ಕೆಲವು ಪದಗಳು ಎಲ್ಲಿಂದ ಬಂದವು ಎಂಬುದನ್ನು ಪರಿಶೀಲಿಸಿದರೆ, ನಮ್ಮ ನಮ್ಮ ಚರಿತ್ರೆಯ ಘಟ್ಟದ ಕೆಲವು ಬೆಳಕಿಗೆ ಬರುತ್ತವೆ. ಭಾಷಾಶಾಸ್ತ್ರವು ಆರ್ಯರ ಆಗಮನವನ್ನು ಬಲಪಡಿಸುತ್ತದೆ. ಹೇಗೆ ಎಂಬುದನ್ನು ನೋಡೋಣ! ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಇರಾನ್ನಲ್ಲಿ ‘ಹಖಿಮಾನಿ’ ರಾಜವಂಶವಿತ್ತು. ಆ ವಂಶದಲ್ಲಿ ಮೊದಲನೆಯ ಡೇರಿಯಸ್ ಪ್ರಸಿದ್ಧನಾಗಿದ್ದನು. ಅವನು ಸೆಪ್ಟೆಂಬರ್ 550-ಅಕ್ಟೋಬರ್ 436 BCE ಸಾಮಾನ್ಯ ಯುಗಕ್ಕೆ ಮುನ್ನ ಸುಮಾರು 64 ವರ್ಷಗಳ ಕಾಲ ಜೀವಿಸಿದನು. ಈ ಹಕಿಮನಿ ರಾಜವಂಶವನ್ನು ಅಖಿಯಾಮೆನಿಡ್ ರಾಜವಂಶ ಎಂದೂ ಕೂಡ ಕರೆಯುತ್ತಾರೆ. ಈ ಪದವನ್ನು ಪಾಲಿಸಿದರೆ – ‘ಸ್ನೇಹಿತರ ಹೃದಯದಲ್ಲಿರುವವರು’ ಎನ್ನಬಹುದು. ಇತಿಹಾಸದಲ್ಲಿ ಡೇರಿಯಸ್ ದಿ ಗ್ರೇಟ್ ಎಂದು ದಾಖಲಿಸಲಾದ ಈ ಚಕ್ರವರ್ತಿ (Emperor) ವಿಶಾಲವಾದ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಇರಾನ್ನಿಂದ ನಮ್ಮ ಸಿಂಧೂ ಪ್ರದೇಶದವರೆಗೆ ಅವನ ರಾಜ್ಯ ವಿಸ್ತರಿಸಿತು. ಇಲ್ಲಿ ಮುಖ್ಯವಾಗಿ ಉಲ್ಲೇಖಿಸಬೇಕಾದ ಅಂಶವೆಂದರೆ ಈ ಇರಾನಿ ಕುಲದವರು ತಾವು ಆರ್ಯನ ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಇದು ಅವರ ಶಿಲಾಶಾಸನಗಳ ಮೂಲಕ ತಿಳಿಯುತ್ತದೆ. ಅವರು ಭಾರತವನ್ನು ಪ್ರವೇಶಿಸಿದರು ಎಂಬುದಕ್ಕೆ ಚಾರಿತ್ರಿಕ ಪುರಾವೆಗಳಿವೆ. ಈ ಹಕೀಮನಿ ವಂಶದವರು ನಮ್ಮ ಭಾರತಕ್ಕೆ ಬಂದಾಗ ಕೆಲವು ಸಂಗತಿಗಳನ್ನು ನೋಡಿ ಆಶ್ಚರ್ಯಕ್ಕೊಳಗಾದರು. ಭಾರತದಲ್ಲಿ ಇಲ್ಲಿ ಬಾವಿಗಳಿವೆ. ಅವರ ಅರಬ್ ಪ್ರದೇಶದಲ್ಲಿ ಇಲ್ಲ. ಇಲ್ಲಿ ಆನೆಗಳಿವೆ. ಅವರ ಪ್ರದೇಶದಲ್ಲಿ ಅಲ್ಲ. ನಮ್ಮ ದೇಶದಲ್ಲಿ ದೊಡ್ಡ ಹುಣಸೆಮರಗಳಿವೆ. ಅವರ ದೇಶದಲ್ಲಿ ಇಲ್ಲ. ಇದೆಲ್ಲವೂ ಅವರಿಗೆ ಆಶ್ಚರ್ಯದ ಸಂಗತಿಯಾಗಿತ್ತು.
