರ ಒಂದೊಂದಾಗಿ ಎಲ್ಲ ‘ಅವತಾರ’ಗಳು ಬೆಳಕಿಗೆ ಬಂದವು. ದೇಶಾದ್ಯಂತ ಬುದ್ಧನ ಪ್ರತಿಮೆಗಳನ್ನು ಮಾರ್ಪಡಿಸಿ, ಹಿಂದೂ ದೇವರುಗಳು ಬೆಳಕಿಗೆ ತಂದ ವಿಷಯಗಳು ಬಟ್ಟಬಯಲಾದವು. ಅಯ್ಯಪ್ಪ, ಬಾಲಾಜಿ ಅಥವಾ ಪಂಡರಿನಾಥ – ಇವರುಗಳೆಲ್ಲಾ ಧ್ವಂಸಗೊಂಡ ಬುದ್ಧನ ಪ್ರತಿಮೆಗಳಿಂದ ವಿನ್ಯಾಸಗೊಂಡವರು! ಬೌದ್ಧ ಮಂದಿರಗಳನ್ನು ಬದಲಾಯಿಸಿ ದೇವಾಲಯಗಳನ್ನು ಮಾಡಿದ ಘನ ಚರಿತ್ರೆಯನ್ನು ಮರೆಮಾಚಿದರೆ ತರವಲ್ಲ? ದೇಶದ ಜನರು ಈ ವಿಷಯಗಳನ್ನು ಗುರುತಿಸಿದ್ದಾರೆ. ನೆನಪಿನಲ್ಲಿಟ್ಟುಕೊಂಡಿದ್ದಾರೆ. ಎಲ್ಲವನ್ನೂ ಆ ದೃಷ್ಟಿಕೋನದಿಂದ ವಿಶ್ಲೇಷಿಸುತ್ತಿದ್ದಾರೆ.
ಸೃಷ್ಟಿ ನಡೆದಾಗ ಪರಮಾತ್ಮನು ಕೆಳಗಿಳಿದು ಮನುಷ್ಯನಿಗೆ ವೇದ, ಪುರಾಣ, ಪವಿತ್ರ ಗ್ರಂಥಗಳೆಲ್ಲವನ್ನೂ ಕೊಟ್ಟನು – ಎಂಬುದು ಸುಳ್ಳೆಂದು ಸ್ಪಷ್ಟವಾಗುತ್ತದೆ. ಬೌದ್ಧ ಸಾಹಿತ್ಯದಲ್ಲಿ ಹಿಂದೂ ದೇವತೆಗಳನ್ನು ನಿಂದಿಸಲಾಗಿಲ್ಲ. ಹಿಂದೂಗಳ ಪವಿತ್ರ ಗ್ರಂಥವಾದ ರಾಮಾಯಣದಲ್ಲಿ ಬುದ್ಧನ ವಿರುದ್ಧ ಧರ್ಮನಿಂದೆಯಿದೆ. ಅಂದರೆ ಹಿಂದೂ ರಾಮಾಯಣ ಬರೆಯುವ ಮುನ್ನವೇ ಬುದ್ಧ ಈ ನೆಲದಲ್ಲಿ ಹುಟ್ಟಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಿದ್ದಾನೆ ಎಂಬುದನ್ನು ಒಪ್ಪಿಕೊಂಡಂತೆ ಅಲ್ಲವೇ? ಷಡ್ಯಂತ್ರಗಳು ಮತ್ತು ಕಳ್ಳತನಗಳನ್ನು ಖಂಡಿತವಾಗಿಯೂ ಬಹಿರಂಗವಾಗುತ್ತವೆ.
