ತ್ರಿಪುರ : ತ್ರಿಪುರ ರಾಜ್ಯದಲ್ಲಿ ಎಚ್ಐವಿ ಸೋಂಕು ತಲ್ಲಣ ಮೂಡಿಸುತ್ತಿದೆ. ಈ ಕಾಯಿಲೆಯಿಂದ 47 ಮಂದಿ ವಿದ್ಯಾರ್ಥಿಗಳು ಎಚ್ಐವಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸುಮಾರು 828 ಮಂದಿ ವಿದ್ಯಾರ್ಥಿಗಳಲ್ಲಿ ಎಚ್ಐವಿ ಪಾಸಿಟಿವ್ ಕಂಡುಬಂದಿದೆ ಎಂದು ತ್ರಿಪುರಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 828 ಎಚ್ಐವಿ ಪಾಸಿಟಿವ್ ವಿದ್ಯಾರ್ಥಿಗಳ ಪೈಕಿ 572 ಮಂದಿ ಜೀವಂತವಾಗಿದ್ದಾರೆ ಎಂದು ಹೇಳಲಾಗಿದೆ. ಪ್ರತಿದಿನ 5ರಿಂದ 7 ಹೊಸ ಪ್ರಕರಣಗಳು ದಾಖಲಾಗುತ್ತಿರುವುದು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಒಟ್ಟು ಎಚ್ಐವಿ ಪೀಡಿತರ ಸಂಖ್ಯೆ 5,674 ರಷ್ಟಿದೆ ಎಂದರು. ಇವರಲ್ಲಿ 4,570 ಪುರುಷರು, 1,103 ಮಹಿಳೆಯರು ಮತ್ತು ಒಬ್ಬರು ಸಲಿಂಗಕಾಮಿಗಳಿಗೆ ಇದೆ ಎಂದರು. ಎಚ್ ಐವಿ ಪ್ರಕರಣಗಳು ಹೆಚ್ಚಾಗಲು ಮಾದಕ ವಸ್ತುಗಳ ಸೇವನೆಯೇ ಕಾರಣ. ಇದುವರೆಗೆ ರಾಜ್ಯಾದ್ಯಂತ 220 ಶಾಲೆಗಳ, 24 ಕಾಲೇಜುಗಳ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್ ಚುಚ್ಚುಮದ್ದು ತೆಗೆದುಕೊಳ್ಳುತ್ತಿರುವುದನ್ನು ಗುರುತಿಸಿರುವುದಾಗಿ ತಿಳಿಸಿದ್ದಾರೆ.
ತ್ರಿಪುರಾ ಜರ್ನಲಿಸ್ಟ್ ಯೂನಿಯನ್, ವೆಬ್ ಮೀಡಿಯಾ ಫೋರಮ್ ಮತ್ತು ಟಿಎಸ್ಎಸಿಎಸ್ ಜಂಟಿಯಾಗಿ ಇತ್ತೀಚೆಗೆ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಟಿಎಸ್ಎಸಿಎಸ್ನ ಜಂಟಿ ನಿರ್ದೇಶಕರು, ‘ಇದುವರೆಗೆ 828 ಮಂದಿ ಎಚ್ಐವಿ ಸೋಂಕಿತ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅವರಲ್ಲಿ 572 ಮಂದಿ ವಿದ್ಯಾರ್ಥಿಗಳು ಜೀವಂತವಾಗಿದ್ದಾರೆ. ಈ ಸೋಂಕಿನಿಂದ 47 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ತ್ರಿಪುರಾದಿಂದ ಹೊರಗಿರುವ ಪ್ರತಿಷ್ಠಿತ ಸಂಸ್ಥೆಗಳಿಗೆ ವಲಸೆ ಹೋಗುತ್ತಾರೆ. ಇಲ್ಲಿಯವರೆಗೆ 220 ಶಾಲೆಗಳು, 24 ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳು ಮಾದಕ ದ್ರವ್ಯಗಳನ್ನು ಬಳಸುತ್ತಿರುವುದನ್ನು ಪತ್ತೆಹಚ್ಚಿವೆ. ರಾಜ್ಯಾದ್ಯಂತ ಒಟ್ಟು 164 ಆರೋಗ್ಯ ಕೇಂದ್ರಗಳಿಂದ ನಾವು ಈ ಡೇಟಾವನ್ನು ಸಂಗ್ರಹಿಸಿದ್ದೇವೆ ಎಂದರು.
Leave a reply