ನ್ಯೂಡೆಲ್ಲಿ : ದೇಶದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಿದೆ. ಅಂಕಿಅಂಶಗಳ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಒತ್ತಡದ ಸಾವುಗಳನ್ನು ಹೊಂದಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್ಸಿಆರ್ಬಿ) ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, 2022 ರಲ್ಲಿ ದೇಶದಲ್ಲಿ 1.71 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು 2021 ಕ್ಕಿಂತ ಶೇ. 4.2 ಮತ್ತು 2018 ಕ್ಕಿಂತ ಶೇ. 27 ರಷ್ಟು ಹೆಚ್ಚು. ಹಿಂದೆಂದೂ ಇಲ್ಲದಷ್ಟು ಲಕ್ಷ ಜನಸಂಖ್ಯೆಗೆ ಆತ್ಮಹತ್ಯೆ ಪ್ರಮಾಣದ ದರ 12.4 ಎಂದು ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಈಗ ದೇಶ ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಎಂದು ಕರೆಯಲಾಗುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಆತ್ಮಹತ್ಯೆ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚಿಸಿದೆ.
ದೇಶದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳಿಗೆ ಮಾನಸಿಕ ಸಮಸ್ಯೆಗಳೇ ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಕೆಲಸ, ಹಣಕಾಸು, ಆರೋಗ್ಯ ಮತ್ತು ಕುಟುಂಬ ಸಂಬಂಧಗಳಂತಹ ಸಮಸ್ಯೆಗಳಿಂದ ಪ್ರಾರಂಭವಾಗುವ ಒತ್ತಡವು ಕ್ರಮೇಣ ಮನುಷ್ಯನನ್ನು ದುರ್ಬಲಗೊಳಿಸುತ್ತಿದೆ ಎಂದು ಅಭಿನಯದ ಪಟ್ಟಿದ್ದಾರೆ. ಮಾನಸಿಕ ಒತ್ತಡದಿಂದ ಪ್ರಾರಂಭವಾಗಿ ಆತಂಕ ಮತ್ತು ಖಿನ್ನತೆಗೆ ತಿರುಗಿ, ಅದು ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದು ಇನ್ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿಕ್ ಅಂಡ್ ಬಿಹೇವಿಯರಲ್ ಸೈನ್ಸ್ ನ ವೈಸ್ ಚೈರ್ ಪರ್ಸನ್ ರಾಜೀವ್ ಮೆಹತಾ ಹೇಳಿದರು.
ಈಗ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎದುರಿಸುತ್ತಿರುವ ದೊಡ್ಡ ಬಿಕ್ಕಟ್ಟು ಆತ್ಮಹತ್ಯೆಗಳೇ ಆಹಿವೆ. ಯುವಕರ ಸಾವಿಗೆ ಇದು ಪ್ರಮುಖ ಕಾರಣವಾಗಿದೆ. ತೀವ್ರ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆರ್ಥಿಕ ಸಂಕಷ್ಟ, ಆರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಬಡವರೇ ಹೆಚ್ಚು ಹಿಂಸಾತ್ಮಕ ಸಾವುಗಳಿಗೆ ಬಲಿಯಾಗುತ್ತಿದ್ದಾರೆ. ಒಂಟಿತನವೂ ಒಂದು ಪ್ರಮುಖ ಅಂಶವಾಗಿದೆ ಎಂದು ಶ್ಯಾಮ್ ಭಟ್ ಚೈರ್ ಪರ್ಸನ್ ಹೇಳಿದ್ದಾರೆ.
Leave a reply