ರಾಮನು ಮೊದಲು ಬೋಧಿಸತ್ವ ಆದಾಗ, ರಾಮಾಯಣದಲ್ಲಿ ಬುದ್ಧನನ್ನು ನಿಂದಿಸಬೇಕೇಕೆ? – ಎಂಬುದು ಇಲ್ಲಿ ಪ್ರಶ್ನೆ! ಆದರೆ ಉತ್ತರವನ್ನು ಕಂಡುಹಿಡಿಯುವುದು ಸುಲಭವಲ್ಲ, ಸ್ವಲ್ಪ ಆಳವಾಗಿ ಪರಿಶೀಲಿಸಬೇಕಿದೆ. ಕಲುಷಿತ ಮೆದುಳನ್ನು ಸ್ವಚ್ಛಗೊಳಿಸಿಕೊಂಡು ಹೊಸದಾಗಿ ಯೋಚಿಸಿದರೆ ಮಾತ್ರ ವಿಷಯ ಕಲಿಸಲು ಸಾಧ್ಯ! ಜಂಬೂದ್ವೀಪವೆಂದು ಕರೆಯಲ್ಪಡುವ ಈ ಭರತಖಂಡದಲ್ಲಿ ಸಮ್ಯಕ್ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬಂದಿತು. ನಂತರ ಅದು ಕ್ರಮೇಣ ಏಷ್ಯಾ ಖಂಡದಾದ್ಯಂತ ಹರಡಿತು. ನಂತರ ಇದು ಯುರೋಪ್ ಮತ್ತು ಅಮೆರಿಕಕ್ಕೂ ಹರಡಿತು. ಏಷ್ಯಾದ ಎಲ್ಲಾ ದೇಶಗಳು ಬುದ್ಧನ ಜಾತಕ ಕಥೆಗಳನ್ನು ಅಳವಡಿಸಿಕೊಂಡಿವೆ. ಅನುವಾದಗಳೊಂದಿಗೆ ಅವುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲಿ ದಶರಥ ಜಾತಕ ಕಥೆಯೂ ಒಂದು. ಇದು ಸುತ್ತಪಿಟಕದ ಖುದ್ದಕ ನಿಕಾಯದಲ್ಲಿ 461ನೇ ಜಾತಕ ಕಥೆಯಾಗಿದೆ. ಇದರಲ್ಲಿ ಕಥೆಯ ನಾಯಕ ಬೋಧಿಸತ್ವ ರಾಮ. ಎಲ್ಲಾ ಕಥೆಗಳಂತೆ ಈ ಕಥೆಯೂ ಕೂಡ ಇತರೆ ಬೌದ್ಧ ದೇಶಗಳಿಗೆ ಪ್ರಯಾಣಿಸಿತು. ಮಾರ್ಪಾಡು, ತಿದ್ದುಪಡಿಗಳೊಂದಿಗೆ ಅದು ‘ರಾಮಾಯಣ’ವಾಗಿ ಮಾರ್ಪಟ್ಟಿತು. ಅವನಂ ಎಂದರೆ ಪಥ – ಮಾರ್ಗವೆಂದರ್ಥ. ಇದನ್ನು ಬೋಧಿಸತ್ವ ರಾಮನ ಮಾರ್ಗ ಅಥವಾ ಪಥವೆಂದು ಅರ್ಥಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಥೆಯಲ್ಲಿ ಈ ಕಥೆಗೆ ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ.