ಅರಬ್ ದೇಶಗಳು ನೀರಿಗಾಗಿ ಮಳೆಯನ್ನೇ ಅವಲಂಬಿಸಿವೆ. ಮಳೆ ಬಂದರೆ ಪರ್ವತಗಳಿಂದ ಹರಿದುಬರುವ ನೀರನ್ನು ಸಂಗ್ರಹಿಸಿಟ್ಟುಕೊಂಡು ಜಾಗರೂಕತೆಯಿಂದ ಬಳಸುತ್ತಾರೆ. ನಮಗೆ ಇಲ್ಲಿ ಸಿಂಧೂ ನಾಗರಿಕತೆಯ ಕಾಲದಿಂದಲೂ ಬಾವಿಗಳಿವೆ. ಹಾಗಾಗಿ ಇಲ್ಲಿಯವರಿಗೆ ಅದು ಹೊಸದೇನೂ ಅಲ್ಲ. ಇರಾನಿಯನ್ನರಿಗೆ ಹೊಸ ಮಳೆ ಸುರಿಸುವ ದೇವರು ಇಂದ್ರನೆಂಬ ನಂಬಿಕೆ ಇತ್ತು. ಇದು ಅವರ ಪುಗರ್ ಕೋಯಿ ಶೀಲಾಶಾಸನಗಳಲ್ಲಿದೆ. ಆದರೆ ಅವರು ಇಂದ್ರನನ್ನು ‘ಇಂದರ್’ ಎಂದು ಕರೆದರು. ಇಂದರ್ ಎಂದರೂ ನೀರೆ, ಸಮುಂದರ್ (ಸಮುದ್ರ) ಎಂದರೂ ನೀರೆ. ಬಂದರ್ ಗಹ್ ಎಂದರೆ ಸಮುದ್ರ ತೀರ. ಅಂದರೆ ಬಂದರ್ ಕೂಡ ನೀರಿಗೆ ಸಂಬಂಧಿಸಿದ ಪದ. ಹಾಗಾಗಿ ಇಲ್ಲಿ ಭಾರತದಲ್ಲಿ ಅವರು ಬಾವಿಗಳನ್ನು ನೋಡಿದರು. ಅದನ್ನು ಇಂದ್ರಗರ್ (ಇಂದ್ರ-ಅಗರ್) ಎಂದು ಕರೆದರು. ಅಗರ್ ಎಂದರೆ ಖಜಾನೆ. ಬಾವಿಗಳು ನೀರಿನ ಸಂಗ್ರಹ ಇರುವ ಖಜಾನೆ ಎಂದು ಅವರು ಭಾವಿಸಿದರು. ಇಂದ್ರಾಗಾರ್ ಅಪಭ್ರಂಶವಾಗಿ ಅನೇಕ ರೀತಿಯಲ್ಲಿ ಬದಲಾವಣೆಯಾಗಿದೆ. ಉತ್ತರ ಭಾರತದಲ್ಲಿ ಅನೇಕ ಸ್ಥಳಗಳಲ್ಲಿ ಬಾವಿಗಳನ್ನು ಭೋಜ್ಪುರಿ ಎಂದು ಕರೆಯಲಾಗುತ್ತದೆ. ಇತರೆ ಪ್ರಾದೇಶಿಕ ಉಪಭಾಷೆಗಳಲ್ಲಿ ಇನಾರಾ / ಇನಾರ್ / ಇಂದಾರ ಎಂದು ಕರೆಯಲಾಗುತ್ತದೆ. ಇವೆಲ್ಲವೂ ಇಂದ್ರಾಗಾರ್ ಗೆ ಮತ್ತೊಂದು ರೂಪಗಳೇ (ವಿಕೃತಿ).
