NEET-UG 2024 ರ ಅಂಕಗಳ ಲೆಕ್ಕಾಚಾರವನ್ನು ಮನಸ್ಸೋಇಚ್ಚೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಿತು. ಮತ್ತು NTA (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಗೆ ನೋಟಿಸ್ ನೀಡಿದೆ. ಜುಲೈ 8ರೊಳಗೆ ಉತ್ತರಿಸುವಂತೆ ಆದೇಶಿಸಿದೆ. NEET-UG 2024 ರ ಉಳಿದ ಅರ್ಜಿಗಳೊಂದಿಗೆ ಅದೇ ದಿನ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ. ಅಂಕಗಳ ಲೆಕ್ಕಾಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಹಾಜರಾದ ಹಲವರಿಗೆ ಒಎಂಆರ್ ಶೀಟ್ ಸಿಕ್ಕಿಲ್ಲ ಎಂದು ಅರ್ಜಿ ಸಲ್ಲಿಸಿರುವ ಲರ್ನಿಂಗ್ ಆ್ಯಪ್ ತಿಳಿಸಿದೆ.
ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎಸ್ವಿಎನ್ ಭಟ್ಟಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ನಲ್ಲಿ ವಾದವನ್ನು ಆಲಿಸಿತು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಒಎಂಆರ್ ಶೀಟ್ ನೀಡಲು ಟೈಂ ಲೈನ್ ಏನಾದರು ಇಟ್ಟುಕೊಂಡಿದ್ದರೆ ಅದನ್ನು ತಿಳಿಸಿ’ ಎಂದು ಹೇಳಿದೆ. ಈ ಬಗ್ಗೆ ಎನ್ ಟಿಎ ಪ್ರತಿಕ್ರಿಯೆ ನೀಡಲಿ.. ಎಂದು ಹೇಳಿದೆ. ಅದೇ ಸಮಯದಲ್ಲಿ, ಕೋಚಿಂಗ್ ಸೆಂಟರ್ಗಳು ಅರ್ಜಿಗಳನ್ನು ಸಲ್ಲಿಸುವುದನ್ನು ಸಹ ನ್ಯಾಯಾಲಯ ಪ್ರಶ್ನಿಸಿದೆ. ಕೋಚಿಂಗ್ ಸೆಂಟರ್ಗಳ ಕಡೆಯಿಂದ ಇದು 32 ನೇ ಅರ್ಜಿಯಾಗಿದ್ದು, ನಿಮ್ಮ ಮೂಲಭೂತ ಹಕ್ಕುಗಳಿಗೆ ಏನು ಉಲ್ಲಂಘನೆಯಾಗಿದೆ ಎಂದು ಪೀಠ ಪ್ರಶ್ನಿಸಿದೆ.
Leave a reply