ಭಾರತೀಯರಿಗೆ ಪ್ರಾರಂಭದಿಂದಲೂ ಹಸುಗಳು ಪವಿತ್ರವಾಗಿದ್ದವೇ? ಹಿಂದೂಗಳು ಗೋವಧೆ ಎಂದೂ ಮಾಡಿಲ್ಲವೇ? ಹಸುವಿನ ಮಾಂಸವನ್ನು ಹಿಂದೆಂದೂ ಸೇವಿಸಿಯೇ ಇರಲಿಲ್ಲವೇ? ಒಂದು ಕಾಲದಲ್ಲಿ ಬ್ರಾಹ್ಮಣರು ಗೋವಿನ ಮಾಂಸವನ್ನು ತಿನ್ನುತ್ತಿದ್ದರು ಅಂದರೆ ನಂಬುತ್ತೀರಾ? ನಂಬುವುದಕ್ಕೆ ಯಾರೇ ಆಗಲಿ ಯಾಕೆ ಸಂಕಟ ಪಡಬೇಕು? ನಾಚಿಕೊಳ್ಳಬೇಕು.
ಅವರವರ ಆಹಾರ ಪದ್ಧತಿಗಳು ಅವರವರದು. ಇಷ್ಟವಿಲ್ಲದವರು ಗೋ ಮಾಂಸವನ್ನು ತಿನ್ನದಿದ್ದರೆ ಯಾರಿಗೂ ಯಾವುದೇ ಅಭ್ಯಾಂತರವಿರುವುದಿಲ್ಲ. ಆದರೆ ಅದನ್ನು ತಿನ್ನುವುದನ್ನು ನಿಷೇಧಿಸುವುದು ಮಾತ್ರ ನಿಸಂದೇಹವಾಗಿ ಅದನ್ನು ಇಷ್ಟಪಟ್ಟು ತಿನ್ನವವರ ಸ್ವೇಚ್ಚೆಯನ್ನು ದಮನಿಸುವುದೇ ಆಗಿದೆ. ಇಂತಹ ಪರಿಣಾಮಗಳು ಪ್ರಜಾತಾಂತ್ರಿಕತೆಗೆ ಅಪಾಯಕಾರಿಯಾಗುತ್ತದೆ.
ಹರಪ್ಪಾ ನಾಗರಿಕತೆಯ ಕಾಲದಿಂದಲೂ ಹಿಂದೂಗಳಿಗೆ ಗೋವುಗಳು ಪಾವಿತ್ರವೇ? ಅಲ್ಲವೇ ಅಲ್ಲ. ಇತ್ತೀಚೆಗಿನವರೆಗೆ ಹಿಂದೂಗಳಿಗೆ ಗೋವುಗಳು ಪವಿತ್ರ ಪ್ರಾಣಿಯಾಗಿರಲಿಲ್ಲ. ಅಂದಿನಿಂದ ಇಂದಿನವರೆಗೆ ಹಿಂದೂಗಳ ದೃಷ್ಟಿಯಲ್ಲಿ ಗೋವುಗಳಿಗೆ ಯಾವ ರೀತಿಯ ಸ್ತಾನ – ಮಾನಗಳಿದ್ದವೋ ಪರಿಶೀಲಿಸೋಣ.