ಮೊದಲ ಬಾರಿಗೆ, ಹಕಿಮನಿ ವಂಶದವರು ಭಾರತದಲ್ಲಿ ಆನೆಗಳನ್ನು ನೋಡಿ ‘ಹಸ್ತೀಮೃಗ’ ಎಂದರು. ಇದರರ್ಥ ಹಸ್ತವನ್ನು ಹೊಂದಿರುವ ಪ್ರಾಣಿ. ಆನೆಯ ಸೊಂಡಿಲನ್ನು ನೋಡಿ ಕೈ ಎಂದು ಭಾವಿಸಿದ್ದರು. ಅಂತಹ ಅವಯವಗಳು ಬೇರಾವ ಪ್ರಾಣಿಗಳಿಗೂ ಇಲ್ಲ. ಇರಾಕ್ ಮತ್ತು ಇರಾನ್ ದೇಶಗಳಲ್ಲಿ ಆನೆಗಳಿಲ್ಲದ ಕಾರಣ, ಅವುಗಳು ಅವರಿಗೆ ವಿಚಿತ್ರವಾದ ಪ್ರಾಣಿ (ಮೃಗಹಸ್ತಿನ್) ಎಂದು ಅವರು ಏಕೆ ಹೇಳುತ್ತಾರೆ – ಎಂದರೆ ಮೃ ಎಂದರೆ ಮಣ್ಣು ಮತ್ತು ಗ ಎಂದರೆ ಚಲನೆ. ಮಣ್ಣಿನ ಮೇಲೆ ಓಡಾಡುವ ಪ್ರಾಣಿ ಎಂದರ್ಥ. ಮನುಷ್ಯನೊಂದಿಗೆ ಭೂಮಿಯಲ್ಲಿ ಸಂಚರಿಸುವ ಎಲ್ಲವೂ ಮೃಗಗಳೇ. ಮರಗಳ ಮೇಲೆ ತಿರುಗಾಡುವ ಮಂಗಗಳನ್ನು ಶಾಖಾಮೃಗ ಎನ್ನುತ್ತಾರೆ. ಹಾಗೆಯೇ ಖಗ-ಖ ಎಂದರೆ ಆಕಾಶ. ಗ ಎಂದರೆ ಚಲನೆ. ಆಕಾಶದಲ್ಲಿ ಸಂಚರಿಸುವ ಪಕ್ಷಿಗಳು. ಹಾಗೆಯೇ ನೋಡಿ ಭೂಗೋಳಕ್ಕೆ ಎದುರು ಇರುವುದನ್ನು ನಾವು ಖಗೋಳ ಎನ್ನುತ್ತೇವೆ ಅಲ್ಲವೇ. ಅದು ಮಣ್ಣಿನ ಗೋಳವಾಗಿದ್ದರೆ, ಅದು ಆಕಾಶ ಎಂದರ್ಥ. ಬಳಕೆಯಲ್ಲಿ, ಆನೆಯು ‘ಹಾತಿ (ಕ್ಯಾನ್) ಆಗಿ ಮಾರ್ಪಟ್ಟಿದೆ. ಇರಾನಿನ ಪ್ರದೇಶದಲ್ಲಿ ಖರ್ಜೂರ (ತಮರ) ಮರವನ್ನು ಹೊರತುಪಡಿಸಿ ಯಾವುದೇ ಹುಣಸೆ ಮರಗಳಿಲ್ಲ. ಮೊಟ್ಟಮೊದಲ ಬಾರಿಗೆ ಇಷ್ಟು ದೊಡ್ಡ ಮರವನ್ನು ನೋಡಿ ಆರ್ಯರು ಬೆರಗಾದರು. ಇದರ ಹಣ್ಣು ಸಿಹಿ ಮತ್ತು ಹುಳಿ ರುಚಿ. ಇದು ಅವರಿಗೆ ಖರ್ಜೂರದಂತೆ ಕಂಡಿತು. ಆದ್ದರಿಂದ ಇದನ್ನು ‘ತಮೆರೆ ಐ ಹಿಂದ್’ (ಭಾರತದ ಖರ್ಜೂರ) ಎಂದು ಹೆಸರಿಟ್ಟರು. ಏಕೆಂದರೆ ಖರ್ಜೂರದ ಹಣ್ಣುಗಳನ್ನು ತಮರೆ ಎಂದು ಕರೆಯುತ್ತಾರೆಯಾದ್ದರಿಂದ ತಮರೆ ಐ ಹಿಂದ್ ಎಂದರು.
