ನ್ಯೂಡೆಲ್ಲಿ : ಸಾರ್ವಜನಿಕ ವಲಯದ ಟೆಲಿಕಾಂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಲೋಗೋ ಬದಲಾಗಿದೆ. ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಂಗಳವಾರ ನವದೆಹಲಿಯಲ್ಲಿ ಬಿಎಸ್ಎನ್ಎಲ್ನ ಹೊಸ ಲೋಗೋ ಸೇರಿದಂತೆ ಏಳು ಹೊಸ ಸೇವೆಗಳಿಗೆ ಚಾಲನೆ ನೀಡಿದರು. ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು BSNL ಸ್ಪ್ಯಾಮ್ ಸಂದೇಶಗಳು ಸೇರಿದಂತೆ ಸ್ಕ್ಯಾಮ್ ಕರೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ವ್ಯವಸ್ಥೆಗಳನ್ನು ಮಾಡುತ್ತಿದೆ. ಅದರ ಫೈಬರ್ ಇಂಟರ್ನೆಟ್ ಬಳಕೆದಾರರಿಗಾಗಿ ರಾಷ್ಟ್ರೀಯ ವೈಫೈ ರೋಮಿಂಗ್ ಸೇವೆಗಳನ್ನು ಪ್ರಾರಂಭಿಸಿದೆ.
ಇದು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ BSNL ಹಾಟ್ಸ್ಪಾಟ್ಗಳಲ್ಲಿ ಹೆಚ್ಚಿನ ವೇಗದ ಸೇವೆಗಳನ್ನು ಒದಗಿಸಲು ಅವಕಾಶ ಕಲ್ಪಿಸುತ್ತದೆ. ಫೈಬರ್ ಇಂಟರ್ನೆಟ್ ಹೊಂದಿರುವ ಬಳಕೆದಾರರು 500 ಕ್ಕೂ ಹೆಚ್ಚಿನ ಲೈವ್ ಚಾನಲ್ಗಳೊಂದಿಗೆ ಫೇ ಟಿವಿ ಆಯ್ಕೆಗಳೊಂದಿಗೆ ಕೂಡಿದ ಸೇವೆಗಳನ್ನು ಪಡೆಯಬಹುದು. ಟಿವಿ ಸ್ಟ್ರೀಮಿಂಗ್ಗೆ ಬಳಸುವ ಡೇಟಾವನ್ನು ಮಾಸಿಕ ಇಂಟರ್ನೆಟ್ ಡೇಟಾ ಎಂದು ಪರಿಗಣಿಸಲಾಗುವುದಿಲ್ಲ ಎಂದು BSNL ಸ್ಪಷ್ಟಪಡಿಸಿದೆ.
ಸ್ವಯಂಚಾಲಿತ ಕಿಯೋಸ್ಕ್ಗಳ ಮೂಲಕ ಸಿಮ್ ಕಾರ್ಡ್ಗಳನ್ನು ಸುಲಭವಾಗಿ ಖರೀದಿಸಲು ಮತ್ತು ಅಪ್ಗ್ರೇಡ್ ಮಾಡಲು ಅನುಕೂಲ ಮಾಡಿಕೊಡುತ್ತದೆ.
ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್, ಜಿಯೋ ಮತ್ತು ಭಾರ್ತಿ ಏರ್ಟೆಲ್ಗೆ ಹೋಲಿಸಿದರೆ ಈಗಾಗಲೇ ಕಡಿಮೆ ದರದಲ್ಲಿ ಸೇವೆಗಳನ್ನು ಒದಗಿಸುತ್ತಿರುವ ಬಿಎಸ್ಎನ್ಎಲ್, ಮುಂಬರುವ ದಿನಗಳಲ್ಲಿ ರೀಚಾರ್ಜ್ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿರುವುದು ಗಮನಾರ್ಹ. ಆದರೆ, ಬಿಎಸ್ಎನ್ಎಲ್ ಲೋಗೋವನ್ನು ಕೇಸರಿ ಬಣ್ಣವಾಗಿ ಬದಲಾಯಿಸಿರುವುದಕ್ಕೆ ಪ್ರತಿಪಕ್ಷಗಳು ಮತ್ತು ಗ್ರಾಹಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
Leave a reply