ಚಿಕ್ಕಮಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಲವು ದಿನಗಳಿಂದ ರಾಜ್ಯ ಗ್ರಾಮ ಪಂಚಾಯಿತ ಸ್ವಚ್ಚತಾವಾಹಿನಿ ಡ್ರೈವರ್ ಗಳು ಮತ್ತು ಸಹಾಯಕಿಯರ ಜಿಲ್ಲಾ ಸಂಘದ ಮಹಿಳೆಯರು ನಗರದ ಜಿಲ್ಲಾ ಪಂಚಾಯಿತಿ ದ್ವಾರದ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಚಾಲಕರಾದ ಡಿ.ಎಂ.ಮಲಿಯಪ್ಪ ಮಾತನಾಡಿ.. ಸ್ವಚ್ಚತಾವಾಹಿನಿ ಮಹಿಳಾ ಕಾರ್ಮಿಕರು ಕಸವಿಲೇವಾರಿ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಸವನ್ನು ಬೇರ್ಪಡಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ನಂತರ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಸಿ ಓ ಮಧ್ಯೆ ಪ್ರವೇಶಿಸಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಸ್ವಚ್ಛ ವಾಹಿನಿ ಡ್ರೈವರ್ ಗಳಿಗೆ 15ನೇ ಹಣಕಾಸಿನಲ್ಲಿ ವೇತನ ಕೊಡಲು ಎಲ್ಲಾ ಪಿಡಿಒಗಳಿಗೆ ಇ ಓ ಗಳಿಗೆ ಆದೇಶ ಮಾಡಲಾಯಿತು. ಹಾಗೂ ತರಬೇತಿ ಪಡೆದ ಎಲ್ಲರಿಗೂ ಆಟೋ ನೀಡಬೇಕು. ಕೆಟ್ಟು ಹೋದ ಎಲ್ಲಾ ಗಾಡಿಗಳು ರಿಪೇರಿ ಮಾಡಿ ಒಂದು ವಾರದೊಳಗೆ ಕೊಡಬೇಕು. ಕಸದ ಗಾಡಿಗೂ ಕೂಡ ಇನ್ಸೂರೆನ್ಸ್ ಮಾಡಿಸಬೇಕು. ಬಾಕಿ ಉಳಿಸಿಕೊಂಡಿರುವ ವೇತನವನ್ನು ನೀಡಬೇಕು. ಒಂದು ವಾರದೊಳಗೆ ಮಾಡದಿದ್ದರೆ ಪಿಡಿಒಗಳ ಮೇಲೆ ಕ್ರಮ ಜರುಗಿಸುವ ಆದೇಶವನ್ನು ಸಿದ್ಧಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಡಿ ಎಂ ಮಾಲಿಯಪ್ಪ ಸರ್ಕಾರಿ ಆದೇಶಗಳನ್ನು ಬಿಡಿಸಿ ವಿವರಿಸಿ ಅಧಿಕಾರಿಗಳಿಗೆ ತಿಳಿಸಿದರು. ಸಿಓ ಮಧ್ಯೆ ಪ್ರವೇಶಿಸಿ ಮಾತನಾಡಿದ್ದರಿಂದ ಈ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ಈ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಸಂಚಾರಕರಾದ ಮಮತಾ, ತನುಜ, ಶ್ವೇತಾ, ಜ್ಯೋತಿ, ಶಾಂತಾ, ಮಂಜುಳಾ, ಲತಾ, ರಶ್ಮಿ, ಪ್ರಮೀಳಾ, ಮಾನಸ, ವೀಣಾ ಮುಂತಾದವರು ಉಪಸ್ಥಿತರಿದ್ದರು.
Leave a reply