ನ್ಯೂಡೆಲ್ಲಿ : ಕೇಂದ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಪ್ರಧಾನಿ ಮೋದಿ ಜೊತೆಗೆ 72 ಮಂದಿ ಕೇಂದ್ರ ಸಚಿವರುಗಳು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹೊಸದಾಗಿ ಆಯ್ಕೆಯಾದ ಕೇಂದ್ರ ಸಚಿವರುಗಳಿಗೆ ಸರ್ಕಾರ ಇಲಾಖೆಗಳನ್ನು ಹಂಚಿಕೆ ಮಾಡಿದೆ.
ಕೇಂದ್ರ ಗೃಹ ಖಾತೆಯನ್ನು ಮತ್ತೊಮ್ಮೆ ಅಮಿತ್ ಶಾಗೆ, ರಕ್ಷಣಾ ಖಾತೆಯನ್ನು ರಾಜನಾಥ್ ಸಿಂಗ್ಗೆ, ಹಣಕಾಸು ಖಾತೆಯನ್ನು ಮತ್ತೊಮ್ಮೆ ನಿರ್ಮಲಾ ಸೀತಾರಾಮನ್ಗೆ ಮತ್ತು ರಸ್ತೆ ಮತ್ತು ಸಾರಿಗೆ ಖಾತೆಯನ್ನು ಮತ್ತೊಮ್ಮೆ ನಿತಿನ್ ಗಡ್ಕರಿಗೆ ನೀಡಲಾಗಿದೆ.
ಜೈ ಶಂಕರ್ ಅವರಿಗೆ ಮತ್ತೊಮ್ಮೆ ವಿದೇಶಾಂಗ ವ್ಯವಹಾರಗಳ ಮಹತ್ವದ ಸಚಿವಾಲಯವನ್ನು ನಿಯೋಜಿಸಲಾಗಿದೆ. ಅಲ್ಲದೆ, ಹರ್ಷ್ ಮಲ್ಹೋತ್ರಾ ಮತ್ತು ಅಜರುತಮ್ ಅವರು ರಸ್ತೆ ಸಾರಿಗೆ ಸಚಿವರಾಗಿರುತ್ತಾರೆ.
ಅಮಿತ್ ಶಾ – ಕೇಂದ್ರ ಗೃಹ ಸಚಿವಾಲಯ
ನಿತಿನ್ ಗಡ್ಕರಿ – ಸಾರಿಗೆ ಇಲಾಖೆ
ರಾಜನಾಥ್ – ರಕ್ಷಣಾ ಸಚಿವಾಲಯ
ಮನೋಹರಲಾಲ್ ಕಟ್ಟರ್- ವಸತಿ, ನಗರಾಭಿವೃದ್ಧಿ
ಹರ್ದೀಪ್ ಸಿಂಗ್ ಪುರಿ-ಪೆಟ್ರೋಲಿಯಂ,
ಅಶ್ವಿನಿ ವೈಷ್ಣವ್-ರೈಲ್ವೆ, ಮಾಹಿತಿ ಮತ್ತು ಪ್ರಸಾರ ಇಲಾಖೆ,
ಪಿಯೂಷ್ ಗೋಯಲ್- ವಾಣಿಜ್ಯ
ಧರ್ಮೇಂದ್ರ ಪ್ರಧಾನ್- ಶಿಕ್ಷಣ ಇಲಾಖೆ
ನಿರ್ಮಲಾ ಸೀತಾರಾಮನ್ – ಹಣಕಾಸು ಇಲಾಖೆ
ಜಯಶಂಕರ್- ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಜ್ಯೋತಿರಾದಿತ್ಯ ಸಿಂಧಿಯಾ-ಟೆಲಿಕಾಂ ಇಲಾಖೆ
ಪ್ರಹ್ಲಾದ್ ಜೋಶಿ – ಆಹಾರ, ಗ್ರಾಹಕ ಸೇವೆಗಳು
ಕುಮಾರಸ್ವಾಮಿ -ಉಕ್ಕು, ಭಾರೀ ಕೈಗಾರಿಕೆಗಳು
ಸುರೇಶ್ ಗೋಪಿ – ಪ್ರವಾಸೋದ್ಯಮ ರಾಜ್ಯ ಸಚಿವ
ರಾವ್ ಇಂದ್ರಜಿತ್ ಸಿಂಗ್ – ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ
Leave a reply