ಕೊಪ್ಪ : ಮಳೆಗಾಲ ಕಳೆದ ಬೆನ್ನಲ್ಲೇ ಕೊಪ್ಪದಲ್ಲಿ ಮಲೆನಾಡಿನ ಸುಪ್ರಸಿದ್ಧ ಖಾದ್ಯಗಳು, ವೈವಿಧ್ಯಮಯ ತಿಂಡಿ ತಿನಿಸುಗಳು, ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳು, ವೈವಿಧ್ಯಮಯ ಸಾಹಿತ್ಯಗಳು, ಉಡುಪುಗಳು, ಆಭರಣಗಳು ಮತ್ತು ಅಲಂಕಾರಿಕ ವಸ್ತುಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮವನ್ನು ಶನಿವಾರದಂದು ಇನ್ನರ್ ವ್ಹೀಲ್ ಕ್ಲಬ್ ಸೆಂಚುರಿ ಇವರ ವತಿಯಿಂದ ಕೊಪ್ಪದ ಪುರಭವನದಲ್ಲಿ ಏರ್ಪಡಿಸಲಾಗಿದೆ.

ಮಲೆನಾಡಿನ ಸುಪ್ರಸಿದ್ಧ ಖಾದ್ಯಗಳು, ವೈವಿಧ್ಯಮಯ ಆರೋಗ್ಯಕರ ತಿಂಡಿ ತಿನಿಸುಗಳ ಜೊತೆ ರೆಡಿಮೇಡ್ ಬಟ್ಟೆಗಳು, ಪುಟ್ಟ ಹೆಜ್ಜೆ ಮಕ್ಕಳ ಉಡುಪುಗಳು, ಕಂಚಿ, ರೇಷ್ಮೆ, ಫ್ಯಾನ್ಸಿ ಸೀರೆಗಳು, ಚೂಡಿದಾರ್ ಗಳು, ಬುರ್ಖಾಗಳು, ಬೆಡ್ ಶೀಟುಗಳು, ಅಲಂಕಾರಿಕ ಸಸ್ಯಗಳು (ಗಿಡಗಳು) ಆಕರ್ಷಕ ಆಭರಣಗಳು ಮುಂತಾದವುಗಳು ಒಂದೇ ಸೂರಿನಡಿ ಸಿಗುವಂತೆ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ. ಜನರು ಬೃಹತ್ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಸೆಂಚುರಿ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಇನ್ನರ್ ವ್ಹೀಲ್ ಕ್ಲಬ್ ಕರೆ ನೀಡಿದೆ.

ಯಕ್ಷಗಾನ ಇದೇ ದಿನ ಸಂಜೆ..
ಸತ್ಯ, ಶಾಂತಿ, ಸಾಮರಸ್ಯದೆಡೆಗೆ ನಡೆ. ಅನ್ಯಾಯ, ಅಕ್ರಮ, ಅನೀತಿಗೆ ತಡೆ! ಬಡವರ ಬಂಧು ಸಾಂಸ್ಕೃತಿಕ ವೇದಿಕೆ ಕೊಪ್ಪ ಇವರ ಆಶ್ರಯದಲ್ಲಿ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಇವರಿಂದ ಪೆರ್ಡೂರು ಮೇಳದ ಅತಿಥಿ ಕಲಾವಿದರಿಂದ “ಪಾಪಣ್ಣ ವಿಜಯ ಗುಣ ಸುಂದರಿ” ಯಕ್ಷಗಾನ ಅದೇ ಶನಿವಾರ (ನಾಳೆ) ಸಂಜೆ 6 ಗಂಟೆಯಿಂದ ನಡೆಯಲಿದೆ. ಈ ಯಕ್ಷಗಾನವನ್ನು ವೀಕ್ಷಿಸಲು ಎಲ್ಲಾ ಕಲಾಭಿಮಾನಿಗಳನ್ನು, ಸರ್ವರನ್ನೂ ಬಡವರ ಬಂಧು ಸಾಂಸ್ಕೃತಿಕ ವೇದಿಕೆ ಆಹ್ವಾನಿಸಿದೆ

Leave a reply