ನ್ಯೂಡೆಲ್ಲಿ : ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿಂಗ್ ವೈದ್ಯೆಯ ಮೇಲೆ ನಡೆದ ಭಯಾನಕ ಅತ್ಯಾಚಾರ, ಹತ್ಯೆ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಲ್ಲಿ ವೈದ್ಯರು ಇನ್ನೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರು ಕೆಲಸ ಮಾಡುವ ಸ್ಥಳದಲ್ಲಿ ಭದ್ರತೆಯೇ ಇಲ್ಲ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಬಂಗಾಳದ ವೈದ್ಯರ ಮುಷ್ಕರಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳು ಕೆಲಸ ಮಾಡುವ ಸ್ಥಳದಲ್ಲಿ ಅವರ ಸುರಕ್ಷತೆ ಹೇಗಿದೆ ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಪ್ರಮುಖ ವಿಷಯಗಳು ಬಹಿರಂಗವಾಗಿವೆ.
ಈ ಸಮೀಕ್ಷೆಯಲ್ಲಿ, ಶೇಕಡಾ 50 ಕ್ಕಿಂತ ಹೆಚ್ಚು ವೈದ್ಯಕೀಯ ಸಿಬ್ಬಂದಿಗಳು ತಾವು ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷಿತವಾಗಿರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವರ್ಧಮಾನ್ ಮಹಾವೀರ್ ವೈದ್ಯಕೀಯ ಕಾಲೇಜು, ಸಫ್ದರ್ಜಂಗ್ ಆಸ್ಪತ್ರೆ ಮತ್ತು ದೆಹಲಿ ಏಮ್ಸ್ ಜಂಟಿಯಾಗಿ ಈ ಅಧ್ಯಯನವನ್ನು ನಡೆಸಿದ್ದು, ವೈದ್ಯಕೀಯ ವ್ಯವಸ್ಥೆಯಲ್ಲಿನ ಸಿಬ್ಬಂದಿಯ ಸುರಕ್ಷತೆಯಲ್ಲಿನ ನ್ಯೂನತೆಗಳನ್ನು ಬಹಿರಂಗಪಡಿಸಿದೆ. ದೇಶಾದ್ಯಂತ ವಿವಿಧ ವೈದ್ಯಕೀಯ ಸಂಸ್ಥೆಗಳಿಂದ ಒಟ್ಟು 1,566 ಆರೋಗ್ಯ ಕಾರ್ಯಕರ್ತರ (869 ಮಹಿಳೆಯರು ಮತ್ತು 697 ಪುರುಷ ಕೆಲಸಗಾರರು) ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ಎಲ್ಲಾ ಅಧ್ಯಾಪಕ ಸಿಬ್ಬಂದಿ, ನರ್ಸಿಂಗ್ ಸಿಬ್ಬಂದಿ, ವೈದ್ಯಕೀಯ ಅಧಿಕಾರಿಗಳು, ಸಹಾಯಕ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಇಂಟರ್ನ ಗಳು ಎಲ್ಲರಿಂದಲೂ ವಿವರಗಳನ್ನು ತೆಗೆದುಕೊಳ್ಳಲಾಗಿದೆ.