ಉದಾಹರಣೆಗೆ ಇಂಡೋನೇಷಿಯಾದಲ್ಲಿ ಯೋಗೇಶ್ವರ್ ಅವರ ಕೃತಿಯನ್ನು “ರಾಮಾಯಣ ಕಾ ಕವಿನ್” ಎಂದು ಪ್ರಕಟಿಸಲಾಯಿತು. ಕಂಪುಚಿಯಾದಲ್ಲಿ “ರಾಮ ಕೀರ್ತಿ”, ತಾರುಲ್ಯಾಂಡ್ನಲ್ಲಿ “ರಾಮ್ ಕಿ ಯೆನ್”, ಲಾವೋಸ್ನಲ್ಲಿ “ರಾಮ್ ಜಾತಕ್”, ಬರ್ಮಾದಲ್ಲಿ (ಮ್ಯಾನ್ಮಾರ್) “ರಾಮ್ ವಟೈರು”, ಮಲೇಷ್ಯಾದಲ್ಲಿ “ಹಿಕಾಯನ್ ಸೆರಿ ರಾಮ್”, ಫಿಲಿಪೈನ್ಸ್ನಲ್ಲಿ “ಮಹಾ ಲಾಡಿಯಾ ಲಾವನ್”, ಟಿಬೆಟ್ನಲ್ಲಿ “ರಾಮ್ ಕಥಾ”, ಚೀನಾದಲ್ಲಿ “ದಶರಥ ಕಥನಮ್”. ಹಾಗೆಯೇ “ಅನಾಮಕ್ ಜಾತಕಮ್” ಮಂಗೋಲಿಯಾದ “ರಾಮ ಕಥಾ”, ಜಪಾನ್ನ “ರಾಮ್ ಕಥಾ”, ಶ್ರೀಲಂಕಾದ “ರಾಮ್ ಕಥಾ”, ನೇಪಾಳದ “ಭಾಮಾ ಭಕ್ತಾಕೃತ ರಾಮಾಯಣ್”, ಇಂಡೋನೇಷ್ಯಾ, ಫಿಲಿಪೈನ್ಸ್, ಮಲೇಷ್ಯಾಗಳಲ್ಲಿ ಬುದ್ಧನನ್ನು ಇಸ್ಲಾಮೀಕರಿಸಿದರೆ – ಭಾರತದಲ್ಲಿ ಅದೇ ಬುದ್ಧನನ್ನು ಬ್ರಾಹ್ಮಣೀಕರಣಗೊಳಿಸಲಾಯಿತು. ಇಸ್ಲಾಮಿಕ್ ದೇಶಗಳಲ್ಲಿ ಬೋಧಿಸತ್ವ ರಾಮನ ಕಥೆ ಹೆಚ್ಚು ಬದಲಾವಣೆಗೊಳಗಾಗಿಲ್ಲ. ಆದರೆ ಭಾರತದಲ್ಲಿ ರಾಮನ ವ್ಯಕ್ತಿತ್ವವನ್ನೇ ಸಂಪೂರ್ಣ ಬದಲಾಯಿಸಿದರು. ಬೋಧಿಸತ್ವ ರಾಮನನ್ನು ಹಿಂಸಾತ್ಮಕ ರಾಮನನ್ನಾಗಿ ಪರಿವರ್ತಿಸಿದರು.
ಭಾರತದಿಂದ ಇತರೆ ದೇಶಗಳಿಗೆ ಪ್ರಯಾಣಿಸಿದ ಬೌದ್ಧ ಜಾತಕ ಕಥೆಗಳು – ವಿಶೇಷವಾಗಿ ರಾಮನ ಕಥೆ – ಕೇವಲ ಸಣ್ಣ ಬದಲಾವಣೆಗಳಿಗೆ ಒಳಗಾಯಿತು. ಮೇಲಾಗಿ ರಾಮ ‘ಬೋಧಿಸತ್ವ’ ಎಂಬುದನ್ನು ಯಾರೂ ಬದಲಾಯಿಸಿಲ್ಲ. ಪ್ರಪಂಚ ದೇಶಗಳಲ್ಲಿರುವ ರಾಮಾಯಣಗಳಲ್ಲಿ ರಾಮ ಇನ್ನೂ ಬೋಧಿಸತ್ವನೇ! ಭಾರತದಲ್ಲಿ ರಾಮನನ್ನು ಬ್ರಾಹ್ಮಣ ಎಂದು ತೋರಿಸಲು ಹಲವು ಪ್ರಯತ್ನಗಳು ನಡೆದಿವೆ.
ವಾಲ್ಮೀಕಿ ರಾಯನಮ್ ಅಯೋಧ್ಯಾಕಾಂಡ 108 ನೇ ಸರ್ಗವು ಬುದ್ಧನನ್ನು ನಿಂದಿಸುತ್ತದೆ, ಎಚ್ಚರಿಕೆಯಿಂದ ಗಮನಿಸಿ.