ಆಂಗ್ಲರು ಇರಾನ್ ಪ್ರದೇಶದಿಂದ ತೆಗೆದುಕೊಂಡು ಈ ಪದವನ್ನು ‘ತಮರ್-ಇಂಡ್’ (ಭಾರತೀಯ ಖರ್ಜೂರ) ಎಂದು ಕರೆದರು. ಆ ಪದವೇ ಬಳಕೆಯಲ್ಲಿ ತಾಮರಿಂಡ್(ಹುಣಸೆಹಣ್ಣು) (TAMAR- IND) ಆಯಿತು. ಆರ್ಯರು ಭಾರತ ದೇಶವನ್ನು ಪ್ರವೇಶಿಸಿದಾಗ ಅವರು ಮಾಡಿದ ಅರಾಜಕತೆ ಲೆಕ್ಕವಿಲ್ಲದಷ್ಟು. ಆದರೆ ಇಲ್ಲಿ ಕೆಲವು ವಿಷಯಗಳನ್ನು ಚರ್ಚಿಸೋಣ! ಸುಮಾರು ಜನರು ಮನೆಯ ಮುಂಬಾಗಿಲಿಗೆ ಕುಂಬಳಕಾಯಿಯನ್ನು ಕಟ್ಟುತ್ತಾರೆ. ಏಕೆ? ದಿಷ್ಟಿ ಆಗದಿರಲಿ ಎಂದು. ದಿಷ್ಟಿ ಎಂಬುದು ಕೇವಲ ನಂಬಿಕೆಯಷ್ಟೇ. ಅದು ನಿಜವೆಂದು ಸಾಬೀತಾಗಲಿಲ್ಲ. ಮೂಢನಂಬಿಕೆಯಾಗಿಯೇ ಮುಂದುವರಿದಿದೆ. ಅದರ ಮೂಲ ಆಚರಣೆ ಹೇಗೆ ಪ್ರಾರಂಭವಾಯಿತು? ಎಂದು ಅದರ ಚರಿತ್ರೆಯನ್ನು ನೋಡಿದರೆ ಬೆಚ್ಚಿಬೀಳಿಸುವ ಸತ್ಯ ಹೊರಬೀಳುತ್ತದೆ. ಶೃಂಗ ರಾಜವಂಶವು (ಕ್ರಿ.ಪೂ. 185-72 ) ಬೌದ್ಧಧರ್ಮವನ್ನು ನಾಶಮಾಡಲು ಪ್ರಾರಂಭಿಸಿತು. ಬೌದ್ಧ ಭಿಕ್ಕುಗಳ ಶಿರಚ್ಛೇದ ಮಾಡಿದವರಿಗೆ ಪುಷ್ಯಮಿತ್ರ ಶೃಂಗು (ಕ್ರಿ.ಪೂ. 185-149) ಬಹುಮಾನಗಳನ್ನು ನೀಡುತ್ತಿದ್ದ. ಅವನ ನಂತರ ವೈದಿಕ ಧರ್ಮಾಭಿಮಾನಿಗಳಾದ ರಾಜರು ಆ ಸಂಪ್ರದಾಯವನ್ನು ಮುಂದುವರೆಸಿದರು. ಅವರ ಹಿಂಸೆಯನ್ನು ಸಹಿಸಲಾಗದೇ ಬೌದ್ಧ ಭಿಕ್ಷುಗಳು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸುತ್ತಮುತ್ತಲಿನ ದೇಶಗಳಿಗೆ ಓಡಿಹೋದರು. ಅಂದಿನಿಂದ ಅವರು ಬೌದ್ಧ ಸನ್ಯಾಸಿಗಳ ಶಿರಚ್ಛೇದನ ಮಾಡಿದ್ದನ್ನು ಹೆಮ್ಮೆಯಿಂದ ಘೋಷಿಸಿಕೊಂಡರು. ಕೆಲವರು ತಮ್ಮ ಮನೆಗಳ ಮುಂಭಾಗದ ಬಾಗಿಲಿಗೆ ತಲೆಯ ಆಕಾರದ ಕುಂಬಳಕಾಯಿಯನ್ನು ಕಟ್ಟಿ ತಮ್ಮ ದೊರೆಗಳ ಕಣ್ಣಿಗೆ ಬಿದ್ದು ಮನ್ನಣೆ ಪಡೆಯಲು ಹವಣಿಸುತ್ತಿದ್ದರು! ಹೀಗಾಗಿ ಇದು ರೂಢಿಗೆ ಬಂದಿತು. ಶಿರಚ್ಛೇದನ ಮಾಡುವ ಹಿಂಸಾತ್ಮಕ ಕಾರಣವನ್ನು ಮುಚ್ಚಿಡಲು ಆರ್ಯ ಬ್ರಾಹ್ಮಣರು ದಿಷ್ಟಿಯನ್ನು ಪರಿಚಯಿಸಿದರು.