ಸುಮಾರು ಅರ್ಧದಷ್ಟು ವರ್ಕರ್ ಗಳಿಗೆ ಪ್ರತ್ಯೇಕವಾಗಿ ಡ್ಯೂಟಿ ಕೊಠಡಿಗಳಿಲ್ಲ. ಹೆಚ್ಚಿನ ಗಂಟೆಗಳ ಕಾಲ ಕರ್ತವ್ಯದಲ್ಲಿ ಇರಬೇಕಾಗುತ್ತದೆ. ಕೆಲವೊಮ್ಮೆ ರಾತ್ರಿಪಾಳಿ ಕೂಡ ಮಾಡಬೇಕಿರುತ್ತದೆ. ಇಲ್ಲಿಯವರೆಗೆ ಲಭ್ಯವಿರುವ ಡ್ಯೂಟಿ ಕೊಠಡಿಗಳು ಸಾಕಷ್ಟು ಸ್ಥಳಾವಕಾಶ, ಗಾಳಿ, ಬೆಳಕು ಇಲ್ಲದೇ, ಕೊಳಕು ಮತ್ತು ಗಲೀಜುನಿಂದ ಇದೆ. 70 ಪ್ರತಿಶತದಷ್ಟು ವರ್ಕರ್ ಗಳು ತಾವು ಸಮರ್ಪಕವಲ್ಲದ ಭದ್ರತಾ ಸಿಬ್ಬಂದಿಯನ್ನು ಹೊಂದಿದ್ದಾರೆಂದು ಭಾವಿಸುತ್ತಾರೆ. 62 ರಷ್ಟು ಜನರು ತುರ್ತು ಅಲಾರ್ಟ್ ವ್ಯವಸ್ಥೆಯು ತಕ್ಕ ಪ್ರಮಾಣದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಕಣ್ಗಾವಲು, ಐಸಿಯು ಮತ್ತು ಮನೋವೈದ್ಯಕೀಯ ವಾರ್ಡ್ಗಳಂತಹ ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಯಾವುದೇ ಸೂಕ್ತ ಭದ್ರತೆಗಳು ಇಲ್ಲ. ಮತ್ತು ಅವುಗಳಿಗೆ ನಿಯಂತ್ರಣ ಪ್ರವೇಶವಿಲ್ಲ ಎಂದು ವಿವರಿಸಿದ್ದಾರೆ. 90 ರಷ್ಟು ಸಂಸ್ಥೆಗಳು ಶಸ್ತ್ರಾಸ್ತ್ರಗಳು ಮತ್ತು ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಪ್ರವೇಶಿಸದಂತೆ ತಡೆಯಲು ಷರತ್ತುಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳು ಉತ್ತಮ ಭದ್ರತೆಯನ್ನು ಹೊಂದಿವೆ ಎಂದು ಪರಿಗಣಿಸಲಾಗಿದೆ. ಕೇಂದ್ರ ಸರ್ಕಾರಿ ಸಂಸ್ಥೆಗಳಿಗಿಂತ ರಾಜ್ಯ ಸರ್ಕಾರಿ ಸಂಸ್ಥೆಗಳ ಸ್ಥಿತಿ ಹದಗೆಟ್ಟಿದೆ ಎಂದರು. 70 ರಷ್ಟು ಜನರು ತುರ್ತು ಎಚ್ಚರಿಕೆ ಸಮರ್ಪಕವಾಗಿಲ್ಲ ಎಂದು ವರದಿ ಮಾಡಿದ್ದಾರೆ. 81.3 ರಷ್ಟು ಆರೋಗ್ಯ ಕಾರ್ಯಕರ್ತರು ಹಿಂಸೆಯನ್ನು ಎದುರಿಸುತಗತಿರುವುದಾಗಿ ತಿಳಿಸಿದ್ದಾರೆ. ಹಿಂಸೆಯನ್ನು ಎದುರಿಸಿದವರಲ್ಲಿ ಶೇ. 44.1 ರಷ್ಟು ಜನರು ಆ ಘಟನೆಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಿಲ್ಲ ಎಂದು ಭಾವಿಸುತ್ತಾರೆ.
ಶೇ. 80 ರಷ್ಟು ಜನರಿಗೆ ತುರ್ತು ಪರಿಸ್ಥಿತಿಯಲ್ಲಿ ಯಾರನ್ನು ಸಂಪರ್ಕಿಸಬೇಕು ಎಂದು ತಿಳಿದಿಲ್ಲ ಎಂದು ಈ ಸಮೀಕ್ಷೆಯು ಹೇಳಿದೆ. ಸೆಕ್ಯುರಿಟಿಗೆ ಸಂಬಂಧಿಸಿದ ಕಳವಳಕಾರಿ ವಿಷಯಗಳನ್ನು ವರದಿ ಮಾಡುವ ಗೌಪ್ಯ ವಿಧಾನ ಶೇ. 70 ರಷ್ಟು ಜನರಿಗೆ ಭದ್ರತಾ ತಿಳಿದಿಲ್ಲ. ಈ ಸಮಸ್ಯೆಗಳನ್ನು ಪರಿಗಣಿಸಬೇಕು ಎಂದು ಅಧ್ಯಯನ ಸಮಿತಿ ಸೂಚಿಸಿದೆ. ಹೈ ರಿಸ್ಕ್ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು, ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಬೇಕು, ಡ್ಯೂಟಿ ಕೊಠಡಿಯ ಪರಿಸ್ಥಿತಿಗಳನ್ನು ಸುಧಾರಿಸುವುದು ಮತ್ತು ಹಿಂಸೆಯನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಸ್ಪಷ್ಟವಾದ ಪ್ರೋಟೋಕಾಲ್ಗಳನ್ನು ರಚಿಸಿ, ಕಾರ್ಯಗತಗೊಳಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ.
Leave a reply