ನ್ಯೂಡೆಲ್ಲಿ : ಬೂಕರ್ ಪ್ರಶಸ್ತಿ ಪುರಸ್ಕೃತೆ ಮತ್ತು ಖ್ಯಾತ ಲೇಖಕಿ ಅರುಂಧತಿ ರಾಯ್ ಅವರು ಪ್ರತಿಷ್ಠಿತ ಪೆನ್ ಪಿಂಟರ್ ಪ್ರಶಸ್ತಿ-2024 ಅನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಸ್ತುತ 14 ವರ್ಷಗಳ ಹಿಂದೆ ಕಾಶ್ಮೀರದ ಕುರಿತು ನೀಡಿದ ಹೇಳಿಕೆಯಿಂದಾಗಿ ಕಾನೂನು ಕ್ರಮವನ್ನು ಎದುರಿಸುತ್ತಿರುವ ಅವರನ್ನು ಪೆನ್ ಪಿಂಟರ್ ಪ್ರಶಸ್ತಿ ವಿಜೇತೆ ಎಂದು ಹಲವರು ಅವರನ್ನು ಪ್ರಶಂಸಿಸುತ್ತಿದ್ದಾರೆ.
ಇಂಗ್ಲಿಷ್ ಪೆನ್ ಚೇರ್ಮನ್ ರೂತ್ ಬೋರ್ತ್ವಿಕ್ ಅವರು ಮಾತನಾಡುತ್ತಾ… ಅರುಂಧತಿ ರಾಯ್ ಅಂತರರಾಷ್ಟ್ರೀಯ ಚಿಂತಕಿ ಮತ್ತು ಅವರ ಶಕ್ತಿಯುತ ಧ್ವನಿಯನ್ನು ಮೌನಗೊಳಿಸಬಾರದು ಎಂದರು.
ಪರಿಸರ ಮತ್ತು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಅರುಂಧತಿ ರಾಯ್ ಅವರ ಕಾರ್ಯವನ್ನು ಪ್ರಶಸ್ತಿ ಸಮಿತಿ ಶ್ಲಾಘಿಸಿದೆ. ತೀರ್ಪುಗಾರರ ಸದಸ್ಯ ಖಾಲಿದ್ ಅಬ್ದುಲ್ಲಾ ಮಾತನಾಡಿ, ಅರುಂಧತಿ ರಾಯ್ ಅವರು ಸ್ವಾತಂತ್ರ್ಯ ಮತ್ತು ನ್ಯಾಯದ ಧ್ವನಿಯಾಗಿದ್ದಾರೆ. ಜಗತ್ತು ಬಿಕ್ಕಟ್ಟಿನ ಕರಾಳ ಹಂತದಲ್ಲಿದ್ದಾಗ ಅವರು ನಕ್ಷತ್ರವಾಗಿ ನಿಂತರು ಎಂದರು.
ಅರುಂಧತಿ ರಾಯ್ ಪ್ರತಿಕ್ರಿಯಿಸಿ “ಪೆನ್ ಪಿಂಟರ್ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಸಂತೋಷವಾಗಿದೆ. ಜಗತ್ತು ತೆಗೆದುಕೊಳ್ಳುತ್ತಿರುವ ಬಹುತೇಕ ಅಗ್ರಾಹ್ಯ ತಿರುವಿನ ಬಗ್ಗೆ ಬರೆಯಲು ಹೆರಾಲ್ಡ್ ಪಿಂಟರ್ ಇಂದು ನಮ್ಮೊಂದಿಗಿದ್ದಾರೆಂದು ನಾನು ಭಾವಿಸುತ್ತೇನೆ.” ಎಂದರು.
ಈ ಹಿಂದೆ ಪಿಂಟರ್ ಪ್ರಶಸ್ತಿಯನ್ನು ಪಡೆದವರಲ್ಲಿ ಸಲ್ಮಾನ್ ರಶ್ದಿ, ಮಾರ್ಗರೇಟ್ ಅಟ್ವುಡ್, ಟಾಮ್ ಸ್ಟಾಪರ್ಡ್ ಮತ್ತು ಕರೋಲ್ ಆನ್ ಡಫಿ ಸೇರಿದ್ದಾರೆ. ಅಕ್ಟೋಬರ್ 10, 2024 ರಂದು ಬ್ರಿಟಿಷ್ ಲೈಬ್ರರಿ ಸಹ-ಹೋಸ್ಟ್ ಮಾಡುವ ಸಮಾರಂಭದಲ್ಲಿ ರಾಯ್ ಅವರು ಈ ಬಹುಮಾನವನ್ನು ಸ್ವೀಕರಿಸುತ್ತಾರೆ. ಅರುಂಧತಿ ರಾಯ್ ತಮ್ಮ ಮೊದಲ ಕಾದಂಬರಿ ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಮೂಲಕ ಪ್ರಸಿದ್ಧರಾದರು.
Leave a reply