ನ್ಯೂಡೆಲ್ಲಿ : ಲೇಖಕಿ ಅರುಂಧತಿ ರಾಯ್ ವಿರುದ್ಧ ಯುಎಪಿಎಯಂತಹ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಅವಕಾಶ ನೀಡಿರುವುದನ್ನು ಸಿಪಿಎಂನ ದೆಹಲಿ ರಾಜ್ಯ ಸಮಿತಿಯು ಬಲವಾಗಿ ಖಂಡಿಸಿದೆ. 14 ವರ್ಷಗಳ ಹಿಂದಿನ ಪ್ರಕರಣದಲ್ಲಿ ಅನುಮತಿ ನೀಡಿರುವುದು ದುರುದ್ದೇಶಪೂರಿತ ಕೃತ್ಯ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಟೀಕಿಸಿದ್ದಾರೆ.
ಐಪಿಸಿಯ 124 ಎ, 153 ಎ, 153 ಬಿ, 504, 505 ಮತ್ತು 13 ಯುಎಪಿಎಯಂತಹ ಗಂಭೀರವಾದ ಸೆಕ್ಷನ್ಗಳ ಅಡಿಯಲ್ಲಿ ಮೊಕದ್ದಮೆಗೆ ಅವಕಾಶ ನೀಡುವ ಮೂಲಕ ಬಿಜೆಪಿ ಸರ್ಕಾರವು ಜನರ ಪ್ರಜಾತಾಂತ್ರಿಕ ಹಕ್ಕುಗಳ ಧ್ವನಿಯನ್ನು ಹೊಸಕಿ ಹಾಕುವ ಉದ್ದೇಶವನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಅರುಂಧತಿರಾಯ್ ಅವರ ಮೇಲೆ ಯುಎಪಿಎ ಸೆಕ್ಷನ್ ಅಡಿಯಲ್ಲಿ ಕ್ರಮ ಜರುಗಿಸಲು ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕೆಂದು ಸಿಪಿಎಂನ ದೆಹಲಿ ಶಾಖೆ ಒತ್ತಾಯಿಸಿತು.
14 ವರ್ಷಗಳ ಹಿಂದಿನ ಪ್ರಕರಣದಲ್ಲಿ ಲೇಖಕಿ ಅರುಂಧತಿ ರಾಯ್ ಮತ್ತು ಶಿಕ್ಷಣ ತಜ್ಞ ಶೇಖ್ ಶೌಕತ್ ಹುಸೇನ್ ಅವರನ್ನು ಯುಎಪಿಎ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಿದ ನಿರ್ಧಾರವನ್ನು ಸಫ್ದರ್ ಹಶ್ಮಿ ಸ್ಮಾರಕ ಟ್ರಸ್ಟ್ ಸಹಮತ್ ತೀವ್ರವಾಗಿ ಖಂಡಿಸಿದೆ. ಚುನಾವಣಾ ಫಲಿತಾಂಶದ ನಂತರ ಈ ರೀತಿ ಮಾಡಿರುವುದನ್ನು ನೋಡಿದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಪ್ರತೀಕಾರದ ಕ್ರಮ ಎಂದು ಟೀಕಿಸಲಾಗಿದೆ. ಅವಬ್ಬರಿಗೂ ಬೆಂಬಲ ನೀಡುವುದಾಗಿ ಘೋಷಿಸಿದರು. ಈ ಕ್ರಮದ ವಿರುದ್ಧ ಎಲ್ಲಾ ಪ್ರಜಾತಂತ್ರವಾದಿಗಳು ಧ್ವನಿ ಎತ್ತಬೇಕೆಂದು ವಿನಂತಿಸಲಾಗಿದೆ.
Leave a reply