ಮುಂಬಯಿ : ಸ್ಕಿಟ್ (ನಾಟಕ) ಹೆಸರಿನಲ್ಲಿ ರಾಮಾಯಣವನ್ನು ಅಣಕಿಸಿದ್ದಾರೆಂದು ಎಂಟು ಮಂದಿ ವಿದ್ಯಾರ್ಥಿಗಳಿಗೆ ಐಐಟಿ ಬಾಂಬೆ ದಂಡ ವಿಧಿಸಿದೆ. ನಾಲ್ವರು ವಿದ್ಯಾರ್ಥಿಗಳಿಗೆ ತಲಾ 1.2 ಲಕ್ಷ ರೂಪಾಯಿ, ಇನ್ನೂ ನಾಲ್ವರಿಗೆ ತಲಾ 40,000 ರೂಪಾಯಿ ಪಾವತಿಸುವಂತೆ ಆದೇಶ ನೀಡಿದೆ. ಈ ದಂಡ ಅವರ ಸೆಮಿಸ್ಟರ್ ಶುಲ್ಕಕ್ಕೆ ಸಮ ಎಂಬುದು ಗಮನಾರ್ಹ. ಮ್ಯಾನೇಜ್ಮೆಂಟ್ ನೀಡುವ ಜಿಮ್ಖಾನಾ ಪ್ರಶಸ್ತಿಗಳಿಂದ ಗ್ರಾಜುಯೇಟ್ ವಿದ್ಯಾರ್ಥಿಗಳನ್ನು ನಿರ್ಬಂಧಿಸುವುದು. ಮತ್ತು ಜೂನಿಯರ್ ವಿದ್ಯಾರ್ಥಿಗಳನ್ನು ಹಾಸ್ಟೆಲ್ಗಳಿಂದ ಡಿಬಾರ್ ಮಾಡುವಂತಹ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಿದೆ.
ಇನ್ಸ್ಟಿಟ್ಯೂಟ್ ಗೆ ಸೇರಿದ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್ (ಪಿಎಎಫ್) ಸಂದರ್ಭದಲ್ಲಿ ಮಾರ್ಚ್ 31 ರಂದು ರಾಮಾಯಣವನ್ನು ಸ್ಕಿಟ್ (ನಾಟಕ) ರೂಪದಲ್ಲಿ ವಿಧ್ಯಾರ್ಥಿಗಳು ಪ್ರದರ್ಶಿಸಿದರು. ಈ ಸ್ಕಿಟ್ ಬಗ್ಗೆ ಇನ್ನೊಂದು ವಿಧ್ಯಾರ್ಥಿಗಳ ಗುಂಪು ದೂರು ನೀಡಿದೆ. ಅವರು ಹಿಂದೂ ಮಹಾಕಾವ್ಯ ರಾಮಾಯಣವನ್ನು ಅವಮಾನಿಸಿದ್ದಾರೆ. ಮತ್ತು ಹಿಂದೂ ಧರ್ಮದ ನಂಬಿಕೆಗಳು ಮತ್ತು ದೇವತೆಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
“ಸ್ತ್ರೀವಾದವನ್ನು ಉತ್ತೇಜಿಸುವ” ನೆಪದಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಅಪಹಾಸ್ಯ ಮಾಡಲಾಗಿದೆ ಎಂದು ಹೇಳಿದ್ದಾರೆ. ದೂರಿನ ಮೇರೆಗೆ ಶಿಸ್ತು ಸಮಿತಿಯು ಮೇ 8ರಂದು ವಿಚಾರಣೆ ಕೈಗೆತ್ತಿಕೊಂಡಿತ್ತು. ದಂಡವನ್ನು ಜೂನ್ 4 ರಂದು ವಿಧಿಸಲಾಗುವುದು ಎಂದು ಘೋಷಿಸಲಾಯಿತು. ಈ ದಂಡವನ್ನು ಜುಲೈ 20 ರೊಳಗೆ ವಿದ್ಯಾರ್ಥಿ ವ್ಯವಹಾರಗಳ ಡೀನ್ ಕಚೇರಿಯಲ್ಲಿ ಪಾವತಿಸಬೇಕು, ಉಲ್ಲಂಘಿಸಿದರೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಎಚ್ಚರಿಸಿದೆ.
Leave a reply