ಕ್ರಿ.ಪೂ. 3000 ದಿಂದ ಕ್ರಿ.ಪೂ 1750ರ ವರೆಗೆ ಚಾಲ್ತಿಯಲ್ಲಿದ್ದ ಹರಪ್ಪಾ ನಾಗರಿಕತೆಯ ಕಾಲದಲ್ಲಿ ಗೋ ಮಾಂಸ ಭಕ್ಷಣೆ ಇರುತ್ತಿತ್ತೆಂದು ಸಂಶೋಧನೆಯ ಆಧಾರಗಳಿಂದ ಸ್ಪಷ್ಟವಾಗಿದೆ. ಅತ್ರಂಜಿಖೇರಾ ( ಇಂದಿನ ಎಟುವಾ ಜಿಲ್ಲೆ)ಯಲ್ಲಿ ಲಭಿಸಿದ ಮೂಳೆಯಲ್ಲಿ ಶೇ 60%ಕ್ಕೂ ಹೆಚ್ಚಿನವು ಹಸುಗಳದ್ದೇ ಅಗಿದೆ. ಇವುಗಳ ಮೇಲೆ ಗಂಟುಗಳಿವೆ. (ಗೋವಿನ ಪವಿತ್ರತೆ ಒಂದು ಕಟ್ಟು ಕಥೆ. ರಚನೆ: ಡಿ ಎನ್.ಝಾ page – 36)
ಕ್ರಿ.ಪೂ 1750 ರಿಂದ ಕ್ರಿ.ಪೂ 600ರವರೆಗಿನ ಕಾಲವನ್ನು ಇತಿಹಾಸಕಾರರು ವೇದಗಳ ಕಾಲವನ್ನಾಗಿ ಪರಿಗಣಿಸುತ್ತಾರೆ. ವೇದ ಋಷಿಗಳು ಯಜ್ಞಗಳಿಗೆ ಗೋವುಗಳನ್ನು ಬಲಿ ಕೊಡುತ್ತಿದ್ದರೆಂದು ಗೋ ಮಾಂಸ ಭಕ್ಷಣೆ ಮಾಡುತ್ತಿದ್ದರೆಂದು ವೇದ ಮಂತ್ರಿಗಳು ನಿರೂಪಿಸುತ್ತಿದೆ. ಅವುಗಳಲ್ಲಿ ಎರಡು ಮೂರನ್ನು ಪರಿಶೀಲಿಸೋಣ.
1. ರುಗ್ವೇದ 1ನೇ ಮಂಡಳಿ 161 ನೇ ಸೂಕ್ತಿ 10ನೇ ಮಂತ್ರ ಪ್ರಭುಗಳಲ್ಲಿ ಒಬ್ಬ ಕುಯ್ದ ದನದ ರಕ್ತವನ್ನು ಹಿಡಿಯುತ್ತಿದ್ದಾನೆ. ಇನ್ನೊಬ್ಬ ಕತ್ತಿಯಿಂದ ಮಾಂಸವನ್ನು ತುಂಡು ತುಂಡಾಗಿ ಕತ್ತರಿಸುತ್ತಿದ್ದಾನೆ. ಮೂರನೆಯವನು ಗೋವಿನ ಹೊಟ್ಟೆಯೊಳಗೆ ಮಲಮೂತ್ರದ ಭಾಗವನ್ನು ಬೇರ್ಪಡಿಸುತ್ತಿದ್ದಾನೆ.
2. ರುಗ್ವೇದ : 10-79-6 ವಿಪರ್ಯಾಶಶ್ “ಚಕರ್ತಗಾಮಿವಾಸಿಹಃ” ಎಂದ ಕೂಡಲೇ ಆ ಕತ್ತಿ ಹಸುವಿನ ಕಣಕಣಗಳನ್ನೂ ಕೊಯ್ಯತ್ತದೆ.
3. ರುಗ್ವೇದ ; 10-86-14: ನನಗಾಗಿ ಇಂದ್ರಾಣಿ ಯಾಜ್ಞಿಕರನ್ನು ಪ್ರೋತ್ಸಾಹಿಸಿದಳು. ಅವರು 15-20 ಬಗೆಯ ದನದ ಮಾಂಸಾಹಾರಗಳನ್ನು ತಯಾರಿಸಿದ್ದರು. ಅದನ್ನು ನಾನೂ ತಿಂದೆ..
4. ಶುಕ್ಲ ಯಜುರ್ವೇದ : 13ನೇ ಅದ್ಯಾಯ ; 43ನೇ ಮಂತ್ರ; “ಗೋಶಿರ ಆಗೇಯ್ಯಾ ಮುಪಥಾತಿ” ಎಂದಾ ಕ್ಷಣ ಆಗ್ನೇಯದಲ್ಲಿ ಗೋವಿನ ತಲೆಯನ್ನು ಇರಿಸಲಾಗುವುದು.
