
ಬೆಂಗಳೂರು : ಕೋಲಾರ ಚಿನ್ನದ ಗಣಿ (ಕೆಜಿಎಫ್) ಪುನಶ್ಚೇತನ ಮತ್ತು ಗಣಿಗಾರಿಕೆ ಪುನರಾರಂಭಿಸಬೇಕೆಂಬ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಕೋಲಾರದ ಗಣಿಗಳಿಂದ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿಜಿಎಂಎಲ್) ಕೊರೆದ 3.3 ಕೋಟಿ ಟನ್ ಮಣ್ಣಿನಿಂದ ಚಿನ್ನವನ್ನು ಪುನಃ ಬೇರ್ಪಡಿಸುವ ಯೋಜನೆಯನ್ನು ಸಿದ್ದಗೊಳಿಸಿದೆ. 1,003.4 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿರುವ 13 ಗಣಿಗಳಿಂದ ಚಿನ್ನವನ್ನು ರಿಕವರಿ ಮಾಡಲು ಪ್ರಯತ್ನಿಸುತ್ತಿದೆ.

ಈಗಿನ ಲೆಕ್ಕಾಚಾರದ ಪ್ರಕಾರ ಒಂದು ಟನ್ ಮಣ್ಣಿನಿಂದ ಒಂದು ಗ್ರಾಂ ಚಿನ್ನ ಸಿಗುತ್ತದೆ. ಬಿಜಿಎಂಎಲ್ ಕಂಪನಿಗೆ ಸೇರಿದ 2,330 ಎಕರೆ ಭೂಮಿಯನ್ನು ವಶಪಡಿಸಿಕೊಂಡ ನಂತರ, ಕರ್ನಾಟಕ ಸರ್ಕಾರವು ಕೈಗಾರಿಕಾ ಟೌನ್ಶಿಪ್ ಸ್ಥಾಪಿಸಲು ಅನುಮತಿ ಕೇಳಿತು. ಚಿನ್ನದ ಗಣಿ ಕಂಪನಿಯು ಸರ್ಕಾರಕ್ಕೆ ನೀಡಬೇಕಿದ್ದ ರೂ.724 ಕೋಟಿಗೆ ಬದಲಾಗಿ ಕರ್ನಾಟಕ ಸರ್ಕಾರ ಈ ಅನುಮತಿಯನ್ನು ಕೋರಿದೆ.

Leave a reply