ಇತರರ ಕಣ್ಣುದಿಷ್ಟಿ ಆಗದಂತೆ ತಡೆಯಲು ತಮ್ಮ ಮನೆಯ ಬಾಗಿಲಿಗೆ ಕುಂಬಳಕಾಯಿಯನ್ನು ಕಟ್ಟಿಕೊಳ್ಳಬೇಕೆಂಬ ಮೂಢಾಚಾರವನ್ನು ಅವರು ಪ್ರಚಾರ ಮಾಡಿದರು. ಈಗಲೂ ಅದೇ ನಡೆಯುತ್ತಿದೆ. ಈ ಕಾಲದಲ್ಲೂ ಅಗತ್ಯವಿಲ್ಲದ್ದನ್ನು ಪಾಲಿಸುವುದು ಅಗತ್ಯವಿದೆಯೇ? ಎಂದು ಇಂದಿನ ಸಮಕಾಲೀನರಾದ ನಾವು ಚಿಂತನೆ ನಡೆಸಬೇಕಿದೆ. ಕೆಲವು ನೂರು ವರ್ಷಗಳ ಹಿಂದೆ, ರಾಜರು, ಜಮೀನ್ದಾರರು, ದೇಶಮುಖರು ಮತ್ತು ಸಮಾಜದ ಪ್ರಮುಖರು ಬೇಟೆಗೆ ಹೋಗುತ್ತಿದ್ದರು. ಅವರು ಬೇಟೆಯಾಡಿ ಕೊಂದ ಪ್ರಾಣಿಗಳ ಗುರುತುಗಳು, ಅಂದರೆ ಜಿಂಕೆ ಚರ್ಮ, ದುಷ್ಟಿ(ಮೂಸ್) ಕೊಂಬುಗಳು ಇತ್ಯಾದಿಗಳನ್ನು ತಂದು ಮನೆಯ ಶೋಕೇಸ್ ಅಥವಾ ಹಾಲ್ ನಲ್ಲಿ ಪ್ರದರ್ಶನಕ್ಕಿಡುತ್ತಿದ್ದರು. ಹುಲಿ ಉಗುರು ಸಿಕ್ಕರೆ ಅದನ್ನು ಚಿನ್ನದ ಸರಕ್ಕೆ ಜೋಡಿಸಿ ಕೊರಳಿಗೆ ಪದಕದಂತೆ ಧರಿಸುತ್ತಿದ್ದರು. ಮನೆಗೆ ಬಂದ ಅತಿಥಿಗಳು ತಮ್ಮ ಹಿರಿಮೆಯನ್ನು ಗುರುತಿಸಬೇಕೆಂದು ಹಾಗೆ ಮಾಡುತ್ತಿದ್ದರು. ಈಗಲೂ ಅದೇ ಪದ್ಧತಿ ಚಾಲ್ತಿಯಲ್ಲಿದೆ ಅಲ್ಲವೇ? ಯಾರಾದರೂ ಯಾವುದರಲ್ಲಾದರೂ ಯಶಸ್ವಿಯಾದರೆ ಅದರ ಪ್ರಮಾಣಪತ್ರ ಅಥವಾ ಫೋಟೋವನ್ನು ಡ್ರಾಯಿಂಗ್ ರೂಮಿನಲ್ಲಿ ಇಡುತ್ತೇವೆ ಅಲ್ಲವೇ? ಇದೂ ಹಾಗೆಯೇ. ಒಂದಾನೊಂದು ಕಾಲದಲ್ಲಿ ಬೌದ್ಧ ಭಿಕ್ಷುಗಳ ತನ್ನ ತಲೆ ಕಡಿದುದಕ್ಕೆ ಹೆಮ್ಮೆಯ ಸಂಕೇತವಾಗಿ ಮನೆಯ ಹೊಸ್ತಿಲಲ್ಲಿ ಕುಂಬಳಕಾಯಿಯನ್ನು ನೇತು ಹಾಕುತ್ತಿದ್ದರು. ಮನೆಯ ಮುಂಬಾಗಿಲಿನಲ್ಲಿ ನೇತಾಡುವ ಕುಂಬಳಕಾಯಿಯು ಲಕ್ಷಾಂತರ ಬೌದ್ಧ ಭಿಕ್ಷುಗಳ ರಕ್ತದಿಂದ ತೋಯ್ದ ಭೂಮಿಯನ್ನು ಗುರುತಿಸುವಂತಿದೆ.
