- ಇಸ್ರೇಲ್ ನಲ್ಲಿ ನೆತನ್ಯಾಹು ವಿರುದ್ಧ ಇಸ್ರೇಲಿ ಜನರ ಪ್ರತಿಭಟನೆ…
- ಲಕ್ಷಾಂತರ ಜನರ ರ್ಯಾಲಿ…
ಟೆಲ್ ಅವೀವ್ : ಗಾಜಾದಲ್ಲಿ ನಡೆಯುತ್ತಿರುವ ಮಾರಣಹೋಮದಿಂದ ಇಸ್ರೇಲ್ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ ನಂತರ ಇಸ್ರೇಲಿ ಜನರು ಬೃಹತ್ ಯುದ್ಧ-ವಿರೋಧಿ ರ್ಯಾಲಿ ನಡೆಸಿದರು. 37 ಸಾವಿರ ಜನರನ್ನು ಅತ್ಯಂತ ಕ್ರೂರವಾಗಿ ಕೊಂದ ನೆತನ್ಯಾಹು ನಿನ್ನ ರಕ್ತದ ದಾಹ ಇನ್ನೂ ತೀರಲಿಲ್ಲವೇ ಎಂದು ಅವರು ಘೋಷಣೆ ಕೂಗಿದರು. ಟೆಲ್ ಅವೀವ್ನಲ್ಲಿ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಇಸ್ರೇಲಿಗರು ನೆತನ್ಯಾಹು ಪ್ರೈಂ ಮಿನಿಸ್ಟರ್ ಅಲ್ಲ, ಕ್ರೈಂ ಮಿನಿಸ್ಟರ್ ಎಂಬ ಬ್ಯಾನರ್ನೊಂದಿಗೆ ರ್ಯಾಲಿ ನಡೆಸಿದರು. ಈ ರ್ಯಾಲಿಯಲ್ಲಿ ಸುಮಾರು ಒಂದೂವರೆ ಲಕ್ಷ ಜನ ಭಾಗವಹಿಸಿದ್ದು ಗಮನಾರ್ಹ.
ನೆತನ್ಯಾಹು ಅವರಂತಹ ಕೆಟ್ಟ ಪ್ರಧಾನಿಯನ್ನು ನಾನು ಎಂದೂ ನೋಡಿಲ್ಲ ಎಂದು ಭದ್ರತಾ ಪಡೆಗಳ ಮಾಜಿ ಮುಖ್ಯಸ್ಥ ಇವಾನ್ ಡಿಸ್ಕಿನ್ ಅವರು ಹೇಳಿದರು, ದೇಶದ ಭವಿಷ್ಯತ್ತಿಗಾಗಿ ಈ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ಬಂದಿರುವುದಾಗಿ ತಿಳಿಸಿದರು. ನೆತನ್ಯಾಹು ಸರ್ಕಾರವನ್ನು ಉರುಳಿಸದಿದ್ದರೆ, ಇಂದಿನ ಪೀಳಿಗೆಗೆ ಮಾತ್ರವಲ್ಲ ಮುಂದಿನ ಪೀಳಿಗೆಗೆ ಭವಿಷ್ಯವಿಲ್ಲ. ಎಂದು 66 ವರ್ಷದ ಪಾರು ಎರೆಲ್ ಹೇಳಿದ್ದಾರೆ.
ನೆತನ್ಯಾಹು ಆಡಳಿತಾವಧಿಯಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಸತ್ತುಹೋಗುತ್ತಿದೆ ಎಂದು ಟೆಲ್ ಅವೀವ್ನಲ್ಲಿರುವ ಡೆಮಾಕ್ರಸಿ ಸ್ಕ್ವೇರ್ಗೆ ರಕ್ತದ (ಕೆಂಪು) ಬಣ್ಣ ಬಳಿದು ಪ್ರತಿಭಟನೆ ವ್ಯಕ್ತಪಡಿಸಿದರು. ನೆತನ್ಯಾಹು ಕೂಡಲೇ ಗದ್ದುಗೆಯಿಂದ ಕೆಳಗಿಳಿದು ಇಸ್ರೇಲ್ ಸಂಸತ್ತಿಗೆ ಚುನಾವಣೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಗಾಜಾ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಹಮಾಸ್ನಿಂದ ಒತ್ತೆಯಾಳಾಗಿದ್ದವರ ಕುಟುಂಬ ಸದಸ್ಯರು ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು.
Leave a reply