ಬೆಂಗಳೂರು : ಬೆಂಗಳೂರಿನಲ್ಲಿ ಭವಿಷ್ಯದಲ್ಲಿ ನೀರು ಸಿಗದ ದಿನಗಳು (ಝೀರೋ ವಾಟರ್ ಡೇಸ್) ಎದುರಾಗಲಿದೆ ಎಂದು ಅನೇಕ ಜಲ ಸಂರಕ್ಷಣಾ ತಜ್ಞರು ಎಚ್ಚರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಭವಿಷ್ಯದಲ್ಲಿ ನೀರು ಸಿಗದ ದಿನಗಳು ಎದುರಾಗುವ ಭೀತಿ ಉಂಟಾಗಿದೆ ಎಂದರು. ಸೊಸೈಟಿ ಫಾರ್ ಕಮ್ಯುನಿಟಿ ಹೆಲ್ತ್ ಅವೇರ್ನೆಸ್ ರಿಸರ್ಚ್ ಅಂಡ್ ಆಕ್ಷನ್ (SOCHARA) ಕಾರ್ಯದರ್ಶಿ ಪ್ರಫುಲ್ಲ ಸಾಲಿಗ್ರಾಮ ಅವರು “ಸಮುದಾಯ” (ತಂಡ) ಅಥವಾ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಭಾಗವಾಗಿ ನೀರನ್ನು ಸಂರಕ್ಷಿಸಲು ಸಮುದಾಯ ಉಪಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. ಈ ವಿಧಾನದಿಂದ ಬೆಂಗಳೂರಿನ ನೀರಿನ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
‘‘200, 300 ವರ್ಷಗಳ ಹಿಂದೆ ನಮ್ಮಲ್ಲಿ 400 ಕೆರೆಗಳಿದ್ದವು. ಸೂಕ್ತ ನಿಗಾವಹಿಸದ ಕಾರಣ ಅವು ನಾಪತ್ತೆಯಾಗಿವೆ. ಅದೇ ಸಮಯದಲ್ಲಿ ಬಾಹ್ಯ ನೀರಿನ ಮೂಲಗಳ ಮೇಲಿನ ನಮ್ಮ ಅವಲಂಬನೆಯು ವಿಪರೀತವಾಗಿ ಹೆಚ್ಚಾಗಿದೆ. ನಮ್ಮ ಸಂಸ್ಥೆಯ ಪರವಾಗಿ ನಾವು ಕಡು ಬಡವರಿಗೆ ತುರ್ತು ಆರೋಗ್ಯ ಅಗತ್ಯಗಳನ್ನು ಒದಗಿಸಲು ಶ್ರಮಿಸುತ್ತೇವೆ. ಇದಕ್ಕಾಗಿ ಮಾಯಾಬಜಾರ್ ಮತ್ತು ಅಂಜನಾಪುರದ ಜನರನ್ನು ಸಮುದಾಯವನ್ನಾಗಿ ಮಾಡುತ್ತಿದ್ದೇವೆ. ನಿವಾಸಿಗಳು ಮತ್ತು ಕಲ್ಯಾಣ ಸಂಘಗಳ ಸದಸ್ಯರ ಸಂವಹನವು ಬೆಂಗಳೂರಿನ ನೀರಿನ ಬಿಕ್ಕಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ”ಎಂದರು.
ಜಲ ಸಂರಕ್ಷಣೆಯಲ್ಲಿ ಸಮುದಾಯೀಕರಣವು ಬಹಳ ಮುಖ್ಯವಾಗಿದೆ ಎಂದು ಹೆಣ್ಣೂರು ಟಾಸ್ಕರ್ಸ್ ಗ್ರೂಪ್ನ ಸದಸ್ಯ ಕೆ.ಸುಬ್ರಮಣಿಯನ್ ಮತ್ತು ವೆಲ್ ಲ್ಯಾಬ್ಸ್ ನಿರ್ದೇಶಕಿ ವೀಣಾ ಶ್ರೀನಿವಾಸನ್ ಹೇಳಿದರು. ನೀರು ಪೋಲು ಮಾಡುವುದನ್ನು ತಡೆಯಲು ನಾವು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದೇವೆ. ಮತ್ತು ನಾಗರಿಕರು ತಮ್ಮಿಂದಾಗಿದ್ದನ್ನು ಮಾಡಲು ಸಿದ್ಧರಾಗಿದ್ದಾರೆ. ಸರಕಾರವೂ ಬೆಂಬಲ ಘೋಷಿಸಬೇಕು ಎಂದರು.
Leave a reply