ಸಿದ್ಧಾರ್ಥನ ತಾಯಿ ಮಹಾಮಾಯೆಯನ್ನು ಬೌದ್ಧರ ಕಾಲದಲ್ಲಿ ಶಿಲ್ಪಿಗಳಿಂದ ಕೆತ್ತಲಾಗಿದೆ. ಆ ಶಿಲ್ಪದಲ್ಲಿ ಮಹಾಮಾಯಾ ಪದ್ಮಾಸನದ ಮೇಲೆ ಕುಳಿತಿದ್ದಾಳೆ. ಎರಡೂ ಕಡೆಯಿಂದ ಎರಡು ಆನೆಗಳು ತಮ್ಮ ಸೊಂಡಿಲುಗಳನ್ನು ಕಮಾನುಗಳಂತೆ ಮೇಲಕ್ಕೆತ್ತಿ ಅವಳ ಮೇಲೆ ನೀರನ್ನು ಸುರಿಯುತ್ತವೆ. ಅಂದರೆ ಅಭಿಷೇಕವನ್ನು ಮಾಡುತಗತಿವೆ! ದೊಡ್ಡ ಕಾಂಡಗಳನ್ನು ಹೊಂದಿರುವ ಹೂವುಗಳನ್ನು ಮಹಾಮಾಯೆಯ ಪಾದಗಳ ಬಳಿ ಕೆತ್ತಲಾಗಿದೆ. ಶಿಲ್ಪವನ್ನು ಸಂಪೂರ್ಣವಾಗಿ ನಕಲು ಮಾಡಿ, ವೈದಿಕ ಧರ್ಮದವರು ಶ್ರೀ ಲಕ್ಷ್ಮಿಯ ಚಿತ್ರವನ್ನು ವಿನ್ಯಾಸಗೊಳಿಸಿದರು. 120 ವರ್ಷಗಳ ಹಿಂದೆ ಲಕ್ಷ್ಮಿ ದೇವಿಯ ಭಾವಚಿತ್ರಗಳಾಗಲಿ ಅಥವಾ ವರ್ಣಚಿತ್ರಗಳಾಗಲಿ ಇಲ್ಲ. ಅದಕ್ಕೂ ಮುನ್ನ ಲಕ್ಷ್ಮಿ ದೇವಿ ಹೇಗಿದ್ದಾಳೆಂಬ ಕಲ್ಪನೆಯೂ ಯಾರಿಗೂ ಇರಲಿಲ್ಲ. ಮಹಾಮಾಯೆಯ ಶಿಲ್ಪದಲ್ಲಿರುವಂತೆ, ಲಕ್ಷ್ಮಿ ಪದ್ಮಾಸನದ ಮೇಲೆ ಕುಳಿತಿದ್ದಳು. ದೂರದಿಂದ ಎರಡು ಆನೆಗಳು ಚೊಂಬಿನಿಂದ ಲಕ್ಷ್ಮಿ ದೇವಿಯ ಮೇಲೆ ನೀರು ಸುರಿಯುತ್ತವೆ. ಹೀಗೆ ವಿದೇಶಿ ಆರ್ಯ ಬ್ರಾಹ್ಮಣರು ದೊಡ್ಡ ಸುಳ್ಳುಗಳನ್ನೇ ಸೃಷ್ಟಿಸಿ ಇಡೀ ಭಾರತಕ್ಕೆ ಮೋಸ ಮಾಡಿದರು. ನೀವು ಹಿಂದೂ ದೇವತೆಗಳ ದೇವಾಲಯಕ್ಕೆ ಹೋದಾಗ ಪ್ರವೇಶದ್ವಾರದ ಮೇಲೆ ಮಹಾಮಾಯಾ ಶಿಲ್ಪವನ್ನು ನೋಡಿ. ಎಚ್ಚರಿಕೆಯಿಂದ ಪರಿಶೀಲಿಸಿ ನಿಮಗೆ ತಿಳಿಯುತ್ತದೆ. ಏಕೆಂದರೆ ಮೊದಲ ಶಿಲ್ಪಗಳು ಬೌದ್ಧರು, ಮೊದಲು ನಿರ್ಮಿಸಿದವರು ಬುದ್ಧರಾಮರು. ಅವುಗಳನ್ನು ಶಿವ ದೇವಾಲಯಗಳಾಗಿ ಮತ್ತು ವಿಷ್ಣು ಆಲಯಗಳಾಗಿ ಪರಿವರ್ತಿಸಲಾಗಿದೆ ಎಂಬುದಕ್ಕೆ 100% ಪುರಾವೆಗಳಿವೆ. 