ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ಕುರಿತು ತಮಿಳು ನಿಯತಕಾಲಿಕೆ ‘ವಿಕಟನ್’ ಪ್ರಕಟಿಸಿದ ಕಾರ್ಟೂನ್ ಸಂಚಲನ ಮೂಡಿಸಿದೆ. ಇದಕ್ಕೆ ಕೇಂದ್ರ ಸರ್ಕಾರ ಗಂಭೀರವಾಗಿ ಸ್ಪಂದಿಸಿದೆ.
ನ್ಯೂಡೆಲ್ಲಿ : ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ಕುರಿತು ತಮಿಳು ನಿಯತಕಾಲಿಕೆ ‘ವಿಕಟನ್’ ಪ್ರಕಟಿಸಿದ ಕಾರ್ಟೂನ್ ಸಂಚಲನ ಮೂಡಿಸಿದೆ. ಇದಕ್ಕೆ ಕೇಂದ್ರ ಸರ್ಕಾರ ಗಂಭೀರವಾಗಿ ಸ್ಪಂದಿಸಿದೆ. ‘ವಿಕಟನ್’ ಪತ್ರಿಕೆಯ ವೆಬ್ ಸೈಟ್ ಸ್ಥಗಿತಗೊಳಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕ್ರಮ ಟೀಕೆಗೆ ಕಾರಣವಾಗಿದೆ. ಶುಕ್ರವಾರ ರಾತ್ರಿಯಿಂದ ‘ವಿಕಟನ್’ ವೆಬ್ಸೈಟ್ ಅನ್ನು ಕೇಂದ್ರ ನಿರ್ಬಂಧಿಸಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಸೇರಿದಂತೆ ಹಲವು ರಾಜಕಾರಣಿಗಳು ಕೇಂದ್ರದ ಕ್ರಮವನ್ನು ಖಂಡಿಸಿದ್ದಾರೆ.
ಭಾರತೀಯ ವಲಸಿಗರನ್ನು ಅಮೆರಿಕದಿಂದ ಹೊರಹಾಕುತ್ತಿರುವ ವಿಷಯ ಗೊತ್ತೇ ಇದೆ. ಈ ಬಗ್ಗೆ ಮೋದಿಯವರು ಮೌನ ವಹಿಸಿರುವುದನ್ನು ಪ್ರಶ್ನಿಸಿ ‘ವಿಕಟನ್’ ನಿಯತಕಾಲಿಕೆಯು ಪ್ರಧಾನಿ ನರೇಂದ್ರ ಮೋದಿಯವರ ಕೈಕಾಲುಗಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಂಕೋಲೆಗಳನ್ನು ತೊಡಸಿರುವ ಬಗ್ಗೆ ಕಾರ್ಟೂನ್ ಅನ್ನು ಪ್ರಕಟಿಸಿತು. ಫೆಬ್ರವರಿ 10ರಂದು ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ಕಾರ್ಟೂನ್ ವಿವಾದಕ್ಕೆ ಕಾರಣವಾಗಿತ್ತು.
Leave a reply