ಯಧಾಹಿ ಚೋರ: ಸತ್ಧಾಹಿ ಬುದ್ಧ
ಸ್ತಥಾಗತ ನಾಸ್ತಿಕ್ ಮಂತ್ರ್ ವಿದ್ವಿ
ಕಳ್ಳನಿಗೆ ಹೇಗೆ ಶಿಕ್ಷೆ ಅನಿವಾರ್ಯವಾಗುತ್ತೋ, ಅದೇ ರೀತಿ ವೇದಗಳನ್ನು ವಿರೋಧಿಸುವ ಬುದ್ಧ ಮತ್ತು ಅವನ ಅನುಯಾಯಿಗಳಾದ ಬೌದ್ಧರು, ಬೌದ್ದದಮ್ಮವನ್ನನುಸರಿವವರು ಶಿಕ್ಷಾರ್ಹರಾಗುತ್ತಾರೆ. ಬೋಧಿಸತ್ವನ ಪ್ರೇರಣೆಯಿಂದ ಸೃಷ್ಟಿಯಾದ ರಾಮನ ವ್ಯಕ್ತಿತ್ವವನ್ನೇ ಬದಲಿಸಿದ್ದಲ್ಲದೆ, ದೇವರು ವೇದಗಳನ್ನು ತಿರಸ್ಕರಿಸಿದ ನೆಪದಲ್ಲಿ ಬುದ್ಧನನ್ನು ನಿಂದಿಸಿದರು! ಅಲ್ಲದೆ, ಇನ್ನಷ್ಟು ನೋಡಿ
ತಸ್ಮಾಧ್ವಿ ಯ: ಶಖ್ಯಾತಮ್: ಪೂಜಾನಾ
ಸನಸ್ತಿಕ್ಕೆ ನಾಭಿ ಮುಖೋ ಬುದ್ಧಸ್ಯತೂ 135||
ತದಗತ್ (ನಾಸ್ತಿಕ ವಿಶೇಷಣೆ) ಮತ್ತು ನಾಸ್ತಿಕ್ (ಚಾರ್ವಾಕ್) ರನ್ನು ಸಹ ಅದೇ ಕ್ರಮದಲ್ಲಿ ಅರ್ಥಮಾಡಿಕೊಳ್ಳಬೇಕು. ಪ್ರಜೆಗಳ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜನು ಕಳ್ಳರಿಗೆ ಯಾವ ಶಿಕ್ಷೆಯನ್ನು ಕೊಡುತ್ತಾನೋ ಅದೇ ರೀತಿಯ ಶಿಕ್ಷೆಯನ್ನು ನಾಸ್ತಿಕರಿಗೂ ನೀಡಬೇಕು. ಈ ವಿಷಯದೊಂದಿಗೆ ಸಂಬಂಧವಿಲ್ಲದ ನಾಸ್ತಿಕರ ಬಗ್ಗೆ – ಪಂಡಿತರಾದ ಬ್ರಾಹ್ಮಣರು ಎಂದಿಗೂ ನಿರ್ಲಿಪ್ತರಾಗಿರಬಾರದು. ಬಿಟ್ಟುಬಿಡಬಾರದು. ಎಂದು ಈ ಶ್ಲೋಕದಲ್ಲಿ ಬ್ರಾಹ್ಮಣರಿಗೆ ಎಚ್ಚರಿಕೆ ಇದೆ. ರಚಿಸಿದ ರಾಮನ ಪಾತ್ರವನ್ನು ವೈಭವೀಕರಿಸಲಿಕ್ಕಾಗಿ – ಕೆಲವು ಶತಮಾನಗಳ ಹಿಂದೆ ಬದುಕಿದ್ದ ಬುದ್ಧನನ್ನು ದೂಷಿಸಿದ್ದೇಕೆ? ವಾಲ್ಮೀಕಿ ರಾಮಾಯಣ ಅಯೋಧಾಕಾಂಡದಲ್ಲಿ ಶ್ರೀರಾಮನನ್ನು ಹೊಗಳುತ್ತಾ ಹೊಗಳುತ್ತಾ ಮಧ್ಯದಲ್ಲಿ ಬುದ್ಧನನ್ನು ಈ ರೀತಿ ನಿಂಧಿಸುವುದನ್ನು ಕಾಣಬಹುದು. ಎಲ್ಲಾ ಪ್ರಾಚೀನ ಸಂಸ್ಕೃತಿಗಳು ಬುದ್ಧನ ಕಾಲದ ತಪಸ್ವಿ ಸಂಸ್ಕೃತಿಯೊಂದಿಗೆ ಹೆಣೆದುಕೊಂಡಿವೆ! ಬ್ರಾಹ್ಮಣರಿಗೆ ಅದು