120 ವರ್ಷಗಳ ಹಿಂದೆ ಲಕ್ಷ್ಮಿ ದೇವಿಯ ಯಾವುದೇ ಶಿಲ್ಪಗಳು, ವರ್ಣಚಿತ್ರಗಳು ಮತ್ತು ಭಾವಚಿತ್ರಗಳಿತ್ತೆಂದು ಯಾರಾದರು ವೈಜ್ಞಾನಿಕವಾಗಿ ಸಾಬೀತುಪಡಿಸಿದರೆ, ನಾವು ಒಪ್ಪಿಕೊಳ್ಳಬೇಕು – ಆದರೆ ಅದನ್ನು ಮಾಡಲು ಸಾಧ್ಯವಿಲ್ಲ. ಕಾರಣ ಲಕ್ಷ್ಮೀದೇವಿ ಅಸ್ತಿತ್ವದಲ್ಲಿರಲು ಇರಲಿಲ್ಲವಾದ್ದರಿಂದ!
ಬುದ್ಧನ ತಾಯಿ ಮಹಾಮಾಯೆಗಾಗಿ ನಿರ್ಮಿಸಲಾದ ಹದಿನೆಂಟು ಮಂದಿರಗಳನ್ನು ‘ಅಷ್ಟಾದಶ ಶಕ್ತಿ ಪೀಠಗಳಾಗಿ’ ಪರಿವರ್ತಿಸಿದರು. ಅಲ್ಲದೆ ಬುದ್ಧನ ಹನ್ನೆರಡು ಮಂದಿರಗಳನ್ನು ‘ಜ್ಯೋತಿರ್ಲಿಂಗ’ಗಳಾಗಿ ಪರಿವರ್ತಿಸಿದರು. ಹೀಗೆ ಹೇಳುತ್ತಾ ಹೋದರೆ ಉದ್ದವಾಗುತ್ತದೆ. ಶ್ರೀಲಂಕಾದಲ್ಲಿ ಮಹಾಮಾಯೆಯನ್ನು ಕೂಡ ಹಿಂದೂ ದೇವತೆಯಾಗಿ ಪರಿವರ್ತಿಸಿ “ಶಕ್ತಿ ಮಾತಾ ಸ್ಥಳ” ಎಂದು ಪ್ರಚಾರ ಮಾಡಿಕೊಂಡರು.
ಇಂಥದ್ದೇ ಇನ್ನೊಂದು ವಿಷಯವಿದೆ. ದೇವಾಲಯದ ನಿರ್ಮಾಣ ವೈಶಿಷ್ಟ್ಯವನ್ನು ಕುರಿತು ಹೆಚ್ಚು ಪ್ರಶಂಸಿಸಿದರು. ಪುರೋಹಿತರು ಪಠಿಸುವ ವೇದ ಮಂತ್ರಗಳು ಗಾಳಿ ಮತ್ತು ಬೆಳಕನ್ನು ಸ್ಪರ್ಶಿಸದ ಗರ್ಭಗುಡಿಯ ನಾಲ್ಕು ಗೋಡೆಗಳ ಮಧ್ಯದಲ್ಲಿರುವ ದೇವತೆ ಅಥವಾ ಶಿವಲಿಂಗದ ವಿಗ್ರಹವನ್ನು ಸ್ಪರ್ಶಿಸಿ, ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ, ಅದು ಹೊರಬಂದು ಭಕ್ತರಲ್ಲಿ ಧನಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ ಎಂಬ ಸೂಡೋಸೈನ್ಸ್ (ಹುಸಿ ವಿಜ್ಞಾನ) ಅನ್ನು ಪ್ರಚಾರ ಮಾಡಿದರು. ಈ ರೀತಿ ಹೇಳುವವರು ವೈಜ್ಞಾನಿಕ ಉಪಕರಣಗಳನ್ನು ಬಳಸಿ ಸಾಬೀತುಪಡಿಸಬೇಕು. ಆಗ ಅವರು ಮೂರ್ಖರಲ್ಲ. ವೈಜ್ಞಾನಿಕವಾಗಿ ಬುದ್ಧಿವಂತರು ಎಂದು ನಂಬಲು ಅವಕಾಶವಿರುತ್ತದೆ.
