ಗಾಜಾ : ನಿರಂಕುಶವಾಗಿ, ಆಕ್ರಮಣಕಾರಿಯಾಗಿ ಗಾಜಾಪಟ್ಟಿ ಮೇಲೆ ಇಸ್ರೇಲ್ ನಡೆಸುತ್ತಿರುವ ಕ್ರೂರ ಮತ್ತು ಅಕ್ರಮ ದಾಳಿಗಳಿಗೆ ಇಂದಿಗೆ 250 ದಿನಗಳು. ಈ ದಾಳಿಯಲ್ಲಿ ಇದುವರೆಗೂ ಒಟ್ಟು 37,202 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ಮಕ್ಕಳು (15,694), 498 ಮಂದಿ ಆರೋಗ್ಯ ಕಾರ್ಯಕರ್ತರು ಮತ್ತು 150 ಮಂದಿ ಪತ್ರಕರ್ತರು ಸೇರಿದ್ದಾರೆ. ಗಾಜಾಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ಆಹಾರ ಸೇರಿದಂತೆ ಎಲ್ಲಾ ಸರಬರಾಜುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ಇದುವರೆಗೆ 33 ಮಂದಿ ಜನರು ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯದ ಅಧಿಕೃತ ವರದಿಯನ್ನು ಬಹಿರಂಗಪಡಿಸಿದೆ. ಸತ್ತವರಲ್ಲಿ ಶೇ. 70 ರಷ್ಟು ಮಂದಿ ಮಹಿಳೆಯರು ಮತ್ತು ಮಕ್ಕಳೇ ಇದ್ದಾರೆ . ಇಸ್ರೇಲ್ ಇದುವರೆಗೆ 79,000 ಟನ್ ಸ್ಫೋಟಕಗಳನ್ನು ಗಾಜಾದ ಮೇಲೆ ಪ್ರಯೋಗಿಸಿದೆ. ಪ್ರಮುಖ ಆಸ್ಪತ್ರೆಗಳು ಮತ್ತು ಪ್ರಾರ್ಥನಾ ಸ್ಥಳಗಳು ಧ್ವಂಸವಾಗಿದೆ. 206 ಸಂರಕ್ಷಿತ ಕಟ್ಟಡಗಳೂ ನಾಶವಾಗಿವೆ. 17,000 ಮಂದಿ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ.
ಹಮಾಸ್ ಮತ್ತು ಇಸ್ರೇಲಿ ಸೇನೆಯಿಂದ ಗಾಜಾದ ಮೇಲೆ ಇಸ್ರೇಲ್ ಆಕ್ರಮಣದ ಮೊದಲ ತಿಂಗಳುಗಳಲ್ಲಿ ಲೈಂಗಿಕ ಹಿಂಸಾಚಾರವೂ ನಡೆಯಿತು ಎಂದು UN (ಯುನೈಟೆಡ್ ನೇಷನ್ಸ್) ತಜ್ಞರು ಹೇಳಿದ್ದಾರೆ. ಇಸ್ರೇಲ್ ದಾಳಿಯನ್ನು ಮಾನವೀಯತೆಯ ವಿರುದ್ಧದ ಅಪರಾಧ ಎಂದು ವಿಶ್ವಸಂಸ್ಥೆಯ ವರದಿಯು ಬಣ್ಣಿಸಿದೆ. ಇಸ್ರೇಲ್ ಆರೋಪಗಳನ್ನು ನಿರಾಕರಿಸಿದೆ. ದಾಳಿ ಪ್ರಾರಂಭವಾದ ಅಕ್ಟೋಬರ್ 7, 2023 ರಿಂದ ವರ್ಷದ ಅಂತ್ಯದವರೆಗಿನ ಘಟನೆಗಳನ್ನು ತಂಡವು ಪರಿಶೀಲಿಸಿದೆ.
ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ಹಮಾಸ್ನ ಪ್ರಸ್ತಾವನೆಯನ್ನು ಬ್ಲಿಂಕೆನ್ ಪರಿಗಣಿಸಲಿದೆ ಎಂದು US ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಹೇಳಿದ್ದಾರೆ. ಸಂಪೂರ್ಣ ಕದನ ವಿರಾಮ ಮತ್ತು ಗಾಜಾದಿಂದ ಇಸ್ರೇಲಿ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವುದು ಮುಂತಾದ ಪ್ರಸ್ತಾವನೆಗಳನ್ನು ಹಮಾಸ್ ಮುಂದಿಟ್ಟಿದ್ದು, ಕೆಲವು ಪ್ರಸ್ತಾವನೆಗಳು ಕಾರ್ಯಸಾಧುವಲ್ಲ ಎಂದು ವರದಿಯಾಗಿದೆ. ಹಮಾಸ್ ಮತ್ತು ಪ್ಯಾಲೇಸ್ತೇನ್ ಇಸ್ಲಾಮಿಕ್ ಜಿಹಾದ್ ನಡುವಿನ ಮಧ್ಯಸ್ಥಿಕೆ ಮಾತುಕತೆಗಳನ್ನು ಮುನ್ನಡೆಸುತ್ತಿರುವ ಕತಾರ್ ಮತ್ತು ಈಜಿಪ್ಟ್ ಈ ಬದಲಾವಣೆಗಳನ್ನು ಪ್ರಸ್ತಾಪಿಸಿವೆ.
Leave a reply