ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ 121 ಮಂದಿ ಜನರನ್ನು ಕೊಂದ ಸ್ವಯಂಘೋಷಿತ ದೇವಮಾನವ ಬೋಲೆ ಬಾಬಾ ಅಲಿಯಾಸ್ ಸೂರಜ್ ಪಾಲ್ ಹಲವಾರು ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ. ಆತನ ವಿರುದ್ಧ ಹಲವು ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಮಂಗಳವಾರದಂದು ಸತ್ಸಂಗದ ಹೆಸರಿನಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ 121 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು.
ಆಗ್ರಾ, ಇಟಾವಾ, ಕಾಸ್ಗಂಜ್, ಫರೂಕಾಬಾದ್ ಮತ್ತು ರಾಜಸ್ಥಾನದಲ್ಲಿ ಸೂರಜ್ಪಾಲ್ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಸೂರಜ್ಪಾಲ್ ಕಾಸ್ಗಂಜ್ನ ಬಹದ್ದೂರ್ ನಗರದಲ್ಲಿ ಜನಿಸಿದನು. 1997ರಲ್ಲಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲಿಗೂ ಕೂಡ ಹೋಗಿದ್ದನು. ಬಿಡುಗಡೆಯಾದ ನಂತರ ಅವನು ತಮ್ಮ ಪೂರ್ವಜರ ಗ್ರಾಮಕ್ಕೆ ತೆರಳಿ, ನಂತರ ಅಲ್ಲಿ ತನ್ನನ್ನು ತಾನು ಸಕರ್ ವಿಶ್ವ ಹರಿ ಬಾಬಾ ಅಲಿಯಾಸ್ ಬೋಳೇಬಾಬಾ ಎಂದು ಹೆಸರಿಟ್ಟುಕೊಂಡು ಆಶ್ರಮವನ್ನು ನಿರ್ಮಿಸಿ ಜನರನ್ನು ಸೆಳೆದನು.
ಎಫ್ಐಆರ್ ನಲ್ಲಿ ಕಾಣಿಸಿದ ಬೋಲೆಬಾಬಾ ಹೆಸರು…
ಆದರೆ ಎಫ್ಐಆರ್ನಲ್ಲಿ ಈ ಬಾಬಾ ಹೆಸರು ದಾಖಲಾಗದಿರುವುದು ಗಮನಾರ್ಹ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. 80,000 ಜನರು ಪಾಲ್ಗೊಳ್ಳುತ್ತಾರೆಂದು ಸತ್ಸಂಗದ ಸಂಘಟಕರು ಅನುಮತಿ ಪಡೆದಿದ್ದರು, ಆದರೆ ಎರಡೂವರೆ ಲಕ್ಷ ಜನರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಆಯೋಜಕ ದೇವ್ ಪ್ರಕಾಶ್ ಮಧುಕರ್ ಮತ್ತು ಇತರೆ ಒಬ್ಬ ಆರೋಪಿಯನ್ನು ಎಫ್ಐಆರ್ನಲ್ಲಿ ಹೆಸರಿಸಲಾಗಿದೆ. ಕಾರ್ಯಕ್ರಮದ ನಂತರ ಬೋಳೇಬಾಬಾ ಪಾದಧೂಳಿ ಹೆಸರಿನಲ್ಲಿ ಮಣ್ಣು ಸಂಗ್ರಹಿಸಲು ಸೂರಜ್ಪಾಲ್ ಅವರ ಕಾರಿನ ಹಿಂದೆಯೇ ಜನರು ಓಡಿದರು. ಆದರೆ ಅವರ ಖಾಸಗಿ ಸೆಕ್ಯುರಿಟಿ ಗಾರ್ಡ್ಗಳು ಜನರನ್ನು ದೊಣ್ಣೆಗಳಿಂದ ಹೊಡೆದರು. ಆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವರದಿ ತಿಳಿಸಿದೆ. ಹಲವರು ಕೆಳಗೆ ಬಿದ್ದರು ಉಳಿದವರು ಅವರನ್ನು ತಿಳಿದುಕೊಂಡು ಓಡಿದರು. ಅನೇಕರು ಉಸಿರುಗಟ್ಟುವಿಕೆಯಿಂದ ಪ್ರಜ್ಞಾಹೀನರಾಗಿದ್ದರು. ಈ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಈ ಬೃಹತ್ ಸಮಾವೇಶದಲ್ಲಿ ಭದ್ರತೆಗಾಗಿ ಕೇವಲ 40 ಮಂದಿ ಪೊಲೀಸರು ಮಾತ್ರವೇ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೋಲೆಬಾಬಾನನ್ನು ಏಕೆ ಬಂಧಿಸಿಲ್ಲ? ಎಂಬ ಪ್ರಶ್ನೆಗೆ, ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರಶಾಂತ್ ಕುಮಾರ್, ತನಿಖೆ ನಡೆಯುತ್ತಿದೆ ಮತ್ತು ತಕ್ಷಣದ ಕ್ರಮದಿಂದ ತನಿಖೆಯ ಮೇಲೆ ಪರಿಣಾಮ ಬೀರಲು ಆಗುವುದಿಲ್ಲ ಎಂದರಯ. ಸಮಗ್ರ ತನಿಖೆಯ ನಂತರ ಸತ್ಯಾಸತ್ಯತೆಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
Leave a reply