ಅರ್ಥವಾಗುವುದಿಲ್ಲ. ಕಾಲಾನುಕ್ರಮದಲ್ಲಿ ನಶಿಸಿ ಹೋದ ಮಾನವ ನಾಗರಿಕತೆಗಳು, ಸಭ್ಯತೆ ಮತ್ತು ಸಂಕೇತಗಳನ್ನು ನಿರ್ಲಕ್ಷಿಸಿದ್ದಾರೆ. ಅಗತ್ಯವಿಲ್ಲದಿದ್ದರೂ ಎಲ್ಲದರಲ್ಲೂ ನುಸುಳಿ ತಮ್ಮ ವೈದಿಕ ಸಂಸ್ಕೃತಿಯನ್ನು ಹೇರಿಕೆ ಮಾಡುತ್ತಾರೆ. ಆದುದರಿಂದ ಈ ಮನುವಾದಿಗಳ ದಾಳಿ ಇಂದಿನದಲ್ಲ. ಅದಕ್ಕೆ ತಿರುಗೇಟು ನೀಡುವ ಸಮಯ ಸನ್ನಿಹಿತವಾಗಿದೆ! ನಮ್ಮ ಭಾರತದಲ್ಲಿ ಹಿಂದೂ ಧರ್ಮ ಪ್ರಚಾರಕರು ಪ್ರಚಾರ ಮಾಡಿದ ರಾಮಾಯಣವನ್ನು ನಾವು ಚೆನ್ನಾಗಿ ಜೀರ್ಣಿಸಿಕೊಂಡಿದ್ದೇವೆ, ಆ ಕೋನದಿಂದ ವಿಷಯವನ್ನು ನೋಡುವುದು ಬೇಡ. ನಾವು ಮಾತನಾಡುತ್ತಿರುವುದು ಬೌದ್ಧ ಸಾಹಿತ್ಯದಲ್ಲಿರುವ ದಶರಥ ಜಾತಕ ಕಥೆಯ ಬಗ್ಗೆ, ಬೋಧಿಸತ್ವ ರಾಮನ ಬಗ್ಗೆ ಅಂದರೆ ಬುದ್ಧನ ಬಗ್ಗೆ – ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜೀವಂತವಾಗಿ ನಡೆದಾಡಿದ ಬುದ್ಧನನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ವಿಷ್ಣುಮೂರ್ತಿಯನ್ನು ಮತ್ತು ಅವನ ಅವತಾರಗಳನ್ನು ರಚಿಸಲಾಗಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.
ಬುದ್ಧನು ಜ್ಞಾನ ಸಂಪಾದನೆಗಾಗಿ ರಾಜ್ಯ, ಅಂತ:ಪುರ ಮತ್ತು ಸುಖ ಭೋಗಗಳನ್ನು ತೊರೆದು ಕಾಡಿಗೆ ಹೋದನು. ಅವನು ಈ ಪ್ರಪಂಚದಲ್ಲಿರುವ ದುಃಖವನ್ನು ನಿವಾರಿಸಲು ಒಂದು ಮಾರ್ಗವನ್ನು ಹುಡುಕಲು ಹೋದನು. ಸೃಷ್ಟಿಯಾದ ರಾಮ ತಂದೆಯ ಮಾತಿನಂತೆ ಕಾಡಿಗೆ ಹೋದನು. ಜಗತ್ತಾಗಲೀ, ಜನರಾಗಲೀ ಅವನ ಗಮನದಲ್ಲಿ ಇಲ್ಲ. ಒಂದು ಧ್ಯೇಯವೂ ಇರಲಿಲ್ಲ. ಕಾಲ್ಪನಿಕತೆಗೂ ವಾಸ್ತವಿಕತೆಗೂ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ. ತನ್ನ ಹೆಂಡತಿ ಮತ್ತು ಮಕ್ಕಳನ್ನು ಅಂತಪುರಂನಲ್ಲಿ ಸುರಕ್ಷಿತವಾಗಿ ಇರಿಸಿ, ಬುದ್ಧನು ಸಮಸ್ಯೆಯನ್ನು ಪರಿಹರಿಸಲು ಕಾಡಿಗೆ ಹೋದನು. ತನ್ನ ಹೆಂಡತಿಯೊಂದಿಗೆ ಕಾಡುಗಳಲ್ಲಿ ಅಲೆದಾಡಿದ ಅವನು ತಾನೇ ತೊಂದರೆಗೆ ಸಿಲುಕಿಸಿದವನು – ದೇವರಾದ ರಾಮ. ಇದಲ್ಲದೆ, ಅವನು ಅಂತ:ಪುರದಲ್ಲಿ ಸುರಕ್ಷಿತವಾಗಿ ಉಳಿದು ತನ್ನ ಹೆಂಡತಿಯನ್ನು ಕಾಡಿಗೆ ಕಳುಹಿಸಿದನು. ಅಮಾನವೀಯ ಮತ್ತು ಅನೈತಿಕ ನಡವಳಿಕೆಯ ಮೇಲೆ ಅನೇಕ ಟೀಕೆಗಳನ್ನು ಮಾಡುವ ಮೂಲಕ ವೈದಿಕ ಬೋಧಕರು ತಮ್ಮ ರಾಮಾಯಣವು ಶ್ರೇಷ್ಠ ಪವಿತ್ರ ಗ್ರಂಥವೆಂದು ಭ್ರಮೆಯನ್ನು ಮೂಡಿಸಿದ್ದಾರೆ. ಅದಕ್ಕೆ ಮೂಲವಾದ ಬುದ್ಧ ಮತ್ತು ಅವನ ಬದುಕನ್ನು ಬಚ್ಚಿಟ್ಟರು. ಈ ದೇಶದ ಮೂಲನಿವಾಸಿಗಳನ್ನು ಹೇಗೆ ಲೂಟಿ ಮಾಡಿದರೋ ಅದೇ ಸೂತ್ರವನ್ನು ಬೌದ್ಧ ಸಾಹಿತ್ಯ ಮತ್ತು ಬೌದ್ಧ ವಿಶ್ವವಿದ್ಯಾಲಯಗಳಿಗೆ ಅನ್ವಯಿಸಿದರು. ಜೀವನದ ಆರಾಮದಾಯಕ ಮತ್ತು ನೈಸರ್ಗಿಕ ಮೌಲ್ಯಗಳನ್ನು ಹೊಂದಿರುವ ಮಹಾನ್ ಮಾನವನ ಕಥೆಯನ್ನು ದೇವರ ಕಥೆಯನ್ನಾಗಿ ತಿರುಚಿ ಬರೆದರು ಪಾಪಾ ಬ್ರಹ್ಮಣಾರ್ಯರು.
ಇರಾನ್ ಪ್ರದೇಶದಿಂದ ವಲಸೆ ಬಂದ ಆರ್ಯರು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ತಮ್ಮನ್ನು ಪವಿತ್ರ, ಉನ್ನತರೆಂದು ಬ್ರಾಹ್ಮಣಾರ್ಯರು ಘೋಷಿಸಿಕೊಂಡರು. ಅವರು ಮನುಸ್ಮೃತಿ ಮತ್ತು ಪುರಾಣಗಳನ್ನು ಒಳಗೊಂಡಂತೆ ಎಲ್ಲಾ ಸಂಸ್ಕೃತ ಗ್ರಂಥಗಳನ್ನು ಬರೆದಿದ್ದಾರೆ. ಆ ಮೂಲಕ ವರ್ಣವ್ಯವಸ್ಥೆಯನ್ನು ಸುಸ್ಥಿರಗೊಳಿಸಿಕೊಂಡರು. ವಲಸೆ ಬರುವುದು ತಪ್ಪಲ್ಲ. ಈ ಭೂಭಾಗದ ಮೇಲೆ ಶಾಶ್ವತ ನಿವಾಸಗಳನ್ನು ಸ್ಥಾಪಿಸಿಕೊಳ್ಳುವುದು ತಪ್ಪಲ್ಲ, ಆಫ್ರಿಕಾದಲ್ಲಿ ಪ್ರಾರಂಭವಾದ ಆದಿಮಾನವ ಜಾತಿಗಳು ಪ್ರಪಂಚಾದ್ಯಂತ ವಲಸೆ ಹೋದವು ಎಂದು ಆಧುನಿಕ ತಳಿಶಾಸ್ತ್ರವು ಎಂದು ದೃಢಪಡಿಸಿದೆ.
