ಕೊಪ್ಪ : ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿರುವ ಆರ್ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ 31 ವರ್ಷ ವಯಸ್ಸಿನ ಮಹಿಳಾ ಡಾಕ್ಟರ್ ಮೇಲೆ ನಡೆದ ಅತ್ಯಂತ ಕ್ರೂರವಾದ ಅತ್ಯಾಚಾರ ಮತ್ತು ಕೊಲೆ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯನ್ನು ವಿರೋಧಿಸಿ ಕಳೆದ ಎಂಟು ದಿನಗಳಿಂದ ವೈದ್ಯರು ದೊಡ್ಡ ಮಟ್ಟದ ಮುಷ್ಕರ ನಡೆಸುತ್ತಿದ್ದಾರೆ. ಸಂತ್ರಸ್ತ ವೈದ್ಯಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಕರ್ತವ್ಯ ಬಹಿಷ್ಕರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಘಟನೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಕರೆ ಮೇರೆಗೆ ವೈದ್ಯರು ಇಂದು 24 ಗಂಟೆಗಳ ಕಾಲ ದೇಶಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. ಆದ್ದರಿಂದ ದೇಶಾದ್ಯಂತ ವೈದ್ಯಕೀಯ ಸೇವೆ ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವಂತಾಗಿದೆ.
https://www.facebook.com/share/v/XCjRoSiHeNhLA6Bz/?mibextid=oFDknk

ಕೊಪ್ಪದಲ್ಲಿ ಇಂದು ಎಲ್ಲಾ ಡಾಕ್ಟರ್ ಗಳು ಒಗ್ಗೂಡಿ ಆಸ್ಪತ್ರೆಗಳನ್ನು ಬಂದ್ ಮಾಡಿ, ಕೊಪ್ಪ ವಾಟರ್ ಟ್ಯಾಂಕ್ ಸರ್ಕಲ್ ನಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮಾನವ ಸರಪಳಿ ನಿರ್ಮಿಸಿದರು. ನಂತರ ಬಹಿರಂಗ ಸಭೆ ನಡೆಸಿ ಸಂತ್ರಸ್ತ ವೈದ್ಯೆಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು. ರೇಪಿಸ್ಟ್ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. “ನಾಡಿ ನೋಡುವ ಕೈಗಳಿಗೆ ನೀಡಿ ಅಭಯ!” “ಹೆಣ್ಣಿನ ಮೇಲಿನ ಕ್ರೌರ್ಯತೆ ನಿಲ್ಲಲಿ!” “ಧಿಕ್ಕಾರವಿರಲಿ ಅನ್ಯಾಯಕ್ಕೆ, ಅತ್ಯಾಚಾರಕ್ಕೆ!” “ಇಂದು ಕೊಲ್ಕತ್ತಾದಲ್ಲಿ ನಾಳೆ ಆಗದಿರಲಿ ಕೊಪ್ಪದಲ್ಲಿ!” ಎಂಬಿತ್ಯಾದಿ ಘೋಷಣೆಗಳನ್ನು ಡಾಕ್ಟರ್ ಗಳು ಒಕ್ಕೊರಲಿನಿಂದ ಕೂಗಿದರು.
https://www.facebook.com/share/v/p3GXEfJgR1wfFo4z/?mibextid=oFDknk

Leave a reply