5. ಕೃಷ್ಣ ಯಜುರ್ವೇದ ; ಎಂಟನೆಯ ಅನುಚ್ಚೇದದಲ್ಲಿ ಪಶುವಧೆ ಕುರಿತು ಪೂರ್ತಿಯಾಗಿ ಹೇಳಲಾಗಿದೆ. (ಕೃಷ್ಣಾ ಯಜುರ್ವೇದ -1, ದಾಶರಥಿ ರಂಗಾಚಾರ್ಯ ರಚನೆ – page -49)
ಕ್ರಿ.ಪೂ. 600ರ ನಂತರದ ಕಾಲವನ್ನು ಉಪನಿಷತ್ತುಗಳು, ಬ್ರಾಹ್ಮಣರ ಕಾಲ ಎನ್ನಲಾಗಿದೆ. ಆ ಕಾಲದಲ್ಲೂ ಕೂಡ ಗೋವಧೆ ಗೋಭಕ್ಷಣೆ ಇವೆರಡೂ ಋಷಿಗಳಿಗೆ ಸಾಮಾನ್ಯ ವಿಷಯಗಳೇ ಆಗಿದ್ದವು.
ಉದಾಹರಣೆಗೆ ತೈತ್ತರೀಯ ಬ್ರಾಹ್ಮಣ್ಯಾ; 3; 9.8.2-3 ಹೀಗೆ ಇದೆ. ” ಗಾಮಾಲಭತೆ (2) ಯಜ್ಞ ವೈಗೌಃ ಯಜ್ಞಮೇವಗಳಭತೆ, ಅಧೋ ಅನ್ನ ವೈಗೌಃ, ಅನ್ನಮೇವಾ ವರುನ್ಥೆ… ಎಂದಾ ಕ್ಷಣ ಅವನು ದನವನ್ನು ಗಟ್ಟಿಯಾಗಿ ಹಿಡಿದುಕೊಳ್ಳತ್ತಾನೆ. ಆ ದನವನ್ನು ಬಲಿಕೊಡುತ್ತಾರೆ. ಆ ರೀತಿಯಾಗಿ ಬಲಿಯನ್ನು ಅವರು ಪಡೆಯುತ್ತಾರೆ.
ಅಷ್ಟು ಮಾತ್ರವಲ್ಲದೆ ಆ ಹಸು ಆಹಾರವೇ ಆಗುತ್ತದೆ. ಮತ್ತೊಂದು ಉದಾಹರಣೆ ಎಂದರೆ ಗೋವು ಎತ್ತುಗಳ ಮೃದುವಾದ ಮಾಂಸವು ದೊರಕಿದರೆ ಅದನ್ನೇ ತಿನ್ನುತ್ತಿರುತ್ತೇನೆ ಎಂದು ಯಾಜ್ಞ ವಲ್ಕ್ಯ ಮಹರ್ಷಿ ಶತಪಥ ಬ್ರಾಹ್ಮಣ್ಯಾದಲ್ಲಿ ಹೇಳುತ್ತಾನೆ.
ತಸ್ಮಾದ್ವೇಣು ಹೋರ್ನಾಶ್ನಿಯಾತ್, ಅಡುಹೋವಾಚ, ಯಜ್ಞವಲ್ಕ್ಯಹಃ ಅಶ್ನಾಮಿಯೇ ವಾಹಂ ಮಾಂಸಂ ಚೇದ್ಭವತಿತಿ (ಶತಪಥ ಬ್ರಾಹ್ಮಣ್ಯಾ 3.2.1.21)
ಐತರೇಯ ಬ್ರಾಹ್ಮಣ್ಯಾವೂ ಕೂಡಾ ಹೀಗೆ ಹೇಳುತ್ತದೆ.
ತದ್ ಯದೈವಾದೋ ಮನುಷ್ಯರಾಜು ಆಗತೇ ನ್ಯಾಸ್ಮಿನ್ ಹರ್ವತಿ ಉಕ್ಷಾಣಾಂವಾ ವೆಹತಂ ವಾಕ್ಷದಂತೆ. (ಐತರೇಯ ಬ್ರಾಹ್ಮಣ್ಯಾ 3.4)
ಅಂದರೆ ಅಥಿತಿಯಾಗಿ ರಾಜ ಅಥವಾ ಗೌರವಾರ್ಹ ವ್ಯಕ್ತಿಗಳು ಬಂದರೆ ಜನರು ಗೋವವನ್ನು ಇಲ್ಲವೇ ಎತ್ತುಗಳನ್ನು ವಧಿಸುತ್ತಾರೆ ಎಂದರ್ಥ.