ಬ್ರಾಹ್ಮಣರು ಪ್ರತಿಯೊಂದು ವಿಷಯದಲ್ಲೂ ಮೋಸ ಮಾಡಿದ್ದಾರೆ. ಅಶೋಕನು ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಭೇಟಿ ನೀಡಿ ಅಲ್ಲೊಂದು ಸ್ತೂಪವನ್ನು ನಿರ್ಮಿಸಿದನು ಎಂದು ಇತಿಹಾಸ ಹೇಳುತ್ತದೆ. ಸ್ತೂಪ ಈಗಲೂ ಇದೆ. ಸ್ತೂಪದ ಬಳಿಯ ಫಲಕದ ಮೇಲೆ “ದೇವನಾಂ ಪಿಯಾ ಪಿಯಾ ದಾಸ್ಸಿ” ಎಂದು ಬರೆಯಲಾಗಿದೆ. ‘ಪಿಯಾದಸ್ಸಿ’ ಎಂದರೆ ಅಶೋಕ ದೇವತೆಗಳಿಗೆ ಪ್ರಿಯನಾದ ರಾಜ. ಅಶೋಕನು (piyadassi the believe of God) ಎಂದು ಅರ್ಥವನ್ನು ಬದಲಾಯಿಸಿ ಪ್ರಚಾರ ಮಾಡಿದರು! ನಿಜವೇನೆಂದರೆ, ಅಫ್ಘಾನಿಸ್ತಾನದಿಂದ ಇಲ್ಲಿನ ದಕ್ಷಿಣ ಭಾರತದವರೆಗಿನ ಲಕ್ಷಾಂತರ ಅಶೋಕನ ಸ್ತೂಪದ ಮೇಲಾಗಲೀ, ಶಿಲಾ ಶಾಸನಗಳಲ್ಲಿ ಅಥವಾ ಚಾರಿತ್ರಿಕ ಗ್ರಂಥಗಳಲ್ಲಿ ಎಲ್ಲಿಯೂ ಇತರೆ ದೇವಿ-ದೇವರುಗಳ ಹೆಸರುಗಳು ಕಂಡುಬರುವುದಿಲ್ಲ. ಇಲ್ಲಿ ದೇವ ಎಂದರೆ ಬುದ್ಧ ದೇವರು ಎಂದರ್ಥ. ಪಾಳಿ ಭಾಷೆಯಲ್ಲಿ ದೇವ- ಎಂದು ಬರೆದಿದ್ದಾರೆಂದರೆ ಅದು ಬುದ್ಧ ದೇವರನ್ನು ಉದ್ದೇಶಿಸಿಯೇ ಬರೆಯಲಾಗಿದೆ! ಆದ್ದರಿಂದ, ನಾವು ‘ದೇವನಾಂ ಪಿಯಾ ಪಿಯಾದಸ್ಸಿ’ ಎಂದರೆ ಭಗವಾನ್ ಬುದ್ಧನ ಪ್ರೀತಿಯ ರಾಜ ಅಶೋಕ ಎಂದು ಅರ್ಥಮಾಡಿಕೊಳ್ಳಬೇಕೇ ವಿನಃ – ಇತರೆ ದೇವರು ಮತ್ತು ದೇವತೆಗಳಿಲ್ಲ. ವೈದಿಕ ಧರ್ಮದವರು ರಾಜನು ಇತರೆ ದೇವರುಗಳಿಗೆ ಪ್ರಿಯನೆಂದು ಹೇಳುವುದು ಕೇವಲ ದುಷ್ಪ್ರಚಾರವೇ ಸರಿ!
ಖ್ಯಾತ ಸಾಹಿತಿ, ಜೀವಶಾಸ್ತ್ರಜ್ಞರು (ಮೆಲ್ಬೋರ್ನ್ನಿಂದ) – ಡಾ.ದೇವರಾಜ ಮಹಾರಾಜರು
ಅನುವಾದ : ರೇಣುಕಾ ಭಾರತಿ
Leave a reply