ಯಾರನ್ನು ಮೂಲನಿವಾಸಿಗಳು ಎಂದು ಕರೆಯುತ್ತೇವೋ – ಅವರೂ ಸಹ ಮಹಾನ್ ಮಾನವ ವಲಸೆಯ ಅಲೆಯಲ್ಲಿ ಮೊದಲು ಬಂದವರು. ಆದರೆ ದುರಂತವೆಂದರೆ – ತಮ್ಮನ್ನು ತಾವು ಸ್ಥಿರಪಡಿಸಿಕೊಳ್ಳಲು ಹಿಂದಿನ ಸಂಸ್ಕೃತಿಗಳು, ಜೀವನ ವಿಧಾನಗಳು, ನಾಗರಿಕತೆಗಳು ಮತ್ತು ಭಾಷೆಗಳನ್ನು ನಾಶಪಡಿಸಿದ್ದು ದುರಂತ! ತಮ್ಮ ಸುಳ್ಳಿಗೆ, ಷಡ್ಯಂತ್ರಗಳಿಗೆ, ಕುತಂತ್ರಗಳಿಗೆ ಪವಿತ್ರವಾದುದನ್ನು ಆರೋಪಿಸಿ, ತಮ್ಮನ್ನು ತಾವು ದೈವಿಕರು ಎಂದು ಪ್ರಚಾರ ಮಾಡಿಕೊಳ್ಳುವುದು ದಬ್ಬಾಳಿಕೆ!! ಮೊದಲು ಬಂದು, ಆರಾಮವಾಗಿ ನೆಲೆಸಿ, ಕೃಷಿ, ಪಶುಪಾಲನೆ ಮಾಡಿಕೊಂಡು, ತಾಂತ್ರಿಕ ಜ್ಞಾನವನ್ನು ಸಾಧಿಸಿದ ಸಿಂಧೂ ಪ್ರದೇಶದ ಜನರನ್ನು ದೋಚಿ, ನಾಶಮಾಡಿ ಓಡಿಸಿದವರು ಯಾರು? ನಂತರ ವಲಸೆ ಬಂದ ಬ್ರಾಹ್ಮಣರಲ್ಲವೇ? ಈ ದೇಶದ ಚಾರ್ವಾಕ, ಬೌದ್ಧ, ಜೈನ, ಚಿಂತನಾ ಪದ್ದತಿಗಳನ್ನು ನಾಶಮಾಡಿ ತಮ್ಮದೇ ಬ್ರಾಹ್ಮಣ್ಯವನ್ನು ಪರಿಚಯಿಸಿ ಶತಮಾನಗಳ ಕಾಲ ಜನರನ್ನು ಹಿಂಸಿಸಿದ್ದು ಯಾರು? ದೇವರು, ದೆವ್ವ, ಜನ್ಮ, ಪುನರ್ಜನ್ಮ, ಶಾಂತಿ, ಪೂಜೆ, ಬಲಿ ಮುಂತಾದ ಮೂಢನಂಬಿಕೆಗಳನ್ನು ಪರಿಚಯಿಸಿ ಜನರನ್ನು ಮಾನಸಿಕ ದಾಸರನ್ನಾಗಿ ಮಾಡಿ ದುಡಿಯದೆ ಲಭ ಪಡೆಯುತ್ತಿರುವವರು ಯಾರು? ದುಡಿಮೆಗೂ ಮತ್ತು ಬೆವರಿಗೂ ಬೆಲೆಯಿಲ್ಲದಂತೆ ಮಾಡಿದ್ದು ಯಾರು? ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸಿದ ಈ ಕ್ರಿಮಿನಲ್ಗಳನ್ನು ಸುಮ್ಮನೆ ಬಿಡೋಣವೇ? ಅವರ ಅಘೋಷಿತ ಅಧಿಕಾರವನ್ನು ಮುಂದುವರಿಯಲು ಬಿಡೋಣವೇ? ಅವರ ಹೊಟ್ಟೆ ಕಿಚ್ಚಿನ ಚಿಂತನೆಗಳನ್ನು ಕಿತ್ತೆಸೆಯೋಣವೇ? ಪ್ರಪಂಚದ ಪ್ರಜೆಗಳೆಲ್ಲರೂ ಸಮಾನರು – ಎಂಬ ವಿಷಯವನ್ನು ಹೇಳಿ, ಒಪ್ಪಿಸಿ, ಮೌಲ್ಯಯುತವಾದ ಮಾನವತಾವಾದಿ ಜಗತ್ತನ್ನು ಕಟ್ಟೋಣವೇ! ಸುಮ್ಮನೆ ಯೋಚಿಸುತ್ತ ಕುಳಿತಿರುವುದಲ್ಲ, ಆ ದಿಸೆಯಲ್ಲಿ ತಕ್ಷಣ ಕ್ರಿಯಾಶೀಲರಾಗುವುದು ಅಗತ್ಯ! ಅನಿವಾರ್ಯ!!
– ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, ಜೀವಶಾಸ್ತ್ರಜ್ಞ (ಮೆಲ್ಬೋರ್ನ್ನಿಂದ)
– ಡಾ.ದೇವರಾಜ ಮಹಾರಾಜರು
ಅನುವಾದ : ರೇಣುಕಾ ಭಾರತಿ
Leave a reply