ಕೊಪ್ಪ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯಾ 155 ನೇ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಕೊಪ್ಪ ತಾಲೂಕಿನ ಮರಿ ತೊಟ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗಾರು ಲಕ್ಷ್ಮಿ ನಾರಾಯಣ ದೇವಸ್ಥಾನ ಸಮೀಪ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುಕ್ಕುಡಿಗೆ ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ಬುಧವಾರದಂದು ಅದ್ದೂರಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶೃಂಗೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿಡಿ ರಾಜೇಗೌಡರು ಮಾತನಾಡಿ.. ಮಹಾತ್ಮ ಗಾಂಧೀಜಿಯವರು ಬ್ರಿಟಿಷರಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಅಹಿಂಸಾತ್ಮಕ ಮಾರ್ಗ ಅವಿಸ್ಮರಣೀಯ ಎಂದರು. ಜಗತ್ತಿನ ದೇಶಗಳಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದರೆ ನಮ್ಮ ದೇಶದಲ್ಲಿ ಗಾಂಧಿಯವರನ್ನು ಹತ್ಯೆಗೈದವರ ಪ್ರತಿಮೆಯನ್ನು ಅನಾವರಣ ಗೊಳಿಸುತ್ತಿರುವುದು ಅತ್ಯಂತ ದುಃಖಕರ, ಅವಮಾನಕಾರಿಯಾದ ವಿಷಯ ಎಂದರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ವಾತಂತ್ರ್ಯ, ಸಮಾನತೆಯನ್ನು ಗಾಂಧೀಜಿಯವರು ಪ್ರತಿಪಾದಿಸಿದರು. ಗಾಂಧಿಯವರ ತತ್ವ ಸಿದ್ದಾಂತಗಳೇ ನಮ್ಮ ಆದರ್ಶ ಎಂದರು. ಈ ಕುರಿತು ನೆರೆದಂತ ಸಭಿಕರಿಗೆ ಮನಮುಟ್ಟುವಂತೆ ವಿವರಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬಂದಂತಹ ಮುರುಸುಳ್ಳಿ ಮೋಹನ್ ತರೀಕೆರೆ ಇವರು ಮಾತನಾಡಿ ಗಾಂಧಿಗಿಂತ ಶ್ರೇಷ್ಠ ವ್ಯಕ್ತಿ ಗಾಂಧಿಗಿಂತ ವಿಶ್ವಗುರು ಹಿಂದೆಂದೂ ಬಂದಿಲ್ಲ ಮುಂದೆಯೂ ಬರುವುದು ಕಷ್ಟ ಎಂದು ವಿವರಿಸಿ ಸಭಿಕರಿಂದ ಅಭಿನಂದನೆಗೆ ಪಾತ್ರರಾದರು.. ಪ್ರಾಸ್ತಾವಿಕ ನುಡಿಯಾಗಿ ನುಗ್ಗಿ ಮಂಜನಾಥ್ ಮಾತನಾಡಿ ಮಹಾತ್ಮ ಗಾಂಧೀಜಿ ಯಂತಹ ಶ್ರೇಷ್ಠ ವ್ಯಕ್ತಿ ನಮ್ಮ ಈ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಹಾಗೂ ಅಭಿಮಾನದ ಸಂಕೇತ ಎಂದರು.

ಕಾರ್ಯಕ್ರಮದಲ್ಲಿ ಜಗದೀಶ್ ಸುಂಕುರುಡಿ, ಅನ್ನಪೂರ್ಣ ನರೇಶ್, ಚಿಂತನ್ ಬೆಳಗೋಳ, ಭೇಗಾನೆ ಪಾರ್ಮ್ ನ ಮಾಲಿಕರಾದ ಶ್ರೀ ವಿಕಾಶ್ ಬೇಗಾನೆ, ಪುಷ್ಟಿ ಪ್ರಸನ್ನ ಶೆಟ್ಟಿ, ರಾಜಾ ಶಂಕರ್, ಉಮೇಶ್ ಸುಂಕುರುಡಿ, ಚಾವಲಮನೆ ಸುರೇಶ್ ನಾಯ್ಕ ಮತ್ತಿತರ ಪ್ರಮುಖರು ಮತ್ತು ನೂರಾರು ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ನೆರೆದಿದ್ದರು.


Leave a reply