ಈ ಅಂಶವನ್ನೇ ಮಹಾಕವಿ ಭವಭೂತಿ ತನ್ನ ಉತ್ತರ ರಾಮ ಚರಿತ್ರೆಯಲ್ಲಿ”ನಾಟಕೀಯವಾಗಿ ಬಣ್ಣಿಸುತ್ತಾರೆ. ಈ ನಾಟಕದಲ್ಲಿ ಬರುವ ನಾಲ್ಕನೇ ಅಂಕೆ. ಮಿಶ್ರ ವಿಷ್ಕಂಭದಲ್ಲಿ ಇಬ್ಬರು ಶಿಷ್ಯರ ನಡುವೆ ಸಂಭಾಷಣೆ ಹೀಗೆ ನಡೆಯುತ್ತದೆ.
ಮೊದಲನೇ ಶಿಷ್ಯ… ಮಿತ್ರ! ಈ ದಿನ ಅತಿಥಿಗಳು ಬರುವುದರಿಂದ ವಾಲ್ಮೀಕಿ ಮುನೀಂದ್ರನ ಆಶ್ರಮ ಎಂತಹ ಒಳ್ಳೆಯ ಪರಿಮಳದಿಂದ ಗಮಗಮಿಸುತ್ತಿದೆ ನೋಡಿದೆಯಾ…
ಎರಡನೆ ಶಿಷ್ಯ.. ಹೌದು ಹೆಂಗಸರನ್ನು ಜೊತೆಯಲ್ಲೇ ಕರೆತಂದ ಆ ಅತಿಥಿಗಳು ಯಾರು?
ಮೊದಲ ಶಿಷ್ಯ.. ವಶಿಷ್ಟರು.
ಎರಡನೇ ಶಿಷ್ಯ.. ಒಹೋ.. ಅವರು ಬಂದರೋ ಇಲ್ಲವೋ ಆ ಕಡ್ಡಿಗೋವನ್ನೂ ಆಮಂತ್ರಣಕ್ಕಾಗಿ ಕೊಯ್ದುಬಿಟ್ಟರು.
ಮೊದಲನೇ ಶಿಷ್ಯ.. ಹಾಗೆ ಹೇಳಬಾರದು. ಹಿರಿಯರು ಬಂದರೆ ಮದುಪರ್ಕವನ್ನು ಸಮರ್ಪಿಸಬೇಕೆಂದು, ಅದರಲ್ಲಿ ತಪ್ಪದೇ ಗೋವಿನ ಸೂಪನ್ನಾಗಲಿ, ತೊಡೆಯ ಭಾಗವನ್ನಾಗಲಿ ಕುಯ್ದು ಇಡಬೇಕೆಂದು ಅಪಸ್ತಂಭ ಮುನಿಂದ್ರರು ಧರ್ಮಶಾಸ್ತ್ರದಲ್ಲಿ ಸ್ಪಷ್ಟವಾಗಿ ಬರೆದಿದ್ದಾರಲ್ಲವೇ..
ಎರಡನೇ ಶಿಷ್ಯ.. ಆ!
ಹಿಂದೂಗಳ ವರ್ಣಾಶ್ರಮ, ಧರ್ಮ, ಆಚಾರ, ವ್ಯವಹಾರಗಳನ್ನು ನಿರ್ದೇಶಿಸಿದ ಸ್ಮೃತಿಗಳು ಮನುಸ್ಮ್ೃತಿ ಅಗ್ರಸ್ತಾನದಲ್ಲಿದೆ. ಅದರಲ್ಲಿ ಮನು ಮದುಪರ್ಕ, ಶ್ರದ್ದಾ ಕರ್ಮದಂತಹ ಸಂದರ್ಭಗಳಲ್ಲಿ ಗೋವನ್ನು ತಿನ್ನಲು ಅನುಮತಿಸುತ್ತಾನೆಂದು, ಇದು ವೈದಿಕ, ವೈದಿಕ ನಂತರದ ಆಚಾರವೆಂದು ಮನುಸ್ಮ್ೃತಿ-5
27ಕ್ಕೆ ವ್ಯಾಖ್ಯಾನ ಮಾಡುತ್ತಾ ಮೇಧಾತಿಥಿ ಹೇಳುತ್ತಾನೆ.
