- ಭೂ ಸಂಗ್ರಹಣೆ ಅದಾನಿಗೆ ಸವಾಲು
- 580 ಎಕರೆ ಭೂಮಿಗಾಗಿ ಹೆಣಗಾಟ..
ಮುಂಬಯಿ : ಏಷ್ಯಾದ ಅತಿದೊಡ್ಡ ಕೊಳೆಗೇರಿಗಳಲ್ಲಿ ಒಂದಾದ ಮುಂಬೈನ ಧಾರಾವಿ ಸ್ಲಂ ಪ್ರದೇಶದಲ್ಲಿ ನಿರಾಶ್ರಿತರ ಪುನರ್ವಸತಿ ಕಲ್ಪಿಸಲು ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೋಟ್ಯಾಧಿಪತಿ ಗೌತಮ್ ಅದಾನಿ ನೇತೃತ್ವದ ಜಂಟಿ ಉದ್ಯಮ ಕಂಪನಿಗಳು ಹೆಣಗಾಡುತ್ತಿದೆ. ಧಾರಾವಿ ಕೊಳೆಗೇರಿಯು ನ್ಯೂಯಾರ್ಕ್ನ ಸೆಂಟ್ರಲ್ ಪಾರ್ಕ್ನ ಮುಕ್ಕಾಲು ಭಾಗದಷ್ಟು ವಿಸ್ತಾರವಾಗಿದೆ. ಭೂಸ್ವಾಧೀನದಲ್ಲಿರುವ ಸಮಸ್ಯೆಗಳಿಂದಾಗಿ ಧಾರಾವಿ ಪುನರಾಭಿವೃದ್ಧಿ ಯೋಜನೆಯು ತೊಂದರೆಗೆ ಸಿಲುಕಿದೆ. ಧಾರಾವಿ ಕೊಳೆಗೇರಿಯು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿದೆ. ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂಬ ಆಡಳಿತಗಾರರ ಹೆಗ್ಗಳಿಕೆಯನ್ನು ಇದು ಲೇವಡಿ ಮಾಡುತ್ತಿದೆ.
ಧಾರಾವಿ ಪ್ರದೇಶದಲ್ಲಿ 594 ಎಕರೆ ವಿಸ್ತೀರ್ಣದಲ್ಲಿ ವಿಸ್ತರಿಸಿರುವ ಸ್ಲಮ್ ಅನ್ನು ಆಧುನಿಕ ನಗರ ಕೇಂದ್ರವನ್ನಾಗಿ ಪರಿವರ್ತಿಸಲು ಅದಾನಿ ಗ್ರೂಪ್ ಕಳೆದ ವರ್ಷ $619 ಮಿಲಿಯನ್ ಬಿಡ್ ಅನ್ನು ತೆಕ್ಕೆಗೆ ತೆಗೆದುಕೊಂಡಿತು. ಆದರೆ ಅದಾನಿ ಸಮೂಹವು ಮೊದಲಿನಿಂದಲೂ ಸಮಸ್ಯೆಗಳನ್ನು ಎದುರಿಸುತ್ತಿದೆ. ಗುತ್ತಿಗೆ ಪಡೆಯುವಲ್ಲಿ ಅದಾನಿ ಗ್ರೂಪ್ ರಾಜ್ಯ ಸರ್ಕಾರದಿಂದ ಅನಗತ್ಯ ಲಾಭ ಪಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಪ್ರತಿಭಟನೆಗಳು, ಮೆರವಣಿಗೆಗಳು ನಡೆದವು. ಈಗ ಅದಾನಿ ಗ್ರೂಪ್ ಹೊಸ ಸವಾಲುಗಳನ್ನು ಎದುರಿಸುತ್ತಿದೆ.
ಧಾರಾವಿ ಪ್ರದೇಶದಲ್ಲಿ 2000ಕ್ಕಿಂತಲೂ ಮುನ್ನ ವಾಸಿಸುತ್ತಿದ್ದವರಿಗೆ ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಉಚಿತ ವಸತಿ ನೀಡಲಾಗುವುದು. ಮನೆ ಕಳೆದುಕೊಂಡ ಸುಮಾರು ಏಳು ಲಕ್ಷ ಜನರಿಗೆ ಮನೆ ನಿರ್ಮಾಣಕ್ಕೆ 580 ಎಕರೆ ಅಗತ್ಯವಿದೆ. ಇವರಿಗೆ ಮನೆ ನಿರ್ಮಿಸಿಕೊಡುವ ಅದಾನಿ ಗ್ರೂಪ್ ನ ಪ್ರಯತ್ನ ಇನ್ನೂ ಕೈಗೂಡಿಲ್ಲ. ಅಗತ್ಯ ಭೂಮಿ ಇದ್ದರೂ ಸರ್ಕಾರಿ ಸಂಸ್ಥೆಗಳು ಅದಾನಿ ಗುಂಪಿನೊಂದಿಗೆ ಕೈಜೋಡಿಸಲು ಸಿದ್ಧರಿಲ್ಲ. ಧಾರಾವಿ ಪುನರಾಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಎಸ್.ವಿ.ಆರ್.ಶ್ರೀನಿವಾಸ್ ಮಾತನಾಡಿ, ಮುಂಬೈನಲ್ಲಿ ಒಂದು ಇಂಚು ಜಾಗವೂ ಸಿಗುವುದು ಗಗನಕುಸುಮ. ಜಮೀನು ಸಿಗದಿದ್ದರೆ ಯೋಜನೆ ಮುಂದುವರಿಯುವುದು ಅಸಾಧ್ಯ ಎಂದರು.
ಹತ್ತು ಲಕ್ಷ ಜನರಿಗೆ ಮನೆಗಳನ್ನು ನಿರ್ಮಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಆದರೆ ಅದು ಅಷ್ಟು ಸುಲಭವಾಗಿ ಆಗುವಂತೆ ಕಾಣುತ್ತಿಲ್ಲ. ಮಾರ್ಚ್ನಲ್ಲಿ ಪ್ರಾಜೆಕ್ಟ್ ತನ್ನ ಸಮೀಕ್ಷೆಯನ್ನು ಪ್ರಾರಂಭಿಸಿತು. ಏಳು ವರ್ಷಗಳಲ್ಲಿ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಿದೆ. ಮುಂಬೈ ದೇಶದ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಗಗನಕ್ಕೇರುತ್ತಿವೆ. ಭೂಮಿಯನ್ನು ಹುಡುಕುವುದು ತುಂಬಾ ಕಷ್ಟಕರವಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಧಾರಾವಿಯನ್ನು ಪುನರಾಭಿವೃದ್ಧಿ ಮಾಡುವುದು ತುಂಬಾ ಸವಾಲಿನ ಕೆಲಸ ಎಂದು ಅದಾನಿ ಗ್ರೂಪ್ ಒಪ್ಪಿಕೊಂಡಿದೆ. ಆದರೆ ಭವಿಷ್ಯದಲ್ಲಿ ಕೋಟ್ಯಾಧಿಪತಿಗಳು ಈ ಪ್ರದೇಶದಲ್ಲಿ ವಾಸಿಸುತ್ತಾರೆ ಎಂದು ಬೀರಾ ಭವಿಷ್ಯ ನುಡಿದಿದ್ದಾರೆ.
Leave a reply