ನ್ಯೂಡೆಲ್ಲಿ : ಪ್ರಸ್ತುತ ಆಡಳಿತಾರೂಢ ಕೇಂದ್ರ ಸರ್ಕಾರವನ್ನು ಅಪಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದ್ದಕ್ಕಾಗಿ ಎಎನ್ಐ ವಿಕಿಪೀಡಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದೆ. ವಿಕಿಪೀಡಿಯಾ ತನ್ನ ಲೇಖನದಲ್ಲಿ ಏಷ್ಯನ್ ನ್ಯೂಸ್ ಇಂಟರ್ನ್ಯಾಶನಲ್ (ANI) “ಕೇಂದ್ರ ಸರ್ಕಾರದ ಪ್ರಚಾರಕನಂತೆ ಕಾರ್ಯನಿರ್ವಹಿಸುತ್ತಿದೆ. ಅದರ ಅತಿದೊಡ್ಡ ಜಾಲದಿಂದ ಪ್ರಚಾರ ಸಾಮಗ್ರಿಗಳನ್ನು ಒದಗಿಸುತ್ತಿದೆ. ಮತ್ತು ಸುಳ್ಳು ವರದಿ ಮಾಡಿದೆ” ಎಂದು ಎಎನ್ಐ ಆರೋಪಿಸಿದೆ. ಇದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಿದ್ದು, ಪರಿಹಾರವಾಗಿ ರೂ. 2 ಕೋಟಿ ಬೇಡಿಕೆ ಇಟ್ಟಿದೆ.
ಎಎನ್ಐ ಪರವಾಗಿ ವಕೀಲ ಸಿದ್ದಾಂತ್ ಕುಮಾರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರು ವಿಕಿಪೀಡಿಯಾದ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸು ‘ವಿಕಿಪೀಡಿಯಾಗೆ ತನ್ನದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ’ ಎಂದು ಹೇಳಿದರು. ಆದರೆ, ದೆಹಲಿ ಹೈಕೋರ್ಟ್ ವಿಕಿಪೀಡಿಯಾಕ್ಕೆ ಸಮನ್ಸ್ ಜಾರಿ ಮಾಡಿದ್ದು, ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಬೇಕೆಂದು ಕೋರಿದೆ. ನ್ಯಾಯಾಲಯ ವಿಕಿಪೀಡಿಯಾದ ವಾದವನ್ನು ಆಲಿಸಲಿದೆ. ಈ ಪ್ರಕರಣದ ಕುರಿತು ಆಗಸ್ಟ್ 20 ರಂದು ವಿಚಾರಣೆ ನಡೆಸಲಿದೆ.
Leave a reply