ನೀಲಿಕುರುಂಜೆ ಗಿಡಗಳು.. ಈ ಸಸ್ಯಗಳ ಕುರಿತು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ಇದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿವೆ. ಇವು ಸಾಮಾನ್ಯ ಹೂವಿನ ಸಸ್ಯಗಳಲ್ಲಿ ಹೂ ಅರಳುವಂತೆ ಈ ಗಿಡದಲ್ಲಿ ಹೂವುಗಳು ಅರಳುವುದಿಲ್ಲ. ಈ ಸಸ್ಯದಲ್ಲಿ 12 ವರ್ಷಗಳಿಗೊಮ್ಮೆ ಮಾತ್ರ ಹೂ ಅರಳುತ್ತವೆ. ಈ ಸಸ್ಯಗಳು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರವೇ. ಹೂಬಿಡುತ್ತದೆ ನಂತರ ಸಸ್ಯಗಳು ಸಾಯುತ್ತವೆ. ಈ ಸಸ್ಯಗಳನ್ನು ಅಲಂಕರಿಸುವ ನೀಲಕುರಿಂಜಿ ಹೂವುಗಳ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು.
ಇತ್ತೀಚೆಗೆ, ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ಪಿಕ್ಕಪಾಟಿ ಮಂಡು ಎಂಬ ಬುಡಕಟ್ಟು ಗ್ರಾಮದ ಪಕ್ಕದ ಬೆಟ್ಟಗಳಲ್ಲಿ ನೀಲಕುರಿಂಜಿ ಹೂವುಗಳು ಅರಳಿದೆ. ಇದು ಆ ಪ್ರದೇಶಕ್ಕೆ ವಿಶಿಷ್ಟ ಸೌಂದರ್ಯವನ್ನು ತಂದಿದೆ. ಕಣ್ಣು ಹಾಯಿಸಿದಷ್ಟೂ ಬೆಟ್ಟ ಪೂರ್ತಿ ನೀಲಿ ಹೂವುಗಳಿಂದ ಆವೃತವಾಗಿದೆ. ಈ ಹೂವುಗಳ ಸೌಂದರ್ಯವನ್ನು ವೀಕ್ಷಿಸಲು ಸುತ್ತಮುತ್ತಲಿನ ಪ್ರದೇಶಗಳಿಂದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸುತ್ತಿದ್ದಾರೆ.
ಈ ಸಸ್ಯಗಳು ಹನ್ನೆರಡು ವರ್ಷಗಳವರೆಗೆ ಬೆಳೆದು ಹೂಬಿಡುತ್ತದೆ ನಂತರ ಸಾಯುತ್ತವೆ. ಅವುಗಳ ಬೀಜಗಳಿಂದ ಮೊಳಕೆಯೊಡೆದ ಹೊಸ ಸಸ್ಯಗಳು ಹೂ ಬಿಡಲು 12 ವರ್ಷಗಳು ಬೇಕಾಗುತ್ತದೆ. ಈ ಹೂವುಗಳು ನೀಲಿ ಬಣ್ಣವನ್ನು ಹೊಂದಿರುವುದರಿಂದ ಅವುಗಳಿಗೆ ನೀಲಕುರಿಂಜಿ ಹೂವುಗಳು ಎಂಬ ಹೆಸರು ಬಂದಿದೆ.
Leave a reply