ಗಾಳಿಯಲ್ಲಿ ನಾನೊಂದು ಬಾಣವನ್ನು ಸಂಧಿಸಿದೆ.
ಅದು ಭೂಮಿ ಮೇಲೆ ಬಿತ್ತು
ಆದರೆ ಎಲ್ಲೆಂದು ತಿಳಿಯದು.
ಅದು ಎಷ್ಟು ವೇಗವಾಗಿ
ಮುನ್ನುಗ್ಗಿ ಹೋಯಿತೆಂದರೆ..
ನನ್ನ ನೋಟ ಅದನ್ನು ಹಿಂಬಾಲಿಸದಾಯ್ತು..
ನಾನು ಧ್ವನಿಯೆತ್ತಿ ಗಾಳಿಯಲ್ಲಿ
ಒಂದು ಹಾಡನ್ನು ಹಾಡಿದೆ..
ಅದು ಕೂಡ ಭೂಮಿಯ ಮೇಲೆ ಬಿತ್ತು..
ಆದರೆ ಎಲ್ಲೆಂದು ತಿಳಿದಿಲ್ಲ..
ಆದರೂ ಗಾಯನವನ್ನು ಅನುಸರಿಸುವ ಸೂಕ್ಷ್ಮ ನೋಟ
ಯಾರಿಗಿದೆ? ಎಂದು..
ಹೆಚ್ಚು ಕಾಲ ಕಳೆದ ಮೇಲೆ
ಪುನಃ ಅತ್ತ ಕಡೆ ಹೊರಟೆ..
ಗಿಡಗಳ ಹುಡಿಯಲ್ಲಿ ಆ ಬಾಣವಿದೆ.. ಮುರಿಯದಂತೆ!
ಹಾಗೆಯೇ.. ನನ್ನ ಹಾಡೂ ಕೇಳಿಸಿತು.. ಬಿಡದಂತೆ
ಮೊದಲಿನಿಂದ ಕೊನೆಯ ತನಕ
ನನ್ನ ಸ್ನೇಹಿತನ ಮನದಲ್ಲಿ!
ಮೂಲ : ಹೆಚ್.ಡಬ್ಲ್ಯೂ ಲಾಂಗ್ ಫೆಲೋ
ಅನುವಾದ : ರೇಣುಕಾ ಭಾರತಿ
ಹಿರಿಯ ಸಾಹಿತಿ, ಖ್ಯಾತ ಜೀವಶಾಸ್ತ್ರಜ್ಞರು ಪ್ರೊಫೆಸರ್ ಡಾ.ದೇವರಾಜು ಮಹಾರಾಜ ಅವರ fb ವಾಲ್ ನಿಂದಾ…
Leave a reply