ಮೋದಿಯ ಮೂರನೇ ಪ್ರಮಾಣ
ಕಳೆದೆರಡು ಬಾರಿಯಂತೆ
ಈ ಬಾರಿಯೂ
ಪ್ರಧಾನ ಮಂತ್ರಿಗಳು
ದ್ವೇಷ ಮತ್ತು ಅನುರಾಗ ರಹಿತ
ಸರ್ಕಾರ ನಡೆಸುವುದಾಗಿ
ಪ್ರಮಾಣ ಸ್ವೀಕರಿಸುತ್ತಿದ್ದಂತೆ…
ಅರ್ಥವರಿತ ಬುಲ್ದೊಜರುಗಳು
ಹೂಂಕರಿಸಿ ಮೇಲೆದ್ದಿವೆ ..
ಇಂಗಿತವರಿತ ಗೋರಕ್ಷಕರು
ಚತ್ತಿಸ್ ಘಡದಲ್ಲಿ ಕಾರ್ಯನಿರತರಾದರು ..
ಹಳೆಯ ಪ್ರಮಾಣವನ್ನೇ ಕೇಳಿಸಿಕೊಂಡ ಗುಡಿಸಲುಗಳು ಕಂಗಲಾಗಿವೆ …
ರಾಗಬಲ್ಲ ‘ಅಂಟಿಲಿಯ’ಗಳು
ಆನಂದದಿಂದ ತಲೆದೂಗಿವೆ ..
ಸಂವಿಧಾನ ಆಚರಿಸಿದ್ದಕ್ಕೆ
ಸೆರೆಮನೆ ಸೇರಿರುವ
ಉಮರ್ ಖಲೀದರು
ಪ್ರಮಾಣದ ಬಡಿವಾರ ಕಂಡು
ಗಹಗಹಿಸಿ ನಗುತ್ತಿದ್ದಾರೆ
ಆತ್ಮವನ್ನು ಕೊಂದುಕೊಂಡ
ಅರಮನೆ ಸೇರಿಕೊಂಡ
ಶೆಹ್ಲಾ ರಶೀದಾಗಳು …
ಆನಂದದ ಕಣ್ಣೀರಲ್ಲಿ
ಮೋದಿಯ ಪಾಪ ತೊಳೆಯುತ್ತಿದ್ದಾರೆ……
ಮತ್ತೆ ಅಯೋಧ್ಯೆಯಲ್ಲಿ
ಕೈ ಕೊಟ್ಟ ರಾಮಲಲ್ಲನಿಗೆ ಗಾಬರಿ…
ಅಲ್ಲಿ ಪುರಿಯಲ್ಲಿ…
ಕೈಹಿಡಿದ ಜಗನ್ನಾತನಿಗೂ
ಆತಂಕ…
ಮೋದಿ ಭಾರತದ
ಮೂರನೇ ಅಧ್ಯಾಯ ಪ್ರಾರಂಭವಾಗಿದೆ…
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply