ನ್ಯೂಡೆಲ್ಲಿ : ರಾಜ್ಯಸಭೆಯಲ್ಲಿ ಟೀಕೆಗಳು, ಪ್ರತ್ಯಾರೋಪಗಳಿಂದ ವಾತಾವರಣ ಬಿಸಿಯಾಗಿತ್ತು. ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಶ್ವವಿದ್ಯಾಲಯಗಳು ಮತ್ತು ಎನ್ಸಿಇಆರ್ಟಿಯಂತಹ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಎಸ್ಎಸ್ ತನ್ನ ವ್ಯಕ್ತಿಗಳನ್ನು ಉಪಕುಲಪತಿಗಳು ಮತ್ತು ಪ್ರಾಧ್ಯಾಪಕರನ್ನಾಗಿ ಸೇರಿಸುತ್ತಿದೆ ಎಂದು ಆರೋಪಿಸಿದರು. ದೇಶದಲ್ಲಿರುವ ಎಲ್ಲಾ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಒಂದು ಸಂಘಟನೆ (ಆರ್ಎಸ್ಎಸ್) ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಟೀಕಿಸಿದರು.
ಆರ್ಎಸ್ಎಸ್ ಮತ್ತು ಬಿಜೆಪಿ ಕೈಜೋಡಿಸಿ ದೇಶದಲ್ಲಿರುವ ಪ್ರಮುಖ ಸಂಸ್ಥೆಗಳನ್ನು ನಾಶ ಮಾಡುತ್ತಿದೆ ಎಂದು ಖರ್ಗೆ ದೂರಿದರು. ಖರ್ಗೆ ಅವರ ಹೇಳಿಕೆಗೆ ಎನ್ಡಿಎ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಸಭಾ ಸಭಾಪತಿ ಜಗದೀಪ್ ಧನಕಡ್ ಕೂಡ ಖರ್ಗೆ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಹಿಂದೆ ಸರಿಯದ ಖರ್ಗೆ, ಆ ಬಳಿಕವೂ ಟೀಕೆಗಳ ದಾಳಿಯನ್ನು ಮುಂದುವರಿಸಿದ ಅವರು, ಆರ್ಎಸ್ಎಸ್ ಸಿದ್ಧಾಂತ ದೇಶಕ್ಕೆ ಅಪಾಯಕಾರಿ ಎಂದರು.
Leave a reply