“ಗೋವ್ಯಜ ಮಾಂಸ ಮಪ್ರೋಕ್ಷಿತಮ್ ಭಕ್ಷಯೆದಿತ್ಯ ನೆನೈತದನು ಪ್ರಾಕೃತ್ಯಾನಾಮೇವಾ ಸದ್ರೂಪಮನೂದ್ಯತೆ”
ಅಷ್ಟೇ ಅಲ್ಲ. ಮನುವಾಗಲಿ ಯಜ್ಞವಲ್ಕ್ಯನಾಗಲಿ ಗೋವಿನ ಬಾಯಿ ಅಶುದ್ದು ಎನ್ನುತ್ತಾರೆ.
ಗೋವು ವಾಸನೆ ಹಿಡಿದ ಆಹಾರವನ್ನು ಗುಂಡಿ ಹಗೆದು ಮುಚ್ಚಬೇಕಂದು ಮನು ಹೇಳುತ್ತಾನೆ. (ಮನುಸ್ಮ್ೃತಿ 5.125)
ಮೇಕೆಗಳ, ಕುದುರೆಗಳ ಬಾಯಿ ಶುದ್ಧವಾದುದು ಆದರೆ ಗೋವಿನ ಬಾಯಿ ಮತ್ತು ಮನುಷ್ಯರ ಮಲ ಅಶುದ್ಧವಾದುದು. ಎಂದು ಯಜ್ಞವಲ್ಕ್ಯ ಹೇಳುತ್ತಾನೆ. (ಯಜ್ಞವಲ್ಕ್ಯ ಸ್ಮೃತಿ 1.194)
ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಸಂಘಪರಿವಾರಕ್ಕೆ ಸೇರಿದ ಸಾಹಿತಿ ಕೆ.ಆರ್.ಮಲ್ಕಾನಿ RSS ಅವರ ಪತ್ರಿಕೆ ಆರ್ಗನೈಸರ್ ನಲ್ಲಿ 1966 ನವೆಂಬರ್ 11ರಂದು ಪತ್ರಿಕೆಯ ಸಂಪಾದಕೀಯದಲ್ಲಿ “ಸಹಜವಾಗಿ ಮರಣ ಹೊಂದಿದ ಗೋವಿನ ಮಾಂಸವನ್ನು ತಿನ್ನಬಹುದೆಂದು ಬರೆದರು.
ಆದುದರಿಂದ ಪ್ರಚೀನ ಶ್ರುತಿ ಸ್ಮೃತಿಗಳು ಗೋ ಮಾಂಸ ಭಕ್ಷಣೆಯನ್ನು ಅಂಗೀಕರಿಸಿದ್ದವು ಎಂದು ಸಾಬೀತಾಗುತ್ತದೆ.
ಸಂಘಪರಿವಾರದ ಸಾಹಿತಿಗಳು ಸಹಜ ಮರಣ ಹೊಂದಿದ ಗೋವಿನ ಮಾಂಸವನ್ನು ತಿನ್ನುವುದನ್ನು ಅಂಗೀಕರಿಸಿದ್ದಾರೆ.
ಇಂದಿನ Rss ಸಂಘಪರಿವಾರದ ಗೋವಧೆ ನಿಶೇಧ ಕಾರ್ಯಾಚರಣೆಯಲ್ಲಾ ಮುಸ್ಲಿಂ, ದಲಿತರ ದಮನಕ್ಕಾಗಿಯೇ..
ಇವರಿಗೆ ಹಿಂದೂ ಶ್ರುತಿ ಸ್ಮೃತಿಗಳ ಮೇಲೆ ಬಿಡಿಗಾಸಿನಷ್ಟು ಗೌರವವೂ ಇಲ್ಲ ಎಂಬುದು ಅರ್ಥವಾಗುತ್ತದೆ. ಈ ವಿಚಾರಗಳು ದೇಶಭಕ್ತರಿಗೆ ಅರ್ಥವಾಗಬಹುದೆಂದು ಆಶಿಸುತ್ತೇನೆ.
(ಇದನ್ನು ತೆಲುಗು ಮೂಲಗಳಿಂದ ಸಂಗ್ರಹಿಸಲಾಗಿದೆ.)
- ರೇಣುಕಾ ಭಾರತಿ
Leave a reply