ಆಗ್ರಾ : ಉತ್ತರ ಪ್ರದೇಶದ ಆಗ್ರಾ ಬಳಿ ಮಿಗ್-29 ಯುದ್ಧ ವಿಮಾನ ಪತನಗೊಂಡಿದೆ. ಪಂಜಾಬ್ನ ಆದಂಪುರದಿಂದ ಹೊರಟಿದ್ದ ಈ ಯುದ್ಧ ವಿಮಾನ ಆಗ್ರಾಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಎಚ್ಚೆತ್ತ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ.

ಪತನಗೊಂಡ ವಿಮಾನದಿಂದ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಲ್ಯಾಂಡಿಂಗ್ಗೆ ಎರಡು ಕಿಲೋಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಕಾಗರೋಲ್ನ ಸೋನಿಗಾ ಗ್ರಾಮದ ಬಳಿ ಖಾಲಿ ಗದ್ದೆಯಲ್ಲಿ ಪೈಲಟ್ ವಿಮಾನ ಪತನಗೊಂಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜನನಿಬಿಡ ಪ್ರದೇಶದಲ್ಲಿ ಪತನಗೊಂಡಿದ್ದರೆ ಭಾರಿ ನಷ್ಟಗಳು ಉಂಟಾಗುತ್ತಿತ್ತು ಎಂದರು. ಅಪಘಾತದ ಕುರಿತು ತನಿಖೆಗೆ ಆದೇಶಿಸಲಾಗುವುದು ಎಂದರು.

Leave a reply