ಆಹಾರವೇ ಆರೋಗ್ಯ ಎನ್ನುತ್ತಾರೆ. ವಿದೇಶಗಳಲ್ಲಿ ಕೆಲವು ಆಹಾರವನ್ನು ಸೂಪರ್ ಫುಡ್ ಎನ್ನುತ್ತಾರೆ. ಈ ಕಾರಣದಿಂದಾಗಿ ಅವು ಎಷ್ಟೇ ದುಬಾರಿಯಾದರೂ ಭಾರತೀಯರು ಕೂಡ ಅವುಗಳನ್ನು ಖರೀದಿಸಿ ತಿನ್ನುತ್ತಾರೆ. ಆದರೆ ವಿದೇಶಿ ಆಹಾರಗಳನ್ನೇ ಹಿಂದಕ್ಕೆ ತಳ್ಳುವ ಭಾರತೀಯ ಸೂಪರ್ ಫುಡ್ ಕೆಲವು ಹೀಗಿವೆ…
ಭಾರತೀಯ ಆಹಾರದ ಎದುರು ಫಾರಿನ್ ಸೂಪರ್ ಫುಡ್ ಕೆಲಸಕ್ಕೆಬಾರದು.. ಅವುಗಳೆಂದರೆ….ನುಗ್ಗೆಸೊಪ್ಪು – ಭಾರತ ದೇಶದ ನುಗ್ಗೆಸೊಪ್ಪು ವಿದೇಶಿ ಸೂಪರ್ ಫುಡ್ ನ್ನೇ ಮೀರಿಸುವಷ್ಟು ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ಸಿ, ಇ, ಐರನ್, ಯಾಂಟಿ ಆಕ್ಸಿಡೆಂಟ್ಸ್ ನಂತಹ ಪೋಷಕಾಂಶಗಳು ಹೇರಳವಾಗಿದೆ. ಅಮರಂಥ್ ಅಥವಾ ರಾಜ್ ಗಿರಾ.. ಇತ್ತೀಚೆಗೆ ವೈರಲ್ ಆಗುತ್ತಿರುವ ವಿದೇಶಿ ಫುಡ್ ಕ್ವಿನೋವಾಗೆ ಅಮರಂಥ್ ಉತ್ತಮ ಪರ್ಯಾಯವಾಗಿದೆ. ಇವುಗಳಲ್ಲಿ ಪ್ರೋಟೀನ್ ಫೈಬರ್ ಮತ್ತು ಅಗತ್ಯ ಅಮೈನೋ ಆಮ್ಲಗಳು ಅಧಿಕವಾಗಿವೆ.ತುಳಸಿ – ವೈರಲ್ ಆಗುತ್ತಿರುವ ವಿದೇಶಿ ಮಚ್ಚಾ ಚಹಾದಂತೆ, ತುಳಸಿಯಲ್ಲಿರುವ ಯಾಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಬೆಟ್ಟದ ನೆಲ್ಲಿಕಾಯಿ – ಫಾರಿನ್ ಬೆರ್ರಿ ಹಣ್ಣುಗಳಿಗಿರುವ ಜನಪ್ರಿಯತೆ ಅಷ್ಟಿಷ್ಟು ಅಲ್ಲ. ಆದರೆ ಭಾರತದ ಬೆಟ್ಟದ ನೆಲ್ಲಿಕಾಯಿ ಇದಕ್ಕೆ ಸಾಟಿಯಾಗಿದೆ. ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್-ಸಿ ಮತ್ತು ಯಾಂಟಿ ಆಕ್ಸಿಡೆಂಟ್ ಗಳ ಶಕ್ತಿ ಕೇಂದ್ರವಾಗಿದೆ.ಎಳ್ಳು – ಎಳ್ಳಿನ ಬೀಜಗಳು ಚಿಯಾ ಬೀಜಗಳಿಗೆ ಉತ್ತಮ ಪರ್ಯಾಯವಾಗಿದೆ. ಇವುಗಳಲ್ಲಿ ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಯಾಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ.
ನ್ಯೂಡೆಲ್ಲಿ : ಭಾರತದಲ್ಲಿ ಮಕ್ಕಳು ಪರಿಸರದ ಒತ್ತಡಗಳಿಂದ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು UNICEF ಬಹಿರಂಗಪಡಿಸಿದೆ. ಬಿಸಿ ಗಾಳಿ ಮತ್ತು ವಾಯು ಮಾಲಿನ್ಯಗಳು ಮಕ್ಕಳ ಆರೋಗ್ಯ, ಶಾಲಾ ಹಾಜರಾತಿ ಮತ್ತು ಒಟ್ಟಾರೆ ಕಲಿಕೆಯ ಫಲಿತಾಂಶಗಳ... Continue reading
“ಯಾವುದೂ ಶಾಶ್ವತವಲ್ಲ. ನಿನ್ನನ್ನು ನೀನು ಒತ್ತಡಕ್ಕೆ ಗುರಿ ಮಾಡಿಕೊಳ್ಳದಿರು.. ಎಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ಬದಲಾಗಲೇಬೇಕು” ಜಗತ್ತಿಗೆ ವೈಜ್ಞಾನಿಕ ವೈಚಾರಿಕ ಮೌಲ್ಯಗಳನ್ನು, ಜ್ಞಾನವನ್ನು ಸಾರಿದ ಬುದ್ದನ ಸುಂದರವಾದ ಚಿತ್ರವನ್ನು ಬಿಡಿಸಿ ಬಣ್ಣವನ್ನು ಹಾಕಿದ ಯುವ... Continue reading
ಕೊಪ್ಪ : ಕೊಪ್ಪ ಉತ್ಸವ ರಂಗೇರಿದೆ. ಬಡವರ ಬಂಧು ಸಾಂಸ್ಕೃತಿಕ ವೇದಿಕೆಯ ಸಾರಥ್ಯದಲ್ಲಿ ಕೊಪ್ಪ ಉತ್ಸವ ಜ.17 ರಿಂದ 21ರವರೆಗೆ ಬೆಳಗ್ಗೆ 10ರಿಂದ ರಾತ್ರಿ 10ವರೆಗೆ ಐದು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ ಆಯೋಜನೆ... Continue reading
ನ್ಯೂಡೆಲ್ಲಿ : ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬಗಳು ತೀವ್ರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ. ಆ ಸವಾಲುಗಳು ಅವರ ಬಳಕೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿವೆ. ಮಧ್ಯಮ ವರ್ಗದ ಅವನತಿಗೆ ಮೂರು ಅಂಶಗಳು ಪ್ರಾಥಮಿಕವಾಗಿ ಕಾರಣವಾಗಿದೆ... Continue reading
ಭಾರತದ ಸಾಮಾನ್ಯ ವಿದ್ಯುತ್ ಗ್ರಾಹಕರಿಂದ ಶೇ. .250 ರಷ್ಟು ಹೆಚ್ಚುವರಿ ಸುಲಿಗೆ? ” 25 ವರ್ಷಗಳಲ್ಲಿ ಯೂನಿಟ್ಟಿಗೆ ಸರಾಸರಿ 1 ರೂ. ತಗಲುವ ಸೋಲಾರ್ ವಿದ್ಯುತ್ತನ್ನು ಮುಂದಿನ 25 ವರ್ಷಗಳ ಕಾಲವೂ ಯೂನಿಟ್ಟಿಗೆ 2.50... Continue reading
Leave a reply